71 ರ ಬಾಂಗ್ಲಾ ವಿಮೋಚನೆ ಕೀರ್ತಿ ಇಂದಿರಾಗೆ ಸಲ್ಲುವಂತೆ, ಬಾಲಾಕೋಟ್ ದಾಳಿಯ ಕೀರ್ತಿ ಮೋದಿಗೆ ಸಲ್ಲುತ್ತದೆ

1971 ರ ಬಾಂಗ್ಲಾ ವಿಮೋಚನೆ ಯುದ್ಧದ ಗೆಲುವಿನ ಕೀರ್ತಿಯನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಸಲ್ಲಿಸಬಹುದಾದರೆ, ಬಾಲಾಕೋಟ್ ನಲ್ಲಿ ಉಗ್ರರ ನೆಲೆಗಳ ಮೇಲೆ ನಡೆದ ವೈಮಾನಿಕ ದಾಳಿಯ ಕೀರ್ತಿ
71 ರ ಬಾಂಗ್ಲಾ ವಿಮೋಚನೆ ಕೀರ್ತಿ ಇಂದಿರಾಗೆ ಸಲ್ಲುವಂತೆ, ಬಾಲಾಕೋಟ್ ದಾಳಿಯ ಕೀರ್ತಿ ಮೋದಿಗೆ ಸಲ್ಲುತ್ತದೆ
71 ರ ಬಾಂಗ್ಲಾ ವಿಮೋಚನೆ ಕೀರ್ತಿ ಇಂದಿರಾಗೆ ಸಲ್ಲುವಂತೆ, ಬಾಲಾಕೋಟ್ ದಾಳಿಯ ಕೀರ್ತಿ ಮೋದಿಗೆ ಸಲ್ಲುತ್ತದೆ
1971 ರ ಬಾಂಗ್ಲಾ ವಿಮೋಚನೆ ಯುದ್ಧದ ಗೆಲುವಿನ ಕೀರ್ತಿಯನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಸಲ್ಲಿಸಬಹುದಾದರೆ, ಬಾಲಾಕೋಟ್ ನಲ್ಲಿ ಉಗ್ರರ ನೆಲೆಗಳ ಮೇಲೆ ನಡೆದ ವೈಮಾನಿಕ ದಾಳಿಯ ಕೀರ್ತಿ ಪ್ರಧಾನಿ ನರೇಂದ್ರ ಮೋದಿಗೇ ಸಲ್ಲುತ್ತದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. 
1971 ರಲ್ಲಿ ನಮ್ಮ ನಾಯಕ ಅಟಲ್ ಬಿಹಾರಿ ವಾಜಪೇಯಿ  ಅವರು ವಿಪಕ್ಷದ ನಾಯಕರಾಗಿದ್ದರೂ ಸಹ ಬಾಂಗ್ಲ ವಿಮೋಚನೆಯ ಕೀರ್ತಿಯನ್ನು ಇಂದಿರಾ ಗಾಂಧಿಗೆ ನೀಡಿದ್ದರು. ಅದೇ ಮಾದರಿಯಲ್ಲಿ ಈಗ ಬಾಲಾಕೋಟ್ ವೈಮಾನಿಕ ದಾಳಿಗೆ ಪ್ರಧಾನಿ ನರೇಂದ್ರ ಮೋದಿಗೆ ಏಕೆ ಕೀರ್ತಿ ನೀಡಬಾರದು ಎಂದು ರಾಜನಾಥ್ ಸಿಂಗ್ ಪ್ರಶ್ನಿಸಿದ್ದಾರೆ. 
ಖಾಸಗಿ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರಾಜನಾಥ್ ಸಿಂಗ್, ಪುಲ್ವಾಮ ಘಟನೆ, ಭಯೋತ್ಪಾದನೆಯ ಬಗ್ಗೆಯೂ ಮಾತನಾಡಿದ್ದು, ಯಾವುದೇ ದೇಶ ಭಯೋತ್ಪಾದಕ ದಾಳಿ ನಡೆಯುವುದಕ್ಕೆ ಸಾಧ್ಯವೇ ಇಲ್ಲ ಎಂಬುದಕ್ಕೆ ಖಾತ್ರಿ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಗುಪ್ತಚರ  ಇಲಾಖೆಯಲ್ಲಿರುವವರೂ ಮನುಷ್ಯರು, ಯಾವುದೇ ಗುಪ್ತಚರ ಇಲಾಖೆ ಎಲ್ಲಿಯೂ ತಮ್ಮ ಇನ್ ಪುಟ್ ಗಳನ್ನು ಶೇ.100 ರಷ್ಟು ಸರಿ ಇದೆ ಎಂದು ಹೇಳಿಕೊಳ್ಳುವುದಿಲ್ಲ. ಗುಪ್ತಚರ ಇಲಾಖೆಯನ್ನು ನಿಂದಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com