ನರೇಂದ್ರ ಮೋದಿ
ಕರ್ನಾಟಕ
ಪಿಎಂ ಮೋದಿ ರಾಜ್ಯ ಪ್ರವಾಸ ಮುಂದೂಡಿಕೆ
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗವಹಿಸಬೇಕಿದ್ದ ರಾಜ್ಯದ ಎರಡು ಬೃಹತ್ ಸಮಾವೇಶಗಳು ಒಂದು ದಿನ ಮುಂದೂಡಲ್ಪಟ್ಟಿವೆ.
ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗವಹಿಸಬೇಕಿದ್ದ ರಾಜ್ಯದ ಎರಡು ಬೃಹತ್ ಸಮಾವೇಶಗಳು ಒಂದು ದಿನ ಮುಂದೂಡಲ್ಪಟ್ಟಿವೆ.
ರಾಜ್ಯದ ಚಿತ್ರದುರ್ಗ ಹಾಗೂ ಮೈಸೂರಿನಲ್ಲಿ ಎಪ್ರಿಲ್ 8ಕ್ಕೆ ನಡೆಯಬೇಕಾಗಿದ್ದ ಸಮಾವೇಶಗಳು ಒಂದು ದಿನ ಮುಂದೂಡಲ್ಪಟ್ಟು ಎಪ್ರಿಲ್ 9ಕ್ಕೆ ನಿಗದಿಯಾಗಿದೆ.
ಯುಗಾದಿ ಹಬ್ಬದ ಕಾರಣ ಪ್ರಚಾರ ಸಮಾವೇಶ ಒಂದು ದಿನ ಮುಂದೂಡಲ್ಪಟ್ಟಿದೆ ಎಂದು ತಿಳಿದು ಬಂದಿದೆ. ಶನಿವಾರ ಯುಗಾದಿ ಹಬ್ಬವಿದ್ದು ರಾಜ್ಯದ ಜನರು ತಮ್ಮ ತಮ್ಮ ಊರಿಗೆ ತೆರಳುವವರಿದ್ದಾರೆ. ಹಬ್ಬ ಮುಗಿಸಿ ಮರುದಿನವೇ ಈ ಸಮಾವೇಶ ನಡೆಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವುಅದು ಅನುಮಾನವಿದ್ದ ಕಾರಣ ಸಮಾವೇಶವನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ.
ಮಂಗಳೂರು, ಚಿಕ್ಕೋಡಿ, ಬೆಂಗಳೂರು, ಗಂಗಾವತಿ ಸೇರಿದಂತೆ ರಾಜ್ಯದ ಎಂಟು ಕಡೆಗಳಲ್ಲಿ ಪ್ರಧಾನಿ ಮೋದಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