17ನೇ ಲೋಕಸಭೆಯ ಮಹಿಳಾ ಸಂಸದರ ಸಂಖ್ಯೆ 76, ಇಲ್ಲಿಯವರೆಗೆ ಅತಿ ಹೆಚ್ಚು

ಲೋಕಸಭೆಯಲ್ಲಿ ಮಹಿಳಾ ಪ್ರತಿನಿಧಿಗಳಿಗೆ ಶೇಕಡಾ 33ರಷ್ಟು ಸ್ಥಾನಮಾನ ನೀಡಿಕೆ ಇನ್ನೂ ಬೇಡಿಕೆಯ ಹಂತದಲ್ಲಿರುವಾಗಲೇ ...
ಹೊಸದಾಗಿ ಆಯ್ಕೆಗೊಂಡ ಸಂಸದೆಯರಾದ ಹೇಮ ಮಾಲಿನಿ, ತಮಿಝ್ಹಚಿ ತಂಗಪಂಡಿಯನ್, ಮೀನಾಕ್ಷಿ ಲೇಖಿ
ಹೊಸದಾಗಿ ಆಯ್ಕೆಗೊಂಡ ಸಂಸದೆಯರಾದ ಹೇಮ ಮಾಲಿನಿ, ತಮಿಝ್ಹಚಿ ತಂಗಪಂಡಿಯನ್, ಮೀನಾಕ್ಷಿ ಲೇಖಿ
ನವದೆಹಲಿ: ಲೋಕಸಭೆಯಲ್ಲಿ ಮಹಿಳಾ ಪ್ರತಿನಿಧಿಗಳಿಗೆ ಶೇಕಡಾ 33ರಷ್ಟು ಸ್ಥಾನಮಾನ ನೀಡಿಕೆ ಇನ್ನೂ ಬೇಡಿಕೆಯ ಹಂತದಲ್ಲಿರುವಾಗಲೇ ಮಹಿಳಾ ಜನಪ್ರತಿನಿಧಿಗಳ ಸಂಖ್ಯೆ ಕೆಳಮನೆಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಾಗಿದೆ.
17ನೇ ಲೋಕಸಭೆಗೆ ಒಟ್ಟು 76 ಮಹಿಳಾ ಪ್ರತಿನಿಧಿಗಳು ಸಂಸತ್ತು ಪ್ರವೇಶಿಸಲು ಸಜ್ಜಾಗಿದ್ದಾರೆ. ದೇಶದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಯ ನಂತರ ಇಷ್ಟೊಂದು ಸಂಖ್ಯೆಯಲ್ಲಿ ಮಹಿಳಾ ಸಂಸದರು ಪ್ರವೇಶಿಸುತ್ತಿರುವುದು ಇದೇ ಮೊದಲಾಗಿದೆ. ಅದು 542 ಸಂಸದರ ಪೈಕಿ ಶೇಕಡಾ 14ರಷ್ಟಾಗಿದೆ.
ಕಳೆದ ಲೋಕಸಭೆಯಲ್ಲಿ 66 ಮಹಿಳಾ ಸಂಸದರಿದ್ದರು. ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಜನಪ್ರತಿನಿಧಿಗಳ ಸಂಖ್ಯೆಯಿದ್ದು ತಲಾ 11 ಸಂಸದರು ಈ ಬಾರಿ ಇದ್ದಾರೆ. ಒಡಿಶಾ ರಾಜ್ಯದಿಂದ ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದು ಅವರಲ್ಲಿ ಸುಮಾರು 6 ಮಂದಿ ಸಂಸದರು ಬಿಜು ಜನತಾ ದಳದಿಂದ ಇದ್ದಾರೆ. ಇವರಲ್ಲಿ ಸೋನಿಯಾ ಗಾಂಧಿ, ಮನೇಕಾ ಗಾಂಧಿ, ಹೇಮ ಮಾಲಿನಿ ಮತ್ತು ಸ್ಮೃತಿ ಇರಾನಿ ಹಿರಿಯವರಾಗಿದ್ದಾರೆ.
ಇನ್ನು ಸಿನಿಮಾ ಕ್ಷೇತ್ರದಿಂದ ಬಂದು ಈ ಬಾರಿ ರಾಂಪುರದಿಂದ ಸ್ಪರ್ಧಿಸಿದ್ದ ಬಿಜೆಪಿಯ ಜಯಪ್ರದಾ ಸಮಾಜವಾದಿ ಪಕ್ಷದ ಅಜಂ ಖಾನ್ ವಿರುದ್ಧ ಸೋತಿದ್ದಾರೆ. ಊರ್ಮಿಳಾ ಮಾತೋಂಡ್ಕರ್ ಕಾಂಗ್ರೆಸ್ ನಿಂದ ಮುಂಬೈ ಉತ್ತರದಲ್ಲಿ ಸ್ಪರ್ಧಿಸಿ ಸೋಲನ್ನು ಕಂಡಿದ್ದಾರೆ.
ಆಡಳಿತಾರೂಢ ಬಿಜೆಪಿಯಿಂದ 34 ಮಹಿಳಾ ಸಂಸದರು ಈ ಬಾರಿ ಸಂಸತ್ತು ಪ್ರವೇಶಿಸಲಿದ್ದು ಒಟ್ಟು 47 ಮಹಿಳಾ ಅಭ್ಯರ್ಥಿಗಳು ಈ ಬಾರಿ ಸ್ಪರ್ಧಿಸಿದ್ದರು. ಟಿಎಂಸಿಯಿಂದ ಶೇಕಡಾ 41 ಮತ್ತು ಬಿಜೆಪಿಯಿಂದ ಶೇಕಡಾ 33ರಷ್ಟು ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಪಶ್ಚಿಮ ಬಂಗಾಳ ಮತ್ತು ಒಡಿಶಾ ಹೊರತುಪಡಿಸಿ ಉಳಿದ ಕಡೆ ಮಹಿಳಾ ಅಭ್ಯರ್ಥಿಗಳು ಕಡಿಮೆ ಸಂಖ್ಯೆಯಲ್ಲಿ ಸ್ಪರ್ಧಿಸಿದ್ದಾರೆ. ಹೀಗಾಗಿ ಸಹಜವಾಗಿ ಲೋಕಸಭೆಯಲ್ಲಿ ಪುರುಷ ಜನಪ್ರತಿನಿಧಿಗಳು ಹೆಚ್ಚಿರುತ್ತಾರೆ ಎನ್ನುತ್ತಾರೆ ದೆಹಲಿ ಮೂಲದ ಕಾರ್ಯಕರ್ತರೊಬ್ಬರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com