ಬೆಂಗಳೂರು ಉತ್ತರ ಲೋಕಸಭೆ: ಹೈವೊಲ್ಟೇಜ್ ಕಣದಲ್ಲಿ ಅಭ್ಯರ್ಥಿಗಳ ಪತ್ನಿಯರ ಮತಯಾಚನೆ

ಪ್ರತಿಷ್ಠಿತ ಕ್ಷೇತ್ರವಾಗಿರುವ ಬೆಂಗಳೂರು ಉತ್ತರ ಲೋಕಸಭಾ ಕಣ ಇಬ್ಬರು ಪ್ರಬಲ ಅಭ್ಯರ್ಥಿಗಳ ಸ್ಪರ್ಧೆಯಿಂದ ರಂಗೇರಿದೆ. ಉತ್ತರ ಲೋಕಸಭೆ ಕ್ಷೇತ್ರದ ಮಣ್ಣು ...
ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಡಾಟಿ ಸದಾನಂದಗೌಡ ಮತಯಾಚನೆ
ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಡಾಟಿ ಸದಾನಂದಗೌಡ ಮತಯಾಚನೆ
ಬೆಂಗಳೂರು: ಪ್ರತಿಷ್ಠಿತ ಕ್ಷೇತ್ರವಾಗಿರುವ ಬೆಂಗಳೂರು ಉತ್ತರ ಲೋಕಸಭಾ ಕಣ ಇಬ್ಬರು ಪ್ರಬಲ ಅಭ್ಯರ್ಥಿಗಳ ಸ್ಪರ್ಧೆಯಿಂದ ರಂಗೇರಿದೆ. ಉತ್ತರ ಲೋಕಸಭೆ ಕ್ಷೇತ್ರದ ಮಣ್ಣು ದೂಳಿನಲ್ಲಿ ಅಭ್ಯರ್ಥಿಗಳ ಪತ್ನಿಯರು ತಮ್ಮ ಗಂಡಂದಿರ ಪರವಾಗಿ ಮತಯಾಚಿಸುತ್ತಿದ್ದಾರೆ. ಎಲ್ಲರ ಮುಂದೆ ಕೈ ಜೋಡಿಸಿ ನಿಂತು ನಗು ಮೊಗದಲ್ಲಿ ಪ್ರಚಾರ ಮಾಡುತ್ತಿದ್ದಾರೆ.
ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಅವರಿಗೆ ಚುನಾವಣೆ ಹೊಸತಲ್ಲ, ಆದರೆ ಅವರ ಪತ್ನಿ ಡಾಟಿ ಇದೇ ಮೊದಲ ಬಾರಿಗೆ ತಮ್ಮ ಪತಿಯ ಪರವಾಗಿ ಪ್ರಚಾರ ಕೈಗೊಂಡಿದ್ದಾರೆ, ಮಹಾಲಕ್ಷ್ಮಿ ಲೇಔಟ್, ನಂದಿನಿ ಲೇಔಟ್ ಗಳಲ್ಲಿ ಸೋಮವಾರ ಮನೆ ಮನೆಗೂ ತೆರಳಿ ಮತಯಾಚಿಸಿದ್ದಾರೆ, ಶುದ್ದ ಕನ್ನಡದಲ್ಲಿ  ಮೋದಿ ಸರ್ಕಾರದ ಸಾಧನೆಗಳನ್ನು ಜನರಿಗೆ ಹೇಳುತ್ತಿದ್ದಾರೆ. 
ಬೆಳಗ್ಗೆ 5.30ಕ್ಕೆ ಎದ್ದು ಒಂದು ಲೋಟ ಹಾಲು ಕುಡಿದು, ಪಾರ್ಕ್ ಗೆ ತೆರಳಿ ಅಲ್ಲಿ ಪ್ರತ್ಯೇಕವಾಗಿ  ಮತದಾರರನ್ನು ಭೇಟಿ ಮಾಡಿ ಮತಯಾಚಿಸುತ್ತಿದ್ದಾರೆ, ಅಪಾರ್ಟ್ ಮೆಂಟ್, ಕಾಂಪ್ಲೆಕ್ಸ್ ಮಾರುಕಟ್ಟೆ ಮುತಾದ ಕಡೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ.
