ರಿಯಾಲಿಟಿ ಚೆಕ್: ರಾಹುಲ್, ದೇವೇಗೌಡರ ಒಗ್ಗಟ್ಟಿನ ಸಂದೇಶದ ಹೊರತಾಗಿಯೂ ಮೈತ್ರಿಯಲ್ಲಿ ಭಿನ್ನಮತದ ಹೊಗೆ!

ಕಳೆದ ವರ್ಷ ರಾಜ್ಯದ ಮೈತ್ರಿ ಸರ್ಕಾರ ರಚನೆಯಾದಂದಿನಿಂದಲೂ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ತಮ್ಮ ಸರ್ಕಾರ ಎಷ್ಟು ಸುಭದ್ರವಾಗಿದೆ ಎಂದು ಹೇಳುತ್ತಾ ಬರುವುದನ್ನು ಎಂದಿಗೂ ಬಿಟ್ಟಿಲ್ಲ. ಈ ನಡುವೆ....
ರಾಹುಲ್, ದೇವೇಗೌಡ
ರಾಹುಲ್, ದೇವೇಗೌಡ
Updated on
ಬೆಂಗಳೂರು: ಕಳೆದ ವರ್ಷ ರಾಜ್ಯದ ಮೈತ್ರಿ ಸರ್ಕಾರ ರಚನೆಯಾದಂದಿನಿಂದಲೂ ಕಾಂಗ್ರೆಸ್ ಹಾಗೂ ಜೆಡಿಎಸ್  ನಾಯಕರು ತಮ್ಮ ಸರ್ಕಾರ ಎಷ್ಟು ಸುಭದ್ರವಾಗಿದೆ ಎಂದು ಹೇಳುತ್ತಾ ಬರುವುದನ್ನು ಎಂದಿಗೂ ಬಿಟ್ಟಿಲ್ಲ. ಈ ನಡುವೆ ವಿರೋಧ ಪಕ್ಷ ಬಿಜೆಪಿ ಸರ್ಕಾರದ ಭದ್ರತೆಯ ಕುರಿತು ಸಾಕಷ್ಟು ಬಾರಿ ಕೆಣಕಿ ಮಾತನಾಡಿದೆ. ಆದರೆ ಈಗ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮೈತ್ರಿ ಕೂಟದ ನಾಯಕರಾದ ರಾಹುಲ್ ಗಾಂಧಿ ಹಾಗೂ ದೇವೇಗೌಡರ ಆದೇಶದ ಹೊರತಾಗಿಯೂ ಮೈತ್ರಿ ಪಕ್ಷದ ಕಾರ್ಯಕರ್ತರಲ್ಲಿ ಒಗ್ಗಟ್ಟಿನ ಪ್ರದರ್ಶನ ಕಾಣುತ್ತಿಲ್ಲ.
ತಮ್ಮ ಸ್ಮಾನ ವಿರೋಧಿಯಾಗಿರುವ ಬಿಜೆಪಿಯನ್ನು ಆಡಳಿತದಿಂದ ದೂರವಿಡಲು ಲೋಕಸಭೆ ಚುನಾವಣೆ ವೇಳೆ ಮೈತ್ರಿಯ ಅಂಗಪಕ್ಷಗಳು ಮತ್ತೆ ಒಂದಾಗಿದ್ದೇವೆ ಎಂದರೂ  ಸ್ಥಳೀಯ ಮಟ್ಟದಲ್ಲಿ ಭಿನ್ನಾಭಿಪ್ರಾಯಗಳು ಕಾಣಿಸುತ್ತಿದೆ.ಈ ಕುರಿತಂತೆ ಪತ್ರಿಕೆ ನಡೆಸಿರುವ ರಿಯಾಲಿಟಿ ಚೆಕ್ ನಲ್ಲಿ ಮೇಲ್ನೋಟಕ್ಕೆ ಎಲ್ಲಾ ಶಾಂತವಾಗಿರುವಂತೆ ಕಂಡರೂ ಸೂಕ್ಷ್ಮವಾಗಿ ನೋಡಿದಾಗ ಎಲ್ಲವೂ ಸರಿಯಿಲ್ಲ ಎನ್ನುವುದು ತಿಳಿದಿದೆ.
ಉದಾಹರಣೆಗೆ, ತುಮಕೂರು ಜಿಲ್ಲೆಯ ಉಸ್ತುವಾರಿ ಸಚಿವ ಮತ್ತು ಕಾಂಗ್ರೆಸ್ ನಾಯಕ ಜಿ.ಪರಮೇಶ್ವರ ಅವರು ಜೆಡಿಎಸ್ ಮುಖಂಡ ದೇವೇಗೌಡ ಪ್ರಚಾರಕ್ಕೆ ಆಗಮಿಸಲಿಲ್ಲ. ಆಅಲ್ಲದೆ ಬದ್ದ ವೈರಿ ಮಾಜಿ ಜೆಡಿಎಸ್ ಶಾಸಕ ಸುಧಾಕರ ಲಾಲ್ ಅವರೊಡನೆ ವೇದಿಕೆ ಹಂಚಿಕೊಂಡಿದ್ದಾರೆ.ಹಾಗೆಯೇ  ಈಗಲೂ ಏಕತೆಯ ಬಗ್ಗೆ ಮಾತನಾಡುತ್ತಾರೆ. ತುಮಕೂರು ಕಾಂಗ್ರೆಸ್ ನ ಇಬ್ಬರು ದೊಡ್ಡ ನಾಯಕರಾದ ಕ್ಯಾತಸಂದ್ರ ರಾಜಣ್ಣ ಹಾಗೂ ಎಸ್.ಪಿ. ಮುದ್ದಹನುಮೇಗೌಡ ದೇವೇಗೌಡರ ಪ್ರಚಾರ ಕಾರ್ಯದಲ್ಲಿ ಇದುವರೆಗೆ ಕಾಣಿಸಿಕೊಂಡಿಲ್ಲ. ಇನ್ನು ಮುದ್ದಹನುಮೇಗೌಡ ದೇವೇಗೌಡರ ವಿರುದ್ಧ ಸ್ಪರ್ಧಿಸಲು ಅಣಿಯಾಗಿದ್ದು ಹಿರಿಯ ನಾಯಕರ ಒತ್ತಡದಿಂದ ನಾಮಪತ್ರ ವಾಪಾಸ್ ಪಡೆಇದ್ದಾರೆ.
