ಲೋಕಸಭಾ ಚುನಾವಣೆ: ವಿವಿಪ್ಯಾಟ್ ಪರಿಶೀಲನೆ ಕುರಿತ ವಿಪಕ್ಷದ ಬೇಡಿಕೆಯನ್ನು ತಿರಸ್ಕರಿಸಿದ ಆಯೋಗ
ದೇಶ
ಲೋಕಸಭಾ ಚುನಾವಣೆ: ಮತಎಣಿಕೆಗೆ ಮುಂಚೆ ವಿವಿಪ್ಯಾಟ್ ಸ್ಲಿಪ್ ಎಣಿಕೆಗೆ ವಿಪಕ್ಷಗಳ ಬೇಡಿಕೆ ತಿರಸ್ಕರಿಸಿದ ಆಯೋಗ
ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಒಂದೇ ದಿನ ಬಾಕಿ ಇರುವಾಗಲೇ ವಿಪಕ್ಷಗಳು ಫಲಿತಾಂಶಕ್ಕೆ ಮುನ್ನ ವಿವಿಪ್ಯಾಟ್ ಕಾಗದಗಳನ್ನು...
ನವದೆಹಲಿ: ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಒಂದೇ ದಿನ ಬಾಕಿ ಇರುವಾಗಲೇ ವಿಪಕ್ಷಗಳು ಫಲಿತಾಂಶಕ್ಕೆ ಮುನ್ನ ವಿವಿಪ್ಯಾಟ್ ಕಾಗದಗಳನ್ನು ಸಂಪೂರ್ಣವಾಗಿ ಲೆಕ್ಕ ಹಾಕಬೇಕೆಂದು ಬೇಡಿಕೆ ಇಟ್ಟಿದ್ದವು. ಆದರೆ ಚುನಾವಣಾ ಆಯೋಗವು ಬೇಡಿಕೆಯನ್ನು ತಿರಸ್ಕರಿಸಿದ್ದು ಮತ ಎಣಿಕೆಯ ಕಡೇ ಕ್ಷಣದ ತಯಾರಿ ನಡೆದಿರುವಾಗ ಕಾರ್ಯವಿಧಾನದಲ್ಲಿ ಯಾವ ಬದಲಾವಣೆಗಳನ್ನು ಮಾಡಲು ಸಾಧ್ಯವಿಲ್ಲ ಎಂದಿದೆ.
22 ರಾಜಕೀಯ ಪಕ್ಷಗಳ ನಾಯಕರು ಫಲಿತಾಂಶಕ್ಕೆ ಮುನ್ನ ವಿವಿಪ್ಯಾಟ್ ಸಿಲ್ಪ್ ಗಳನ್ನು ಎಣಿಕೆ ಮಾಡಿ ಖಚಿತಪಡಿಸಿಕೊಳ್ಲಬೇಕೆಂದು ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.ಒಂದೊಮ್ಮೆ ಏನಾದರೂ ವ್ಯತ್ಯಾಸಗಳು ಕಂಡು ಬಂದರೆ ಅಂತಹಾ ಲೋಕಸಭೆ ಕ್ಷೇತ್ರದ ಎಲ್ಲಾ ಮತಗಳನ್ನು ಸಹ ಮತ್ತೊಮ್ಮೆ ಕ್ರಾಸ್ ಚೆಕ್ ಮಾಡಬೇಕು ಎಂದು ಆಗ್ರಹಿಸಿದೆ.
ಈ ಪ್ರಸ್ತಾವನೆ ಕುರಿತಂತೆ ಅಂತಿಮ ನಿರ್ಧಾರ ತೆಗೆದುಕೊಳ್ಲಲು ಆಯೋಗವು ಬುಧವಾರ ಸಭೆ ಕರೆಯಲಿದೆ ಎಂದು ಪ್ರತಿಪಕ್ಷ ನಾಯಕರ ನಿಯೋಗಕ್ಕೆ ಚುನಾವಣಾ ಆಯೋಗ ತಿಳಿಸಿದೆ.
ಇದಕ್ಕೂ ಮುನ್ನ ಮಂಗಳವಾರ ಸುಪ್ರೀಂ ಕೋರ್ಟ್ ವಿವಿಪ್ಯಾಟ್ ಗಳ ಶೇ. ೧೦೦ ತಾಳೆಯನ್ನು ಗಮನಿಸಿ ಫಲಿತಾಶ ನಿಡಬೇಕೆಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಿತ್ತು.
ಅದೆಲ್ಲದರ ನಡುವೆ ಕಾಂಗ್ರೆಸ್ ಹಿರಿಯ ಮುಖಂಡ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಹ ಇವಿಎಂ ಬಗೆಗಿನ ಪ್ರತಿಪಕ್ಷದ ವಾದಗಳನ್ನು ತಳ್ಳಿ ಹಾಕಿದ್ದು ಚುನಾವಣಾ ಆಯೋಗವನ್ನು ಸಮರ್ಥಿಸಿಕೊಂಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