ತಮ್ಮ ಪತ್ನಿಯ ಪ್ರಚಾರದ ಬಗ್ಗೆ ಸದಾನಂದಗೌಡ ಹೇಳಿದ್ದು ಹೀಗೆ. ಕೆಲವು ಬಾರಿ ನನಗೆ ಹೊಟ್ಟೆಕಿಚ್ಚು ಉಂಟಾಗುತ್ತದೆ, ನನಗಿಂತ ಅವಳೇ ಹೆಚ್ಚು ಜನಪ್ರಿಯಳಾಗುತ್ತಿದ್ದಾಳೆ. ಇದು ನನಗೆ ಹೊಸ ಚುನಾವಣೆಯಲ್ಲ, 2014 ರಲ್ಲಿ ಮೋದಿ ಅಲೆಯಿಂದಾಗಿ ಸದಾನಂದಗೌಡ 7,18,326 ಮತ ಪಡೆದಿದ್ದರು, ಕಾಂಗ್ರೆಸ್ ಸ್ಪರ್ಧಿ ನಾರಾಯಣ ಸ್ವಾಮಿ 4,88,562 ಮತ ಪಡೆದಿದ್ದರು.
ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ಸಚಿವ ಕೃಷ್ಣ ಭೈರೇಗೌಡ ತಾಯಿ ಸಾವಿತ್ರಮ್ಮ ತಮ್ಮ ಮಗನ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ, ಇನ್ನೂ ಕೃಷ್ಣ ಅವರ ತಂದೆ ,ಜೆ,ಎಚ್ ಪಟೇಲ್ ಸಂಪುಟದಲ್ಲಿ  ಸಚಿವರಾಗಿದ್ದ ಬೈರೇಗೌಡ ಅವರ ಪರವಾಗಿಯೂ ಸಾವಿತ್ರಮ್ಮ ಪ್ರಚಾರ ಮಾಡಿದ್ದರು. ತಮ್ಮ ಪರಿಚಯಸ್ಥರು, ನೆಂಟರ ಮನೆಗೆ ತೆರಳದೇ ಇರಲು ನಿರ್ಧರಿಸಿದ್ದಾರೆ.
ಕೃಷ್ಣ ಬೈರೇಗೌಡ ಬೆಳಕ್ಕೆ 9ಗಂಟೆಗೆ ಪ್ರಚಾರ ಕಾರ್ಯ ಆರಂಭಿಸುತ್ತಾರೆ, ತಾಯಿ ಸಾವಿತ್ರಮ್ಮ ಮತ್ತು ಪತ್ನಿ ಮೀನಾಕ್ಷಿ  ಹಾಗೂ ಅವರ ಸಹೋದರಿಯರಾದ ಮಂಗಳಾ ಮತ್ತು ಮಂಜುಳಾ ಬೆಳಗ್ಗೆ 6.30ಕ್ಕೆ ಎದ್ದು, ಪ್ರಚಾರ ಕಾರ್ಯ ಆರಂಭಿಸುತ್ತಾರೆ, ಹಿರಿಯ ನಾಗರಿಕರು ಮಹಿಳೆಯರು ಮತ್ತು ಮಕ್ಕಳ ಬಳಿ ಮತಯಾಚಿಸುತ್ತಿದ್ದಾರೆ.
ಮೋದಿ ಸರ್ಕಾರದ ವೈಫಲ್ಯಗಳ ಬಗ್ಗೆ ಹಾಗೂ ರಾಹುಲ್ ಗಾಂಧಿ ಏನೇನು ಮಾಡುತ್ತಾರೆ ಎಂಬ ಬಗ್ಗೆ ಮತದಾರರಿಗೆ ಅರಿವು ಮೂಡಿಸುತ್ತಿದ್ದಾರೆ,ಈಗಾಗಲೇ ನಾನು ನಾಲ್ಕು ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರಚಾರ ಮುಗಿಸಿದ್ದೇನೆ, ಕೃಷ್ಣ ಅವರ ಪರ ಪ್ರಚಾರ ಮಾಡುವುದು ತುಂಬಾ ಸುಲಭದ ಕೆಲಸ, ಏಕೆಂದರೇ ಜನರಿಗೆ ಅವರ ಬಗ್ಗೆ ತಿಳಿದಿದೆ ಎಂದು ಕೃಷ್ಣ ಬೈರೇಗೌಡ ಸಹೋದರಿ ಮಂಜುಳಾ ತಿಳಿಸಿದ್ದಾರೆ. 2009 ರಲ್ಲಿ ಕೃಷ್ಣ ಬೈರೇಗೌಡ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ದಿವಂಗತ ಎಚ್.ಎನ್ ಅನಂತ್ ಕುಮಾರ್ ವಿರುದ್ಧ ಸ್ಪರ್ಧಿಸಿ ಸೋತಿದ್ದರು, ಆ ವೇಳೆ  ಮೀನಾಕ್ಷಿ ಪತಿ ಕೃಷ್ಣ ಭೈರೇಗೌಡ ಪರ ಪ್ರಚಾರ ನಡೆಸಿದ್ದರು,
ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ  ಮಲ್ಲೇಶ್ವರಂ, ಯಶವಂತಪುರ, ಬ್ಯಾಟರಾಯನಪುರ, ಹೆಬ್ಬಾಳ, ಮಹಾಲಕ್ಷ್ಮಿ ಲೇಔಟ್, ಮತ್ತು ಪುಲಕೇಶಿ ನಗರ, ದಾಸರಹಳ್ಳಿ ಮತ್ತು ಕೆ.ಆರ್ ಪುರಂ ವಿಧಾನಸಭೆ ಕ್ಷೇತ್ರಗಳು ಸೇರುತ್ತವೆ, ಸ್ವಲ್ಪ ನಗರ ಮತಕ್ತು ಗ್ರಾಮೀಣ ಭಾಗದ ಮತದಾರರು ಇಲ್ಲಿದ್ದಾರೆ, 
ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ತುಂಬಾ ಇದೆ, ಕ್ಷೇತ್ರದ ಅರ್ದದಷ್ಟು ಭಾಗ ನೀರಿಗಾಗಿ ವಾಟರ್ ಟ್ಯಾಂಕರ್ ಅವಲಂಬಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಸದಾನಂದಗೌಡ ಭರವಸೆ ನೀಡಿದ್ದರು, ಆದರೆ ಅದನ್ನು ಈಡೇರಿಸುವಲ್ಲಿ ವಿಫಲವಾಗಿದ್ದಾರೆ, ಈ ಭಾಗದಲ್ಲಿ ಸುಮಾರು 6 ಲಕ್ಷ ಒಕ್ಕಲಿಗ ಮತದಾರರಿದ್ದಾರೆ. 2014 ರಲ್ಲಿ ಇಲ್ಲಿ ಯಾವುದೇ ಮೋದಿ ಅಲೆ ಕಾಣಲಿಲ್ಲ ಎಂದು ರಾಜಕೀಯ ವಿಮರ್ಶಕ ಪ್ರೊ.ಕಿರಣ್ ಗಾಜನೂರು ಹೇಳಿದ್ದಾರೆ.
ಸದಾನಂದಗೌಡ ತಮ್ಮ ಸ್ವಂತ ಸಾಧನೆಗಳು ಈ ಚುನಾವಣೆಗೆ ಮುಖ್ಯವಾಗಿವೆ, ಇನ್ನೂ ಮೈತ್ರಿ ಅಭ್ಯರ್ಥಿ ಬಗ್ಗೆ ನನಗೆ ಯಾವುದೇ ಭಯವಿಲ್ಲ, ಜನ ನನಗೆ ಮತ ಹಾಕುತ್ತಾರೆ ,ಕಳೆದ ಐದು ವರ್ಷಗಳಲ್ಲಿ ನಾನು ಕ್ಷೇತ್ರಕ್ಕೆ ಸುಮಾರು 100 ಕ್ಕೂ ಹೆತ್ತಿ ಬಾರಿ ಭೇಟಿ ನೀಡಿದ್ದೇನೆ, ನನಗೆ ಇದುವರೆಗೂ ಯಾರೋಬ್ಬರು ಒಂದೇ ಒಂದು ದೂರು ನೀಡಿಲ್ಲ, ಜನರು ನಾನು ಪ್ರಚಾರಕ್ಕೆ ಹೋದ ವೇಳೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ, ನಾನು ಮತ್ತು ನನ್ನ ಪತ್ನಿ ಪ್ರತ್ಯೇಕವಾಗಿ ಚುನಾವಣಾ ಪ್ರಚಾರ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಇನ್ನೂ ಜೆಡಿಎಸ್ ಶಾಸಕರಾದ ಗೋಪಾಲಯ್ಯ ಮತ್ತು ಮಂಜುನಾಥ ಹಾಗೂ ಇತರ ಜೆಡಿಎಸ್ ಕಾರ್ಪೋರೇಟರ್ ಗಳು ನಮ್ಮ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ ಕೂಡ ನನ್ನ ಪರವಾಗಿ ಪ್ರಚಾರ ಮಾಡಲಿದ್ದಾರೆ. ಒಕ್ಕಲಿಗ ಮಹಾ ಸಂಸ್ಥಾನದ ಗುರುಗಳಾದ ನಿರ್ಮಲಾನಂದನಾಥ ಸ್ವಾಮೀಜಿ ಸದಾನಂದಗೌಡ ಅವರಿಗೆ ಬೆಂಬಲಿಸುವಂತೆ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ, ಕೃಷ್ಣ ಭೈರೇಗೌಡ ಬಿಜೆಪಿಯವರು ಇಂಥಹ ಕಥೆ ಕಟ್ಟುವಲ್ಲಿ ನಿಸ್ಸೀಮರು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com