ಇದು ಮೋದಿಗಾಗಿ ನಡೆಯುತ್ತಿರುವ ಚುನಾವಣೆ-ಪಿ.ಸಿ ಮೋಹನ್: ಅನುಕಂಪದ ಅಲೆ ನನಗಿದೆ-ರಿಜ್ವಾನ್ ಹರ್ಷದ್

ಮಧ್ಯಮ ವರ್ಗದ ಜನರೇ ಅಧಿಕ ಪ್ರಮಾಣದಲ್ಲಿರುವ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ ಮೋಹನ್ ತಮ್ಮ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ...
ಪಿ.ಸಿ ಮೋಹನ್ ಮತ್ತು ರಿಜ್ವಾನ್ ಅರ್ಷದ್
ಪಿ.ಸಿ ಮೋಹನ್ ಮತ್ತು ರಿಜ್ವಾನ್ ಅರ್ಷದ್
ಬೆಂಗಳೂರು: ಮಧ್ಯಮ ವರ್ಗದ ಜನರೇ ಅಧಿಕ ಪ್ರಮಾಣದಲ್ಲಿರುವ ಬೆಂಗಳೂರು ಸೆಂಟ್ರಲ್ ಕ್ಷೇತ್ರದ  ಬಿಜೆಪಿ ಅಭ್ಯರ್ಥಿ ಪಿ.ಸಿ ಮೋಹನ್ ತಮ್ಮ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಆರಂಭಿಸಿದ್ದಾರೆ. 
ಸ್ಥಳೀಯ ನಾಯಕರು ಎಂಬುದಕ್ಕಿಂತ ಹೆಚ್ಚಾಗಿ  ಮೋದಿಗಾಗಿ ನಡೆಯುತ್ತಿರುವ ಚುನಾವಣೆ ಇದಾಗಿದೆ, ನಾನು ಕೇವಲ ಸಂದೇಶಕಾರಕ, ಮೋದಿ ವರ್ಚಸ್ಸು ಹಾಗೂ ಚರಿಷ್ಮಾ  ಈ ಚುನಾವಣೆಯಲ್ಲಿ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ಪಿ.ಸಿ ಮೋಹನ್ ಹೇಳಿದ್ದಾರೆ.
ಮೋಹನ್ ಈ ಬಾರಿ ಸ್ಪರ್ದೆ ಅಷ್ಟು ಸುಲಭವಾಗಿಲ್ಲ, ಅವರ ಪ್ರತಿಸ್ಪರ್ದಿ ರಿಜ್ವಾನ್ ಹರ್ಷದ್ ಪ್ರಬಲ ಸ್ಪರ್ಧೆ ನೀಡುತ್ತಿದ್ದಾರೆ, ಭಾಷಾ ಅಲ್ಪ ಸಂಖ್ಯಾತರು, ಧಾರ್ಮಿಕ ಅಲ್ಪಸಂಖ್ಯಾತರೇ ಇಲ್ಲಿನ ಮತ ಬ್ಯಾಂಕ್.
39 ವರ್ಷದ ಹರ್ಷದ್ ಉತ್ಸಾಹದಿಂದಲೇ ಚುನಾವಣೆ ಎದುರಿಸುತ್ತಿದ್ದಾರೆ, ಮೋಹನ್ ಪರವಾಗಿ ಮೋದಿ ಅಲೆ ಮತ್ತು ರಾಷ್ಟ್ರೀಯ ಭದ್ರತಾ ವಿಚಾರ ಕೆಲಸ ಮಾಡುತ್ತವೆ, ರಿಜ್ವಾನ್ ಹರ್ಷದ್ ದಿನದ 24 ಗಂಟೆಯೂ ಕೆಲಸ ಮಾಡುತ್ತಿದ್ದಾರೆ, ಪ್ರತಿದಿನ ಸುಮಾರು 6-7 ಸಭೆಗಳು ನಡೆಯುತ್ತಿವೆ, ಯುವಕರಾಗಿರುವುದರಿಂದ ನಿರಂತರ ಕೆಲಸ ಮಾಡಲು ಸಹಾಯವಾಗುತ್ತದೆ ಎಂದು ಹರ್ಷದ್ ಹೇಳಿದ್ದಾರೆ.
