ಮೋದಿ ಸಂಪುಟದಲ್ಲಿ ಹಣಕಾಸು ಸಚಿವರಾಗಿ ಅಮಿತ್ ಶಾ ಎಂಟ್ರಿ: ಅರುಣ್ ಜೈಟ್ಲಿ ಔಟ್?

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ಪಷ್ಟ ಜನಾದೇಶ ಸಿಕ್ಕಿದ್ದು, ಮೋದಿ ಅವರ ಸಂಪುಟ ಹೇಗಿರುತ್ತೆ ಎಂಬ ಊಹಾಪೋಹಗಳು ಕೇಳಿ ಬರುತ್ತವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ...
ಅಮಿತ್ ಶಾ
ಅಮಿತ್ ಶಾ
ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ಪಷ್ಟ ಜನಾದೇಶ ಸಿಕ್ಕಿದ್ದು, ಮೋದಿ ಅವರ ಸಂಪುಟ ಹೇಗಿರುತ್ತೆ ಎಂಬ ಊಹಾಪೋಹಗಳು ಕೇಳಿ ಬರುತ್ತವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವು ಪ್ರಮುಖರ ಹೆಸರುಗಳು ಕೇಳಿ ಬರುತ್ತಿವೆ.
ಅಮಿತ್ ಶಾ ಅವರಿಗೆ ಹಣಕಾಸು ಖಾತೆ ನೀಡಲಾಗುತ್ತದೆ ಎಂದು ಹೇಳಲಾಗುತ್ತದೆ.ತಮ್ಮ ಸಂಪುಟದಲ್ಲಿ ಹೊಸ ಮುಖಗಳನ್ನು ತರಲು ಮೋದಿ ನಿರ್ಧರಿಸಿದ್ದಾರೆ, ವೃತ್ತಿಪರರನ್ನು ಕರೆತರಲು ತೀರ್ಮಾನಿಸಿದ್ದಾರೆ.
ಆರ್ ಎಸ್ ಎಸ್ ಬೆಂಬಲವಿರುವ ರಾಜನಾಥ್ ಸಿಂಗ್, ರಾಹುಲ್ ಗಾಂಧಿ ಅವರನ್ನು ಸೋಲಿಸಿರುವ ಸ್ಮೃತಿ ಇರಾನಿ, ನಿತಿನ್ ಗಡ್ಕರಿ, ಸುಷ್ಮಾ ಸ್ವರಾಜ್ ಅವರುಗಳು ಮತ್ತೆ ಸಂಪುಟಕ್ಕೆ ಸೇರಲಿದ್ದಾರೆ, ಆದರೆ ಆರೋಗ್ಯದ ಕಾರಣಕ್ಕಾಗಿ ಸಚಿವ ಸ್ಥಾನದಿಂದ ಕೈ ಬಿಡುವ ಸಾಧ್ಯತೆಯಿದೆ.
ಬಿಜೆಪಿಯಲ್ಲಿ ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬ ನಿಯಮ ಬಿಜೆಪಿಯಲ್ಲಿದೆ, ಇನ್ನೂ ರವಿಶಂಕರ್ ಪ್ರಸಾದ್ ಅವರ ಸಚಿವ ಸ್ಥಾನ ಕೂಡ ಅಲುಗಾಡುತ್ತಿದೆ ಎಂದು ಹೇಳಲಾಗಿದೆ, ಅಮಿತ್ ಶಾ ತಂಡದಿಂದ ಭೂಪೇಂದ್ರ ಯಾದವ್ ಮತ್ತು ವಿನಯ್ ಸಹಸ್ರಬುದ್ದೇ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com