ಬದ್ದವೈರಿಗಳೀಗ ಆಪ್ತಮಿತ್ರರು: ಬೆಂಗಳೂರಿನ ರ್ಯಾಲಿಯಲ್ಲಿ ಒಟ್ಟಾಗಿ ಕಾಣಿಸಿಕೊಂಡ ದೇವೇಗೌಡ-ಸಿದ್ದರಾಮಯ್ಯ

ಕೇವಲ 10 ತಿಂಗಳ ಹಿಂದೆ, ಅವರು ಭಾರತ-ಪಾಕಿಸ್ತಾನದ ರೀತಿ ಬದ್ದ ವೈರಿಗಳಾಗಿದ್ದವರು. ಆದರೆ ಈಗ ಅವರೇ ಭಾರತ-ಭೂತಾನ್ ಗಳಂತೆ ಉತ್ತಮ ಸ್ನೇಹಿತರಾಗಿದ್ದಾರೆ.
ಬೆಂಗಳೂರಿನ ರ್ಯಾಲಿಯಲ್ಲಿ ಒಟ್ಟಾಗಿ ಕಾಣಿಸಿಕೊಂಡ ದೇವೇಗೌಡ-ಸಿದ್ದರಾಮಯ್ಯ
ಬೆಂಗಳೂರಿನ ರ್ಯಾಲಿಯಲ್ಲಿ ಒಟ್ಟಾಗಿ ಕಾಣಿಸಿಕೊಂಡ ದೇವೇಗೌಡ-ಸಿದ್ದರಾಮಯ್ಯ
Updated on
ಬೆಂಗಳೂರು: ಕೇವಲ 10 ತಿಂಗಳ ಹಿಂದೆ, ಅವರು ಭಾರತ-ಪಾಕಿಸ್ತಾನದ ರೀತಿ ಬದ್ದ ವೈರಿಗಳಾಗಿದ್ದವರು. ಆದರೆ ಈಗ ಅವರೇ ಭಾರತ-ಭೂತಾನ್ ಗಳಂತೆ ಉತ್ತಮ ಸ್ನೇಹಿತರಾಗಿದ್ದಾರೆ.ರಾಜಕೀಯ ರಂಗ ಯಾರನ್ನಾದರೂ ಬದ್ದ ವೈರಿಗಳನ್ನು ಸ್ನೇಹಿತರನ್ನಾಗಿ, ಸ್ನೇಹಿತರನ್ನೇ ವೈರಿಗಳನ್ನಾಗಿ ಮಾಡಬಲ್ಲದು ಎನ್ನಲು ಇದುವೇ ಸಾಕ್ಷಿ.ನಾವಿಲ್ಲಿ ಹೇಳುತ್ತಿರುವುದು ಜೆಡಿಎಸ್ ಮುಖ್ಯಸ್ಥ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತಂತೆ ಎನ್ನುವುದನ್ನು ನೀವು ಸಹ ಊಹಿಸಿರಬಹುದು. ಈ ಇಬ್ಬರೂ ನಾಯಕರು ಈಗ ಉತ್ತಮ ಸ್ನೇಹಿತರಾಗಿದ್ದಾರೆ. ಇಬ್ಬರೂ ಸೇರಿ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಇದು ಮೈತ್ರಿ ಪಕ್ಷಗಳು ಒಗ್ಗೂಡಿ ನಡೆಸಿದ್ದ ಮೊದಲ ರ್ಯಾಲಿಯಾಗಿದ್ದು ಯುಗಾದಿ ಹಬ್ಬದ ಮುನ್ನಾ ದಿನ ದೇವೇಗೌಡ ಹಾಗೂ ಸಿದ್ದರಾಮಯ್ಯ ಒಟ್ಟಾಗಿ ಮೈತ್ರಿ ಅಭ್ಯರ್ಥಿ ಕಾಂಗ್ರೆಸ್ ನ ಕೃಷ್ಣ ಭೈರೇಗೌಡರ ಪರ ಮತ ಯಾಚನೆ ಮಾಡಿದ್ದಾರೆ.
ಒಟ್ಟು ಐದು ರ್ಯಾಲಿಗಳ ಮೂಲಕ ಮೈತ್ರಿ ಪಕ್ಷದ ಅಭ್ಯರ್ಥಿಗಳಾದ ಕೃಷ್ಣ ಭೈರೇಗೌಡ, ರಿಜ್ವಾನ್ ಅರ್ಷದ್, ಬಿ.ಕೆ. ಹರಿಪ್ರಸಾದ್, ಸಿ.ಎಚ್ ವಿಜಯಶಂಕರ್, ಮಂಡ್ಯದಲ್ಲಿ ನಿಖಿಲ್ ಕುಮಾರ್, ಹಾಸನದಲ್ಲಿ ಪ್ರಜ್ವಲ್ ಮತ್ತು ತುಮಕೂರ್ನಲ್ಲಿ ದೇವೇಗೌಡ ಅವರ ಜಯವನ್ನು ಖಾತ್ರಿಪಡಿಸಲು ಅವರು ತೀರ್ಮಾನಿಸಿದ್ದಾರೆ.
