ಕಾಂಗ್ರೆಸ್ ಪ್ರಣಾಳಿಕೆಯಲ್ಲಿ 'ನ್ಯಾಯ್': ತಜ್ಞರು, ರಾಜಕೀಯ ನಾಯಕರು ಹೇಳುವುದೇನು?

ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಪ್ರಕಟಿಸಿರುವ ಚುನಾವಣಾ ಪ್ರಣಾಳಿಕೆಯಲ್ಲಿ ಸುಳ್ಳು ...
ದೆಹಲಿಯಲ್ಲಿ ನಿನ್ನೆ ಬಿಡುಗಡೆಯಾದ ಕಾಂಗ್ರೆಸ್ ಪ್ರಣಾಳಿಕೆ
ದೆಹಲಿಯಲ್ಲಿ ನಿನ್ನೆ ಬಿಡುಗಡೆಯಾದ ಕಾಂಗ್ರೆಸ್ ಪ್ರಣಾಳಿಕೆ
Updated on
ಬೆಂಗಳೂರು: ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಪ್ರಕಟಿಸಿರುವ ಚುನಾವಣಾ ಪ್ರಣಾಳಿಕೆಯಲ್ಲಿ ಸುಳ್ಳು ಭರವಸೆಗಳನ್ನು ಜನತೆಯ ಮುಂದಿಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಟೀಕಿಸಿದ್ದಾರೆ.
ಯಾವ ಪ್ರಣಾಳಿಕೆಯನ್ನು ಕಾಂಗ್ರೆಸ್ ಮೈತ್ರಿಕೂಟ ಅನುಸರಿಸುತ್ತದೆ. ಕಾಂಗ್ರೆಸ್ಸೇ ಅಥವಾ ಜೆಡಿಎಸ್ ನದ್ದೇ? ಕರ್ನಾಟಕದಲ್ಲಿರುವುದು ಗೊಂದಲದ ಮೈತ್ರಿಕೂಟ, ಜನರು ಮಾತ್ರವಲ್ಲ ಸ್ವತಃ ರಾಜಕೀಯ ನಾಯಕರೇ ಗೊಂದಲಕ್ಕೀಡಾಗಿದ್ದಾರೆ ಎಂದರು.
ಕಾಂಗ್ರೆಸ್ ನ ಕರ್ಜ್ ಮುಕ್ತಿ(ಸಾಲದಿಂದ ಮುಕ್ತಿ) ಧ್ಯೇಯವನ್ನು ಟೀಕಿಸಿದ ಬಿಎಸ್ ವೈ, 70 ವರ್ಷಗಳು ಕಳೆದ ನಂತರ ಕಾಂಗ್ರೆಸ್ ಗೆ ರೈತರ ಪ್ರಾಮುಖ್ಯತೆ ಗೊತ್ತಾಗಿದೆ. ರೈತರಿಗೆ ಪ್ರತಿವರ್ಷ 6 ಸಾವಿರ ರೂಪಾಯಿ ನೀಡುವುದಾಗಿ ಪ್ರಧಾನಿ ಮೋದಿಯವರು ಭರವಸೆ ನೀಡಿದ ನಂತರ ರೈತರ ಮತಗಳು ಕೈಜಾರಿ ಹೋಗಬಹುದು ಎಂಬ ಭಯದಿಂದ ಕಾಂಗ್ರೆಸ್ ರೈತರನ್ನು ಓಲೈಸಲು ಹೊರಟಿದೆ. ಕಾಂಗ್ರೆಸ್ ನ ಕರ್ಜ್ ಮುಕ್ತಿ ಅಲ್ಲ, ಅದು ಕರ್ಜ್ ಮಾಫಿ ಅದು, ಕರ್ನಾಟಕದಲ್ಲಿ ಇನ್ನೂ ಕೂಡ ರೈತರ ಸಾಲ ಮನ್ನಾ ಯಾಕಾಗಿಲ್ಲ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ಉತ್ತರಿಸಬೇಕೆಂದರು.
