ವಾರಣಾಸಿಯಲ್ಲಿ 1977ರ ರಾಯ್ ಬರೇಲಿ ಇತಿಹಾಸ ಮರುಕಳಿಸಿದ್ರೆ ಅಚ್ಚರಿ ಇಲ್ಲ: `ಮೋದಿಗೆ ಇಂದಿರಾ ಸೋಲು ನೆನಪಿಸಿದ ಮಾಯಾವತಿ

ಬಹುಜನ ಸಮಾಜ ಪಕ್ಷ(ಬಿಎಸ್ ಪಿ) ಮುಖ್ಯಸ್ಥೆ ಮಾಯಾವತಿ ಅವರು ವಾರಣಾಸಿಯಲ್ಲಿ 1977ರ ರಾಯ್ ಬರೇಲಿ ಇತಿಹಾಸ ಮರುಕಳಿಸಿದರೆ ಅಚ್ಚರಿ ಇಲ್ಲ...
ಮಾಯಾವತಿ
ಮಾಯಾವತಿ
Updated on
ಲಖನೌ: ಬಹುಜನ ಸಮಾಜ ಪಕ್ಷ(ಬಿಎಸ್ ಪಿ) ಮುಖ್ಯಸ್ಥೆ ಮಾಯಾವತಿ ಅವರು ವಾರಣಾಸಿಯಲ್ಲಿ 1977ರ ರಾಯ್ ಬರೇಲಿ ಇತಿಹಾಸ ಮರುಕಳಿಸಿದರೆ ಅಚ್ಚರಿ ಇಲ್ಲ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರ ಸೋಲು ನೆನಪಿಸಿಕೊಟ್ಟಿದ್ದಾರೆ.
1977ರಲ್ಲಿ ತುರ್ತುಪರಿಸ್ಥಿತಿ ನಂತರ ನಡೆದ ಚುನಾವಣೆಯಲ್ಲಿ ಸಮಾಜವಾದಿ ನಾಯಕ ರಾಜ್ ನಾರಾಯಣ್ ಆಗಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯನ್ನು ಸೋಲಿಸಿದ್ದರು. ಈಗ ಇಂತಹ ಸನ್ನಿವೇಶ ವಾರಣಾಸಿಯಲ್ಲಿ ಮೋದಿಗೆ ಎದುರಾಗಲಿದೆ ಎಂದು ಮಾಯಾವತಿ ಎಚ್ಚರಿಕೆ ನೀಡಿದ್ದಾರೆ.
ಮಾಯಾವತಿ ತಮ್ಮ ಟ್ವೀಟ್ ನಲ್ಲಿ ಪ್ರತಿಕ್ರಿಯಿಸುತ್ತಾ " ಪ್ರಧಾನಿ ಮತ್ತು ಯುಪಿ ಮುಖ್ಯಮಂತ್ರಿ ಈ ಪುರವಾಂಚಲ್ ಪ್ರದೇಶಕ್ಕೆ ನೀಡಿರುವ ಭರವಸೆ ಹುಸಿಯಾಗಿದೆ ಯೋಗಿ ಅವರನ್ನು ಗೋರಖ್ಪುರ್ ದಲ್ಲಿ ತಿರಸ್ಕರಿಸಿದ್ದಾರೆ. ಆದ್ದರಿಂದ ಈ ಪರಿಸ್ಥಿತಿಯಲ್ಲಿ, ವಾರಣಾಸಿಯಲ್ಲಿ ಮೋದಿ ಅವರ ಸೋಲು ಅವರ ವಿಜಯಕ್ಕಿಂತಲೂ ಹೆಚ್ಚು ಐತಿಹಾಸಿಕವಾಗಿದೆ. 1977ರ ರಾಯ್ ಬರೇಲಿ ಸ್ಥಿತಿ ಇಲ್ಲಿ ಉಂಟಾಗಬಹುದು ಮಾಯಾವತಿ ಅವರು ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರ ಗುಜರಾತ್ ಮಾದರಿ ಉತ್ತರ ಪ್ರದೇಶದ ಪುರ್ವಾಂಚಲ್ ಪ್ರದೇಶದಲ್ಲಿನ ಬಡತನ, ನಿರುದ್ಯೋಗ ಮತ್ತು ಹಿಂದುಳಿದಿರುವಿಕೆಯನ್ನು ತೆಗೆದು ಹಾಕುವಲ್ಲಿ ಯಶಸ್ವಿಯಾಗಲಿಲ್ಲ, ಅದರ ಬದಲಾಗಿ  ಇಲ್ಲಿ ಮೋದಿ-ಯೋಗಿ ಡಬಲ್ ಇಂಜಿನ್ ಸರ್ಕಾರದ ದೇಶಕ್ಕೆ ಕೋಮು ಗಲಭೆ, ದ್ವೇಷ ಮತ್ತು ಹಿಂಸಾಚಾರವನ್ನು ಮಾತ್ರ ನೀಡಿದೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com