ಪದೇ ಪದೇ ನನ್ನ ವಾಹನ ತಪಾಸಣೆ ಮಾಡಿ ಏನು ಸಾಬೀತುಪಡಿಸಲು ಹೊರಟಿದ್ದಾರೆ: ಸಿಎಂ ಆಕ್ರೋಶ

ಚೆಕ್ ಪೋಸ್ಟ್ ಗಳಲ್ಲಿ ತಮ್ಮ ವಾಹನವನ್ನು ಪದೇ ಪದೇ ತಪಾಸಣೆ ಮಾಡುವುದಕ್ಕೆ ಸಿಎಂ ಹೆಚ್ ಡಿ...
ಸಿಎಂ ಕುಮಾರಸ್ವಾಮಿ
ಸಿಎಂ ಕುಮಾರಸ್ವಾಮಿ
Updated on
ಕಾರವಾರ: ಚೆಕ್ ಪೋಸ್ಟ್ ಗಳಲ್ಲಿ ತಮ್ಮ ವಾಹನವನ್ನು ಪದೇ ಪದೇ ತಪಾಸಣೆ ಮಾಡುವುದಕ್ಕೆ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ನಂತರ ಕಳೆದ 20 ದಿನಗಳಲ್ಲಿ ಸಿಎಂ ಕುಮಾರಸ್ವಾಮಿ ರಾಜ್ಯದ ಹಲವು ಕಡೆ ಪ್ರವಾಸ ಮಾಡಿದ್ದ ಸಂದರ್ಭದಲ್ಲಿ ಹಲವು ಚೆಕ್ ಪೋಸ್ಟ್ ಗಳಲ್ಲಿ ಅವರ ವಾಹನವನ್ನು ತಪಾಸಣೆ ಮಾಡಲಾಗಿದೆ.
ನಿನ್ನೆ ಅವರು ಕಾರವಾರಕ್ಕೆ ಜೆಡಿಎಸ್ ಅಭ್ಯರ್ಥಿ ಆನಂದ್ ಆಸ್ನೋಟಿಕರ್ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಅವರ ಕಾರನ್ನು ಗೋಕರ್ಣ ಮತ್ತು ಕಾರವಾರ ಮಧ್ಯೆ ಎರಡು ಬಾರಿ ತಪಾಸಣೆ ನಡೆಸಲಾಗಿತ್ತು. ತಮ್ಮ ವಾಹನವನ್ನು ಪದೇ ಪದೇ ಏಕೆ ತಪಾಸಣೆ ಮಾಡುತ್ತಿದ್ದಾರೆ ಎಂದು ಕೇಳಿದ್ದಕ್ಕೆ ಚುನಾವಣಾ ಆಯೋಗದಿಂದ ಅಧಿಕಾರಿಗಳಿಗೆ ವಾಹನ ತಪಾಸಣೆ ಮಾಡುವಂತೆ ಆದೇಶ ಬಂದಿರಬೇಕು ಎನ್ನುತ್ತಾರೆ ಸಿಎಂ ಕುಮಾರಸ್ವಾಮಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com