ಶುಕ್ರವಾರ, ದೇವೇಗೌಡ ಮತ್ತು ಸಿದ್ದರಾಮಯ್ಯ ಒಂದೇ ಕಡೆ ಅಕ್ಕಪಕ್ಕದಲ್ಲಿ ಕುಳಿತು, ಕೈಯಲ್ಲಿ ಕೈ ಹಿಡಿದು ಬಿಜೆಪಿ ಬೆಂಬಲಿತ ಮತದಾರರನ್ನು ತಮ್ಮ ಕಡೆ ಸೆಳೆದುಕೊಳ್ಲಲು ಪ್ರಯತ್ನಿಸಿದ್ದನ್ನು ಕಾಣಬಹುದಾಗಿತ್ತು. ಈ ವೇಳೆ ಮಾತನಾಡಿದ ದೇವೇಗೌಡ ಮೋದಿ ಹಾಗೂ ಮಾದ್ಯಮಗಳ ವಿರುದ್ಧ ಹರಿಹಾಯ್ದರು. "ಮೋದಿ ಎಷ್ಟು ಬಾರಿ ಬೆಂಗಳೂರಿಗೆ ಭೇಟಿ ನೀಡಿದ್ದಾರೆ?ಬೆಂಗಳೂರು  ಐಟಿ ನಗರ ಎಂದು ಖ್ಯಾತಿ ಗಳಿಸಲು ಕಾರಣರಾದವರು ನಾವು.ಸಿದ್ದರಾಮಯ್ಯ ಹಣಕಾಸು ಸಚಿವರಾಗಿದ್ದರು, ನಾನು ನಗರದ ಅಭಿವೃದ್ದಿಗಾಗಿ ಕೆಲಸ ಮಾಡಿದೆ."
ಸಿದ್ದರಾಮಯ್ಯ ಮಾತನಾಡಿ :ನಾನು ದೇವೇಗೌಡರಿಗೆ ಬೆಂಗಳೂರಿನಿಂದ ಸ್ಪರ್ಧಿಸಲು ಕೇಳಿದ್ದೆ, ಆದರೆ ಅವರು ತುಮಕೂರನ್ನು ಆಯ್ಕೆ ಮಾಡಿಕೊಂಡ ಬಳಿಕ ಕೃಷ್ಣ ಭೈರೇಗೌಡರನ್ನು ಕಣಕ್ಕಿಳಿಸಲಾಗಿದೆ. ಆದರೆ ಕೃಷ್ಣ ಭೈರೇಗೌಡ ಸಹ ಲೋಕಸಭೆ ಕಣಕ್ಕಿಳಿಯಲು ಆಸಕ್ತಿ ತಾಳಿರಲಿಲ್ಲ. ಆದರೆ ಎಲ್ಲಾ ಶಾಸಕರ ಒತ್ತಾಯಕ್ಕೆ ಮಣಿದು ಡಿವಿ ಸದಾನಂದಗೌಡರನ್ನು ಸೋಲಿಸುವ ಉದ್ದೇಶದೊಡನೆ ಸ್ಪರ್ಧೆಗಿಳಿದಿದ್ದಾರೆ." ಎಂದರು.
ಮತ್ತೆ ತಮ್ಮ ಸಾಂಪ್ರದಾಯಿಕ ಶೈಲಿಯಲ್ಲಿ ಸದಾನಂದಗೌಡರಿಗೆ ಟಾಂಗ್ ಕೊಟ್ಟ ಸಿದ್ದರಾಮಯ್ಯ " ಅವರು ನಗುತ್ತಿರುತ್ತಾರೆ ಹೊರತು ಕೆಲಸ ಮಾಡುವುದಿಲ್ಲ, ಅವರು ರೈಲ್ವೆ ಸಚಿವರಾಗಿ ಏನೂ ಪ್ರಯೋಜನವಾಗಿಲ್ಲ," ಎಂದು ಜರಿದರು. ಇದಕ್ಕೆ ಮುನ್ನ ಪುಲಕೇಶಿ ನಗರ ರ್ಯಾಲಿಯಲ್ಲಿ  ಎಂಎಲ್ಎ ಅಖಂಡ ಶ್ರೀನಿವಾಸ್ ಮೂರ್ತಿ ಅವರು ಕೃಷ್ಣ ಬೈರೆ ಗೌಡ ಅವರಿಗೆ ಒಂದು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲು ಸಹಾಯ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿದ್ದರು."ಬಿಜೆಪಿ ಮತ ಕೇಳಲು ಬಂದಾಗ ನೀವು ನಿಮ್ಮ ಚೀಲವನ್ನು ಹಿಡಿಯಿರಿ, ಮೋದಿ ಪ್ರತಿ ಮತದಾರರಿಗೆ 15  ಲಕ್ಷ ನೀಡಿಲ್ಲ ಬದಲಿಗೆ ಅವರು ನಿಮ್ಮಿಂದ ಕಿತ್ತುಕೊಂಡರೆನ್ನುವುದು ಅವರಿಗೆ ತಿಳಿಸಿ" ಅವರು ಹೇಳೀದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com