
ನವದೆಹಲಿ: ನಟ, ಗಾಯಕ ಅರುಣ್ ಭಕ್ಷಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಕೇಂದ್ರ ಕಚೇರಿಯಲ್ಲಿ ಛತ್ತೀಸ್ ಗಡದ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಅವರ ಸಮ್ಮುಖದಲ್ಲಿ ಅರುಣ್ ಭಕ್ಷಿ ಇಂದು ಬಿಜೆಪಿಗೆ ಸೇರ್ಪಡೆಯಾದರು.
ಭಕ್ಷಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದು, ಹಲವು ಗೀತೆಗಳನ್ನು ಹಾಡಿದ್ದಾರೆ. ಮಹಾಭಾರತ ಸೇರಿದಂತೆ ಹಲವು ಟೆಲಿ ಸಿರಿಯಲ್ ಗಳಲ್ಲಿ ಅಭಿನಯಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು , ಬಿಜೆಪಿ ಸಿದ್ಧಾಂತವನ್ನು ಯಾವಾಗಲೂ ಬೆಂಬಲಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ಮೆಚ್ಚುವುದಾಗಿ ತಿಳಿಸಿದರು. ದೇಶಕ್ಕಾಗಿ ಪ್ರಾಮಾಣಿಕತೆ ಹಾಗೂ ಪರಿಶ್ರಮದಿಂದ ಕೆಲಸ ಮಾಡುವುದಾಗಿ ಹೇಳಿದರು.
1990ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನಂತರ ಮೋದಿಯಂತಹ ನಾಯಕನನ್ನು ದೇಶ ಕಂಡಿಲ್ಲ, ಅನೇಕ ನಟ, ನಟಿಯರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ಅರುಣ್ ಭಕ್ಷಿ ನುಡಿದರು.
Advertisement