ಯುವಜನಾಂಗದ ನಾಡಿಮಿಡಿತ ಅರಿತಿದ್ದೇನೆ: ಹಾಲಿ ಸಂಸದರಿಂದ ಒಂದಿಷ್ಟು ಅಭಿವೃದ್ಧಿಯಾಗಿಲ್ಲ; ಮಿಥುನ್ ರೈ

: ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಳಿನ್ ಕುಮಾರ್ ಕಟೀಲ್ ಸ್ಪರ್ಧಿಸಿದ್ದಾರೆ, ಈ ಬಾರಿ ಕಾಂಗ್ರೆಸ್ ನಿಂದ ಮೈತ್ರಿ ಅಭ್ಯರ್ಥಿಯಾಗಿ ....
ಮಿಥುನ್ ರೈ
ಮಿಥುನ್ ರೈ
Updated on
ಮಂಗಳೂರು: ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಳಿನ್ ಕುಮಾರ್ ಕಟೀಲ್ ಸ್ಪರ್ಧಿಸಿದ್ದಾರೆ, ಈ ಬಾರಿ ಕಾಂಗ್ರೆಸ್ ನಿಂದ ಮೈತ್ರಿ ಅಭ್ಯರ್ಥಿಯಾಗಿ ಮಿಥುನ್ ರೈ ಸ್ಪರ್ಧಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ದಿ ನ್ಯಊ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಂದರ್ಶನ ನೀಡಿದ್ದಾರೆ.
ಪ್ರ: ಕಾಂಗ್ರೆಸ್ ಪರವಾಗಿರುವ ಅಂಶಗಳೇನು?
ಹಿಂದುಳಿದ ಅಭಿವೃದ್ಧಿ, ಹಾಲಿ ಸಂಸದರು ಜನರ ಸಮಸ್ಯೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ, ಇದರಿಂದಾಗಿ  ನಿರುದ್ಯೋಗ ಸಮಸ್ಯೆ ಹೆಚ್ಚಿದೆ, ಇದೆ ನಮಗೆ ದೊಡ್ಡ ಲಾಭ, ಬಿಜಪಿ ಅಬ್ಯರ್ಥಿಯನ್ನು ಬದಲಾಯಿಸಬೇಕೆಂದು ಬಯಸಿದ್ದರು, ಇದು ಕೂಡ ನನಗೆ ಹೆಚ್ಚು ಪ್ರಯೋಜನವಾಗಿದೆ.
ಪ್ರ: ಗೆಲುವು ಸಾಧಿಸಲು ನಿಮ್ಮ ರಣತಂತ್ರವೇನು?
ಎಲ್ಲದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ನಲ್ಲಿ ಒಗ್ಗಟ್ಟಿದೆ, ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು ಪಕ್ಷದ ಗೆಲುವಿಗಾಗಿ ಕೆಲಸ ಮಾಡುತ್ತಿದ್ದಾರೆ, ನಮ್ಮದು ಜಾತ್ಯಾತೀತ ಪಕ್ಷ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೆಲ್ಲಲು ಶ್ರಮಿಸುತ್ತಿದ್ದೇವೆ.
ಪ್ರ: ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿನ ಪ್ರಮುಥ ಅಂಶಗಳೇನು?
ಜನರಿಗೆ ಉದ್ಯೋಗ ಹಾಗೂ ಜಿಲ್ಲಾ ಅಭಿವೃದ್ಧಿಗೆ ನಾನು ಹೋರಾಡುತ್ತೇನೆ, ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮವನ್ನು ನಿರ್ಲಕ್ಷ್ಯಿಸಲಾಗಿದೆ, ಕರಾವಳಿ ಅಭಿವೃದ್ಧಿಗೆ ನಮ್ಮ ಸಂಸದರು ಯಾವುದೇ ಕ್ರಮ ಕೈಗೊಂಡಿಲ್ಲ, ನಮ್ಮಲ್ಲಿ ಎಂಜಿನೀಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳು ಇವೆ, ಆದರೂ ಇಲ್ಲಿಂದ ಉದ್ಯೋಗ ಅರಸಿ ವಲಸೆ ಹೋಗುವುದು ನಿಂತಿಲ್ಲ, ನಿರುದ್ಯೋಗ ಮತ್ತು ಕೋಮು ಸಮಸ್ಯೆಗಳನ್ನು ಬಗೆಹರಿಸುತ್ತೇವೆ.
ಪ್ರ: ಒಂದು ವೇಳೆ ನೀವು ಗೆದ್ದರೇ ಮತದಾರರಿಗೆ ನಿಮ್ಮ ಭರವಸೆ ಏನು?
ನನಗೆ 34 ವರ್ಷ. ಯುವ ಜನಾಂಗದ ನಾಡಿ ಮಿಡಿತ ಅರಿತಿದ್ದೇನೆ, ಜಿಲ್ಲೆ ಅಭಿವೃದ್ಧಿಯಲ್ಲಿ ಹಿಂದೆ ಉಳಿಯಲಿ ನಾನು ಬಿಡುವುದಿಲ್ಲ,ಎಲ್ಲವನ್ನೂ ನಾನು ಇಲ್ಲಿ ಹೇಳಿಕೊಳ್ಳಲು ನಾನು ಬಯಸುವುದಿಲ್ಲ,ನನ್ನ ಕೆಲಸ ಮಾತನಾಡುತ್ತದೆ.
ದಕ್ಷಿಣ ಭಾರತದಲ್ಲಿ ಬಿಜೆಪಿ ಹೆಬ್ಬಾಗಿಲು ತೆಗೆಯಲು ದಕ್ಷಿಣ ಕನ್ನಡ ಮುಖ್ಯದ್ವಾರವಾಗಿದೆ ಹೌದಾ?
ಬಿಜೆಪಿ ಸಂಸದರಿಗೆ 10 ವರ್ಷ ಅವಕಾಶ ನೀಡಲಾಗಿತ್ತು, ಆದರೆ ಅವರು ಯಾವುದೇ ಅಭಿವೃದ್ಧಿ ಕೆಲಸ ಮಾಡಲು ವಿಫಲರಾಗಿದ್ದಾರೆ, ಒಂದು ಸಣ್ಣ ಕೆಲಸವನ್ನು ಮಾಡಲು ಅವರಿಂದ ಸಾಧ್ಯವಾಗಿಲ್ಲ , ಹೀಗಾಗಿ ನನಗೆ ಒಂದು ಅವಕಾಶ , ನಿಮ್ಮ ಸೇವೆ ಮಾಡಲು ಅವಕಾಶ ಕೊಡಿ ಎಂದು ಕೇಳುತ್ತಿದ್ದೇನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com