ಇನ್ನು ಮಂಡ್ಯದಲ್ಲಿ ನಿಖಿಲ್ ಕುಮಾರ್ ಪರ ಮೈತ್ರಿಯ ಅಂಗಪಕ್ಷ ಕಾಂಗ್ರೆಸ್ ನ ಸ್ಥಳೀಯ ನಾಯಕರು ಯಾರೂ ಪ್ರಚಾರಕ್ಕೆ ಹೋಗುತ್ತಿಲ್ಲ. ಬದಲಿಗೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಪ್ರಚಾರ ನಡೆಸಿದ್ದಾರೆ.
ಸಮ್ಮಿಶ್ರ ಸರ್ಕಾರದ ಪಾಲಿಗೆ ಟ್ರಬಲ್ ಶೂಟರ್ ಆಗಿರುವ ಡಿಕೆಶಿ ತಾವೇನೋ ಮೈತ್ರಿ ಅಭ್ಯರ್ಥಿಗಳ ಪ್ರಚಾರದಲ್ಲಿ ಭಗವಹಿಸಿದ್ದಾರೆ. ಆದರೆ ಚೆಲುವನಾರಾಯಣ ಸ್ವಾಮಿ, ನರೇಂದ್ರ ಸ್ವಾಮಿ ಹಾಗೂ ಆರ್. ಬಂಡಿಸಿದ್ದೇಗೌಡರು ಯಾವುದೇ ಪ್ರಚಾರದಲ್ಲಿ ಭಾಗವಹಿಸುತ್ತಿಲ್ಲ. ಇವರ ಗೈರುಹಾಜರಿ ಪಕ್ಷದ ಆಂತರಿಕ ವಲಯದಲ್ಲಿ ಸಣ್ಣ ಬಿರುಗಾಳಿ ಎಬ್ಬಿಸಬೇಕಿತ್ತು. ಆದರೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಎಲ್ಲವನ್ನೂ ತುಸು ತಣ್ಣಗಾಗಿಸಿದ್ದಾರೆ.
ಹಾಸನದಲ್ಲಿ ದೇವೇಗೌಡರ ಮೊಮ್ಮಗನನ್ನು ಬೆಂಬಲಿಸಲು ಕಾಂಗ್ರೆಸ್ ತಳಮಟ್ಟದ ಕಾರ್ಯಕರ್ತರು ಸಿದ್ದರಿಲ್ಲ ಎನ್ನುವ್ದು ಬಹಿರಂಗವಾಗಿದೆ.
ಇತ್ತ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಕಾಂಗ್ರೆಸ್ ನ ಡಿಕೆ ಸುರೇಶ್ ಕುರಿತು ಅನಿತಾ ಕುಮಾರಸ್ವಾಮಿ ಪ್ರಚಾಅ ನಡೆಸಿದರೆ ಬೀದರ್ ನಲ್ಲಿ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ನ ಈಶ್ವರ್ ಖಂಡ್ರೆ ಪರ ಮತ ಯಾಚಿಸಿದ್ದಾರೆ. ಆದರೆ ವಿಜಯಪುರ ಅಥವಾ ಉತ್ತರ ಕನ್ನಡದಲ್ಲಿ ಜೆಡಿಎಸ್ ಅಭ್ಯರ್ಥಿಗಳು ತಮ್ಮ ಸ್ಥಾನ ಖಚಿತಪಡಿಸಿಕೊಳ್ಲಲು ತಿಣುಕಾಡುತ್ತಿದ್ದಾರೆ.
ತುಮಕೂರು, ಮಂಡ್ಯದ ಆಂತರಿಕ ಪ್ರಚಾರ ಸಮಸ್ಯೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಕೇಳಿದಾಗ "ಪಕ್ಶ್ದಲ್ಲಿ ನಾವು ಶೇ.90 ಒಗ್ಗಟ್ಟಿನ ಪ್ರಚಾರ ನಡೆಸಿದ್ದೇವೆ, ಇನ್ನು ಶೇ.10 ಸಮಸ್ಯೆಗಳಿದೆ. ನಾವು ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ಹೇಳಿದ್ದಾರೆ. ಅಲ್ಲದೆ "ಏಪ್ರಿಲ್ 5 ರಿಂದ ದೇವೇಗೌಡ ಹಾಗೂ ಸಿದ್ದರಾಮಯ್ಯ ರಾಜ್ಯಾದ್ಯಂತ ಒಟ್ಟಾಗಿ ಪ್ರಚಾರ ಕೈಗೊಳ್ಲಲಿದ್ದಾರೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com