ಅಷ್ಟಕ್ಕೂ ಆ ಕಪ್ಪು ಪೆಟ್ಟಿಗೆಯಲ್ಲಿ ಏನಿತ್ತು?; ಜನರಿಗೆ ಕುತೂಹಲ ಮೂಡಿಸಿದ ಪೆಟ್ಟಿಗೆಯ ರಹಸ್ಯ

ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಕಂಡುಬಂದ ಬ್ಲಾಕ್ ಬಾಕ್ಸ್, ಕಪ್ಪು ...
ವಿಡಿಯೊದಲ್ಲಿ ಸೆರೆಯಾದ ದೃಶ್ಯ
ವಿಡಿಯೊದಲ್ಲಿ ಸೆರೆಯಾದ ದೃಶ್ಯ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಕಂಡುಬಂದ ಬ್ಲಾಕ್ ಬಾಕ್ಸ್, ಕಪ್ಪು ಪೆಟ್ಟಿಗೆ ಜನರ ಕುತೂಹಲಕ್ಕೆ ಕಾರಣವಾಗಿದೆ. ಇದು ವಿಮಾನದಲ್ಲಿನ ಬ್ಲಾಕ್ ಬಾಕ್ಸ್ ಖಂಡಿತಾ ಅಲ್ಲ.
ಕಳೆದ ವಾರ ನರೇಂದ್ರ ಮೋದಿಯವರ ವಿಮಾನದಿಂದ ಕೆಳಗಿಳಿಸಿದ ರಹಸ್ಯ ಪೆಟ್ಟಿಗೆಯಿರಬಹುದೇ, ಅವರ ಬಟ್ಟೆಯಾಗಿರಬಹುದೇ, ಮತದಾರರಿಗೆ ಹಂಚಲು ಇರುವ ಹಣವಾಗಿರಬಹುದೇ ಅಥವಾ ಬೇರೇನಾದರೇ ಅಥವಾ ಜನರು ಟ್ವಿಟ್ಟರ್ ನಲ್ಲಿ ಚರ್ಚಿಸಲು ಆರಂಭಿಸಿದರು.
ನಿನ್ನೆ ಪ್ರಧಾನಿಯವರು ಕರಾವಳಿ ಮಂಗಳೂರಿನಲ್ಲಿ ಚುನಾವಣಾ ರ್ಯಾಲಿಯಲ್ಲಿ ನಿರತವಾಗಿದ್ದರೆ ಅವರ ಹೆಲಿಕಾಪ್ಟರ್ ನಿಂದ ಕಾರಿಗೆ ಹಾಕಲಾಗಿದ್ದ ಕಪ್ಪು ಬಾಕ್ಸ್ ಬಗ್ಗೆ ಎಲ್ಲರೂ ತಲೆಕೆಡಿಸಿಕೊಂಡಿದ್ದರು. ಅದರಲ್ಲೇನಿರಬಹುದು ಎಂಬುದೇ ಪ್ರತಿಯೊಬ್ಬರ ಸಂಶಯ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಕರ್ನಾಟಕ ಚುನಾವಣಾ ಆಯುಕ್ತರನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದರು.
ಕಳೆದ ವಾರ ಮೋದಿಯವರು ಚಿತ್ರದುರ್ಗಕ್ಕೆ ಪ್ರಚಾರ ಮಾಡಲು ಬಂದಿದ್ದಾಗ ಮೋದಿಯವರ ಭದ್ರತೆಗಿರುವ ಇಬ್ಬರು ವ್ಯಕ್ತಿಗಳು ಭಾರವಾದ ದೊಡ್ಡ ಕಪ್ಪು ಟ್ರಂಕ್ ವೊಂದನ್ನು ತೆಗೆದುಕೊಂಡು ಹೋಗಿ ಪ್ರಧಾನಿಯವರ ಬೆಂಗಾವಲು ಕಾರಿಗೆ ಹಾಕುತ್ತಿರುವ ವಿಡಿಯೊ ಸೆರೆಯಾಗಿ ಅದು ಟ್ವಿಟ್ಟರ್, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಅರುಣಾಚಲ ಪ್ರದೇಶದಲ್ಲಿ ಪ್ರಧಾನಿ ಮೋದಿಯವರು ರ್ಯಾಲಿ ಆರಂಭಿಸುವುದಕ್ಕೆ ಮೊದಲು ಮುಖ್ಯಮಂತ್ರಿ ಪೇಮ ಖಂಡು  ಅವರ ಬೆಂಗಾವಲಿನಿಂದ 1.8 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿತ್ತು. ಮೋದಿ ಜನರನ್ನು ಮೋಸ ಮಾಡುತ್ತಿದ್ದಾರೆ. ನಾನು ಈ ಪೆಟ್ಟಿಗೆಯನ್ನು ಅಸ್ಸಾಂನಲ್ಲಿ ನೋಡಿದ್ದೆ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ಇನ್ನು ಕೆಲವರು ಅದು ಬೆಳ್ಳಿ ಅಥವಾ ಚಿನ್ನವಾಗಿರಬಹುದೇ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com