ರಾಜ್ಯಸಭಾ ಸದಸ್ಯರಾಗಿರುವ ಇವರು, ಕಾಂಗ್ರೆಸ್ ಪಕ್ಷಕ್ಕೆ ಇದೊಂದು ಬದಲಾವಣೆ ನೀಡುವ ಯೋಜನೆಯಾಗಲಿದೆ. ಸಮಾಜದಲ್ಲಿ ಬಡವರ ಉದ್ದಾರಕ್ಕೆ ಉತ್ತಮ ಯೋಜನೆ. ಹಂತಹಂತವಾಗಿ ಇದನ್ನು ಜಾರಿಗೊಳಿಸಲಾಗುತ್ತಿದ್ದು ಪ್ರಾಯೋಗಿಕ ಮಾದರಿಯಲ್ಲಿ ಜಾರಿಗೆ ತರಲಾಗುವುದು ಎಂದರು.
ಇದಕ್ಕೆ ರಾಜಕೀಯ ವಿಶ್ಲೇಷಕರಿಂದ ಮತ್ತು ತಜ್ಞರಿಂದ ಧನಾತ್ಮಕ ಮತ್ತು ಋಣಾತ್ಮಕ ಎರಡೂ ರೀತಿಯ ಪ್ರತಿಕ್ರಿಯೆ ಸಿಕ್ಕಿದೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಪ್ರತಿನಿಧಿಗಳು ಕೆಲವು ಪ್ರಮುಖರನ್ನು ಮಾತನಾಡಿಸಿದಾಗ:
ಬೆಂಗಳೂರಿನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನ ಹಣಕಾಸು ಮತ್ತು ಲೆಕ್ಕಾಚಾರ ವಿಭಾಗದ ಪ್ರೊಫೆಸರ್ ಸಂಕರ್ಷನ್ ಬಸು ಹೇಳುವುದು ಹೀಗೆ: ಸಾರ್ವತ್ರಿಕ ಮೂಲ ಆದಾಯ(ಯುಬಿಐ)ದಡಿಯಲ್ಲಿ ಈ ಯೋಜನೆಯ ಪರಿಕಲ್ಪನೆಯ ಮೂಲ ಹೊಂದಿದೆ. ಇದನ್ನು ಈ ಹಿಂದೆ ವಿವಿಧ ಸಂದರ್ಭಗಳಲ್ಲಿ ಬಳಸಲಾಗಿದ್ದು ವಿವಿಧ ರೀತಿಯ ಫಲಿತಾಂಶವನ್ನು ನೀಡಿತ್ತು.
ಈ ಯೋಜನೆಯ ಉದ್ದೇಶ ಚೆನ್ನಾಗಿದ್ದು ಮತ್ತು ಜಾರಿಗೆ ಯೋಗ್ಯವಾದದ್ದು. ವೆಚ್ಚ ಕೂಡ ಬಹಳಷ್ಟು ಆಗುವುದಿಲ್ಲ, ಈ ದೃಷ್ಟಿಕೋನದಿಂದ ನೋಡಿದರೆ ದೇಶದಲ್ಲಿ ಬಡತನವನ್ನು ನಿವಾರಿಸಲು ಇದೊಂದು ಮಹತ್ವಪೂರ್ಣ ಯೋಜನೆಯಾಗಿದೆ. ಕೆಲವು ಯೋಜನೆಗಳು ಜಾರಿ ದೃಷ್ಟಿಯಿಂದ ವಿವಿಧ ಫಲಿತಾಂಶಗಳನ್ನು ನೀಡುತ್ತವೆ. ಸರ್ಕಾರ ಯೋಜನೆಗಳನ್ನು ಜಾರಿಗೊಳಿಸುವುದು ದೊಡ್ಡ ವಿಷಯವಲ್ಲ, ಸೂಕ್ತ ಫಲಾನುಭವಿಗಳನ್ನು ಗುರುತಿಸಿ ಅವುಗಳು ಸರಿಯಾಗಿ ಅನುಷ್ಠಾನವಾಗುವಂತೆ ನೋಡಿಕೊಳ್ಳಬೇಕು ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com