ಟಿಟ್ ಫಾರ್ ಟ್ಯಾಟ್: ಕುಶ್ವಾಹ ರಕ್ತಪಾತದ ಎಚ್ಚರಿಕೆಗೆ ಪಾಸ್ವಾನ್ ಪ್ರತಿಕ್ರಿಯೆ

ಬಿಜೆಪಿ ಹಾಗೂ ಮಿತ್ರ ಪಕ್ಷಗಳು ಇವಿಎಂ ಗಳನ್ನು ತಿರುಚಲು ಯತ್ನಿಸಿದರೆ ರಕ್ತಪಾತ ಉಂಟಾಗುತ್ತದೆ ಎಂಬ ಮಾಜಿ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ಅವರ ಹೇಳಿಕೆಗೆ ಎನ್ ಡಿಎ ಮಿತ್ರ ಪಕ್ಷ ಎಲ್ ಜೆಪಿ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್
ಟಿಟ್ ಫಾರ್ ಟ್ಯಾಟ್: ಕುಶ್ವಾಹ ರಕ್ತಪಾತದ ಎಚ್ಚರಿಕೆಗೆ ಪಾಸ್ವಾನ್ ಪ್ರತಿಕ್ರಿಯೆ
ಟಿಟ್ ಫಾರ್ ಟ್ಯಾಟ್: ಕುಶ್ವಾಹ ರಕ್ತಪಾತದ ಎಚ್ಚರಿಕೆಗೆ ಪಾಸ್ವಾನ್ ಪ್ರತಿಕ್ರಿಯೆ
Updated on
ನವದೆಹಲಿ: ಬಿಜೆಪಿ ಹಾಗೂ ಮಿತ್ರ ಪಕ್ಷಗಳು ಇವಿಎಂ ಗಳನ್ನು ತಿರುಚಲು ಯತ್ನಿಸಿದರೆ ರಕ್ತಪಾತ ಉಂಟಾಗುತ್ತದೆ ಎಂಬ ಮಾಜಿ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ಅವರ ಹೇಳಿಕೆಗೆ ಎನ್ ಡಿಎ ಮಿತ್ರ ಪಕ್ಷ ಎಲ್ ಜೆಪಿ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್, ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಇದ್ದೇ ಇರುತ್ತದೆ ಎಂದು ಹೇಳಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ ಏನನ್ನೂ ಮಾಡಿಲ್ಲ. ಏನನ್ನೂ ನಿರ್ಣಯಿಸಿಲ್ಲ. ಆದರೆ ನಾನು, ರಾಜನಾಥ್ ಸಿಂಗ್ ಹೇಳುವುದಿಲ್ಲ. ಆದರೆ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಇದ್ದೇ ಇರುತ್ತದೆ ಎಂಬುದನ್ನು ಹೇಳುತ್ತೇನೆ. ಅರ್ಥ ಮಾಡಿಕೊಳ್ಳಿ.. ಎಂದು ಪಾಸ್ವಾನ್ ಪತ್ರಕರ್ತರಿಗೆ ಹೇಳಿದ್ದಾರೆ.
ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿರುವ ಪಾಸ್ವಾನ್, ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳಿಗೆ ಅವರ ಸೋಲು ಖಚಿತವಾಗಿದೆ. ಆದ್ದರಿಂದಲೇ ತಮ್ಮ ವೈಫಲ್ಯವನ್ನು ಮುಚ್ಚಿಟ್ಟುಕೊಳ್ಳುವುದಕ್ಕೆ ಇವಿಎಂ ಗಳನ್ನು ಪ್ರಶ್ನಿಸುತ್ತಿದ್ದಾರೆ ಎಂದು ಪಾಸ್ವಾನ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com