ತೇಜಸ್ವಿ ಪರ ಪ್ರಚಾರ: ಒಂದೂ ಮಾತನಾಡದೇ ಅಸಮಾಧಾನಿತರನ್ನು ಒಂದೇ ವೇದಿಕೆಗೆ ಕರೆತಂದ ಅಮಿತ್ ಶಾ!

ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರಕ್ಕೆ ಬಿಜೆಪಿಯಿಂದ ತೇಜಸ್ವಿ ಸೂರ್ಯ ಅವರನ್ನು ಕಣಕ್ಕಿಳಿಸಿದ್ದಕ್ಕೆ ರಾಜ್ಯದ ಹಲವು ನಾಯಕರು ಅಸಮಾಧಾನಗೊಂಡಿದ್ದರು,...
ಬೆಂಗಳೂರಿನಲ್ಲಿ ಅಮಿತ್ ಶಾ ರೋಡ್ ಶೋ
ಬೆಂಗಳೂರಿನಲ್ಲಿ ಅಮಿತ್ ಶಾ ರೋಡ್ ಶೋ
Updated on
ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರಕ್ಕೆ ಬಿಜೆಪಿಯಿಂದ ತೇಜಸ್ವಿ ಸೂರ್ಯ ಅವರನ್ನು ಕಣಕ್ಕಿಳಿಸಿದ್ದಕ್ಕೆ ರಾಜ್ಯದ ಹಲವು ನಾಯಕರು ಅಸಮಾಧಾನಗೊಂಡಿದ್ದರು, ಈ ಅಸಮಾಧಾನವನ್ನೆಲ್ಲಾ ಬದಿಗೆ ಸರಿಸಿ ಪಕ್ಷದ ಪರ ಕೆಲಸ ಮಾಡುವಂತೆ ಸೂಚಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎಲ್ಲಾ ನಾಯಕರನ್ನು ಒಂದೇ ವೇದಿಕೆಗೆ ಕರೆ ತಂದಿದ್ದಾರೆ.
ಮಂಗಳವಾರ ಸಂಜೆ ಅಮಿತ್ ಶಾ ತೇಜಸ್ವಿ ಸೂರ್ಪ ಪರ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ಮತಯಾಚಿಸಿದರು, ಈ ವೇಳೆ ಶಾಸಕರಾದ. ಆರ್.ಅಶೋಕ, ವಿ,ಸೋಮಣ್ಣ, ಸತೀಶ್ ರೆಡ್ಡಿ ಅಮಿತ್ ಶಾ ರ್ಯಾಲಿಯಲ್ಲಿ ಪಾಲ್ಗೊಂಡರು. ಸೋಮವಾರದವರೆಗೆ ಯಾರೊಬ್ಬ ನಾಯಕರು ತೇಜಸ್ವಿ ಸೂರ್ಯ ಪ್ರಚಾರಕ್ಕಿಳಿದಿರಲಿಲ್ಲ, ಮಂಗಳವಾರ ಸಂಜೆ ಅಮಿತ್ ಶಾ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತು ಉಪಾಧ್ಯಾಕ್ಷೆ ತೇಜಸ್ವಿನಿ ಅನಂತ್ ಕುಮಾರ್ ಪಾಲ್ಗೊಂಡಿದ್ದರು.
ರ್ಯಾಲಿಯಲ್ಲಿ ಒಂದೇ ಒಂದು ಮಾತನ್ನು ಆಡದ ಅಮಿತ್ ಶಾ ಸದ್ದಿಲ್ಲದೇ ತಾವು ಮಾಡಬೇಕಿದ್ದ ಕೆಲಸ ಮಾಡಿದರು. ಬನಶಂಕರಿ ದೇವಾಲಯದಿಂದ ಸುಮಾರು ಒಂದೂವರೆ ಕಿ.ಮೀ ದೂರ ನಡೆದ ರೋಡ್ ಶೋ ನಲ್ಲಿ ಒಗ್ಗಟ್ಟು ಪ್ರದರ್ಶಿಸುವಲ್ಲಿ ಶಾ ಯಶಸ್ವಿಯಾಗಿದ್ದಾರೆ.
ಮೋದಿಗಾಗಿ ಮತ ಹಾಕಿ, ಬಿಜೆಪಿ ಗೆ ಮತ ಹಾಕಿ ಎಂದು ಶಾಸಕ ಆರ್ ಅಶೋಕ್ ಹೇಳಿದರು,. ಈ ವೇಳೆ ಸಾವಿರಾರು ಬಿಜೆಪಿ ಕಾರ್ಯಕರ್ತರು ರೋಡ್ ಶೋ ನಲ್ಲಿ ಭಾಗವಹಿಸಿದ್ದರು., ರೋಡ್ ಶೋ ಉದ್ದಕ್ಕೂ ಹಲವು ಜಾನಪದ ತಂಡಗಳು ಪ್ರದರ್ಶನ ನೀಡಿದವು.
ಕೇಸರಿ ಟೀ-ಶರ್ಟ್ ಹಾಗೂ ಹೆಡ್ ಬ್ಯಾಂಡ್ ಧರಿಸಿದ್ದ ಯುವಕರು ನರೇಂದ್ರ ಮೋದಿ ಪರ ಘೋಷಣೆ ಕೂಗಿದರು. ಬೆಂಗಳೂರು ದಕ್ಷಿಣದಲ್ಲಿ ಯುವ ನೇತಾರ ಬರಬೇಕೆಂದು ಬಿಜೆಪಿ ಟಿಕೆಟ್ ನೀಡಿದೆ, ಐಎಎಸ್ ಅಧಿಕಾರಿಯಾಗಲು 25 ವರ್ಷ ವಯಸ್ಸಾಗಿರಬೇಕು, ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಲು 26 ವರ್ಷ ವಯಸ್ಸಾಗಿರಬೇಕು, 27 -28 ವರ್ಷದವರು ಕಂಪನಿಯ ಸಿಇಓ ಆಗಬಹುದಾದರೇ 28 ವರ್ಷದ ವ್ಯಕ್ತಿ ಸಂಸದನಾಗಬಹುದು ಎಂದು ತೇಜಸ್ವಿ ಸೂರ್ಯ ಹೇಳಿದರು. ಇತ್ತೀಚೆಗೆ ತೆರೆಕಂಡ ಬ್ಲಾಕ್ ಬಸ್ಚರ್ ಸಿನಿಮಾ ಗುಲ್ಲಿ ಬಾಯ್ ನ ಅಪ್ನಾ ಟೈಮ್ ಆಯೇಗಾ ಎಂಬ ಹಾಡನ್ನು ಹಲವು ಯುವಕರು ಗುನುಗುತ್ತಿದ್ದರು.
ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಟಿಕೆಟ್ ತಪ್ಪಿದ್ದಕ್ಕೆ ಹಲವು ಮಹಿಳಾ ಕಾರ್ಯಕರ್ತರು ಇನ್ನೂ ಬೇಸರ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com