ಚೋಟೆ ಭಾಯ್ ನಿತೀಶ್ ಗೆ ಪತ್ರ ಬರೆದ ಲಾಲು: ಹೇಳಿದ್ದೇನು?
ದೇಶ
ಚೋಟೆ ಭಾಯ್ ನಿತೀಶ್ ಗೆ ಪತ್ರ ಬರೆದ ಲಾಲು: ಹೇಳಿದ್ದೇನು?
2019 ರ ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾಕನ್ನೆ ಕೆಲವೇ ದಿನಗಳು ಬಾಕಿ ಇರುವಾಗ ಜೆಡಿಯು ಮಾಜಿ ಮಿತ್ರಪಕ್ಷ ಆರ್ ಜೆಡಿಯ ನಾಯಕ ಲಾಲು ಪ್ರಸಾದ್ ಯಾದವ್ ಬಿಹಾರ ಸಿಎಂ ನಿತೀಶ್
2019 ರ ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾಕನ್ನೆ ಕೆಲವೇ ದಿನಗಳು ಬಾಕಿ ಇರುವಾಗ ಜೆಡಿಯು ಮಾಜಿ ಮಿತ್ರಪಕ್ಷ ಆರ್ ಜೆಡಿಯ ನಾಯಕ ಲಾಲು ಪ್ರಸಾದ್ ಯಾದವ್ ಬಿಹಾರ ಸಿಎಂ ನಿತೀಶ್ ಕುಮಾರ್ ಗೆ ಪತ್ರ ಬರೆದಿದ್ದಾರೆ.
ಮೈತ್ರಿಯನ್ನು ಮುರಿದುಕೊಂಡ ಹಳೆಯ ಕಥೆಯನ್ನು ಈಗ ಫೇಸ್ ಬುಕ್ ಪೇಜ್ ಪತ್ರದಲ್ಲಿ ನಿತೀಶ್ ಕುಮಾರ್ ಅವರ ಲಾಟೀನು ದಿನಗಳು ಮುಗಿದುಹೋದವು ಎಂಬ ಹೇಳಿಕೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಹಿರಂಗಪತ್ರದಲ್ಲಿ ನಿತೀಶ್ ಕುಮಾರ್ ನ್ನು ಚೋಟೆ ಭಾಯ್ ಎಂದು ಕರೆದಿರುವ ಲಾಲು ಪ್ರಸಾದ್ ನೀವು ಬೆಳಕಿಗೆ ವಿರುದ್ಧವಾಗಿ ಬೆಳೆದಂತಿದೆ ಎಂದು ತಿರುಗೇಟು ನೀಡಿದ್ದಾರೆ.
ಇದೇ ವೇಳೆ ನಿತೀಶ್ ಕುಮಾರ್ ಪಕ್ಷದ ಚಿಹ್ನೆಯ ವಿರುದ್ಧವೂ ಟೀಕಾ ಪ್ರಹಾರ ನಡೆಸಿರುವ ಲಾಲು ಪ್ರಸಾದ್ ಯಾದವ್, ನಾವು ಲಾಟೀನಿನ ಮೂಲಕ ನಿರುದ್ಯೋಗ, ದ್ವೇಷ, ಅನ್ಯಾಯಗಳನ್ನು ಕೊನೆಗಾಣಿಸಿದರೆ, ನಿಮ್ಮ ಬಾಣ (ಜೆಡಿಯು ಪಕ್ಷದ ಗುರುತು) ಹಿಂಸಾಚಾರದ ಪ್ರತೀಕ ಎಂದು ಹೇಳಿದ್ದಾರೆ.
ನಿತೀಶ್ ಕುಮಾರ್ ನ್ನು ಅವಕಾಶವಾದಿ ಎಂದು ಹೇಳಿರುವ ಲಾಲು ಪ್ರಸಾದ್ ಯಾದವ್, ಅಧಿಕಾರದಲ್ಲಿರುವುದಕ್ಕಾಗಿ ನಿತೀಶ್ ಕುಮಾರ್ ಎನನ್ನು ಬೇಕಾದರೂ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