2014 ರ ಚುನಾವಣೆಯಲ್ಲಿ ಮೋಹನ್ ರಿಜ್ವಾನ್ ಹರ್ಷದ್ 1.30 ಲಕ್ಷ ಮತಗಳಿಂದ ಸೋಲಿಸಿದ್ದರು, ಬೆಳಗ್ಗೆ ಬೇಗ ಎದ್ದು ಪ್ರತಾರ ಆರಂಭಿಸುವ ಮೋಹನ್ ಬೆಳಗ್ಗೆ ವಾಕಿಂಗ್ ಮಾಡುವವರ ಬಳಿ ಮತಯಾಚಿಸುತ್ತಾರೆ,  ಉಳಿದ 16 ಗಂಟೆ ಸಾರ್ವಜನಿಕ ಸಭೆಗಳಳಲ್ಲಿ ಭಾಗವಹಿಸುತ್ತಾರೆ, ಇನ್ನೂ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಪಕ್ಷೇತ್ರ ಅಭ್ಯರ್ಥಿಯಾಗಿ ಸ್ಪರ್ದಿಸಿರುವ ನಟ ಪ್ರಕಾಶ್ ರಾಜ್ ನನ್ನ ಎದುರಾಳಿಯಲ್ಲ, ಕಾಂಗ್ರೆಸ್ ಮಾತ್ರ ನನ್ನ ಎದುರಾಳಿ ಎಂದು ಮೋಹನ್ ತಿಳಿಸಿದ್ದಾರೆ.
ಬೆಂಗಳೂರು ಸೆಂಟ್ರಲ್ ಲೋಕಸಭೆ ಕ್ಷೇತ್ರದ 5 ವಿಧಾನಸಭೆಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ, ಉಳಿದ ಮೂರು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ,  ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ದಲಿತ ಮತಗಳು ಕಾಂಗ್ರೆಸ್ ಪಾಲಾಗುವ ಸಾಧ್ಯತೆಯಿದೆ. ಹೀಗಾಗಿ ವಿಶೇಷವಾಗಿ ಶಿವಾಜಿನಗರ ಕ್ಷೇತ್ರ ರಿಜ್ವಾನ್ ಹರ್ಷದ್ ಪರವಾಗಿದೆ.
ಕರ್ನಾಟಕ ಸಿನಿಮಾ ಕಲಾವಿದರು ಮತ್ತು ತಂತ್ರಜ್ಞರ ಒಕ್ಕೂಟ ಪ್ರಕಾಶ್ ರಾಜ್ ಅವರ ಬೆಂಬಲಕ್ಕೆ ನಿಂತಿಲ್ಲ, ಬದಲಾಗಿ ಮತ್ತೊಮ್ಮೆ ಮೋದಿ ಅವರು ಪ್ರಧಾನಿಯಾಗಬೇಕೆಂಬ ದೃಷ್ಟಿಯಿಂದ ಬಿಜೆಪಿಗೆ ಬೆಂಬಲ ನೀಡುತ್ತಿದೆ ಎಂದು ಒಕ್ಕೂಟದ ಕಾರ್ಯದರ್ಶಿ ಕೆ,ಎಸ್ ರವೀಂದ್ರನಾಥ್ ಹೇಳಿದ್ದಾರೆ.
ಇನ್ನೂ ಜೆಡಿಎಸ್ ಕಾರ್ಯಕರ್ತರು ತಮ್ಮ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ, ಪ್ರಕಾಶ್ ರಾಜ್ ಸ್ಪರ್ಧೆ ನಮ್ಮ ಮೇಲೆ ಯಾವ ಪರಿಣಾಮ ಬೀರುವುದಿಲ್ಲ, ಅವರಿಗೆ ಒಳ್ಳೆಯದಾಗಲಿ ಎಂದು ನಾನು ಹಾರೈಸುತ್ತೇನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com