ಲೋಕಸಭೆ ಸಮರ: ಸಂಕಲ್ಪ ಯಾತ್ರೆ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕಣ್ಣಿಟ್ಟ ಆರ್. ಅಶೋಕ್

ಬೆಜೆಪಿಯ ಒಕ್ಕಲಿಗ ನಾಯಕ ಆರ್. ಅಶೋಕ್ "ವಿಜಯ ಸಂ
ಆರ್. ಅಶೋಕ್
ಆರ್. ಅಶೋಕ್
Updated on
ಬೆಂಗಳೂರು: ಬೆಜೆಪಿಯ ಒಕ್ಕಲಿಗ ನಾಯಕ ಆರ್. ಅಶೋಕ್ "ವಿಜಯ ಸಂ<ಕಲ್ಪ ಯಾತ್ರೆ" ಎಂಬ ಹೆಸರಲ್ಲಿ ರೋಡ್ ಶೋ ಗಳನ್ನು ನಡೆಸುವ ಮೂಲಕ ತಮ್ಮ ಸಮುದಾಯದ ಮತವನ್ನು ಏಕೀಕರಿಸುವ ಹಾಗೂ ಈ ಸಾಲಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಮತ ಗಳಿಸಿಕೊಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಆದರೆ ಇನ್ನೊಂದು ಮೂಲದ ಪ್ರಕಾರ ಅಶೋಕ್ ಅವರ ಗುರಿ ಮೇ 23ರ ಫಲಿತಾಂಶಕ್ಕಿಂತಲೂ ಮುಂದಿದೆ ಎನ್ನಲಾಗುತ್ತಿದೆ.
ಕೇಸರಿ ಪಕ್ಷದಲ್ಲಿ ಒಕ್ಕಲಿಗ ಸಮುದಾಯದ ಶಕ್ತಿಯುತ ನಾಯಕರಾಗಿರುವ ಅಶೋಕ್ ಈ ಚುನಾವಣಾ ಪ್ರಚಾರ, ರೋಡ್ ಶೋಗಳ ಮೂಲಕ ತನ್ನನ್ನು ತಾನು ಇನ್ನಷ್ಟು ಪ್ರಭಾವಶಾಲಿ ನಾಯಕನಾಗಿ ಸ್ಥಾಪಿಸಿಕೊಳ್ಲಲು ಹೊರಟಿದ್ದಾರೆ.ಚುನಾವಣೆ ನಂತರ ಬದಲಾಗಲಿರಿವ ರಾಜ್ಯ ಬಿಜೆಪಿ ಅಧ್ಯಕ್ಷ ಹುದ್ದೆಗೆ ಯಡಿಯೂರಪ್ಪನವರ ಉತ್ತರಾಧಿಕಾರಿಯಾಗುವ ಗುರಿ ಅಶೋಕ್ ಅವರ ಮುಂದಿದೆ ಎಂದು ಮಾತುಗಳು ಕೇಳಿ ಬರುತ್ತಿದೆ. ದಕ್ಷಿಣ ಕರ್ನಾಟಕದ ಒಕ್ಕಲಿಗ ಸಮುದಾಯವನ್ನು ಒಟ್ಟಾಗಿಸಿ ಬಿಜೆಪಿಯಲ್ಲಿ ಅವರ ಪ್ರಾಬಲ್ಯ ಹೆಚ್ಚುವಂತೆ ಮಾಡುವುದದರ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೇರುವ ಉದ್ದೇಶವಿದೆ ಎಂದು ಹೇಳಲಾಗಿದೆ.
"ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು,  ಕೋಲಾರ, ತುಮಕೂರು, ಕನಕಪುರ ಮತ್ತು ಚಾಮರಾನಗರಗಳಲ್ಲಿ ನನ್ನ ನಾಯಕತ್ವದಲ್ಲಿ ರೋಡ್ ಶೋ ನಡೆಯಲಿದೆ.ಎಂದು ಬಿಜೆಪಿ ರಾಜ್ಯದ ಪ್ರಚಾರ ನಿರ್ವಹಣಾ ಸಮಿತಿಯ ಸಂಚಾಲಕ ಆರ್. ಅಶೋಕ್ ಹೇಳಿದರು.  ಅವರು ಈ ರೋಡ್ ಶೋ ಮೂಲಕ ಒಕ್ಕಲಿಗರನ್ನು ಒಗ್ಗಟ್ತಾಗಿಸಿರುವುದು, ಬಿಜೆಪಿಯಲ್ಲಿ ಅವರ ಪ್ರಾಬಲ್ಯ ಹೆಚ್ಚಳ ಂಆಡುವ ಉದ್ದೇಶವಿದೆ ಎಂಬುದನ್ನು ನಿರಾಕರಿಸಿದ್ದಾರೆ. ಆದರೆ ಒಕ್ಕಲಿಗರಲ್ಲಿ ಬಲವಾಗಿರುವ ಜೆಡಿಎಸ್ ಪರ ಒಲವನ್ನು ಹೊಡೆದು ಅವರನ್ನು ಬಿಜೆಪಿಯತ್ತ ಒಲವು ಮೂಡಿಸುವಂತೆ ಮಾಡಲಾಗುವುದು ಎಂಡು ಹೇಳಿದ್ದಾರೆ. ಯಡಿಯೂರಪ್ಪ ತಾವು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಎಲ್ಲಾ ಸಿದ್ದತೆ ನಡೆಸಿದ್ದಾರೆ. ಈ ವೇಳೆ ಓರ್ವ ಒಕ್ಕಲಿಗ ಆ ಸ್ಥಾನಕ್ಕೇರುವದಕ್ಕಾಗಿ ಮಹತ್ವಾಕಾಂಕ್ಷೆ ಹೊಂದಿದ್ದಾರೆಂದು ವಿಶ್ಲೇಷಕರು ಹೇಳುತ್ತಾರೆ.
"ಯಡಿಯೂರಪ್ಪ ಅವರು ವಿರೋಧ ಪಕ್ಷದ ನಾಯಕರಾಗಿ ಮುಂದುವರಿದರೆ  ಬಿಜೆಪಿಗೆ ಪಕ್ಷದ ಮುಖ್ಯಸ್ಥರಾಗಿ ಅವರು ಮುಂದುವರಿಯುವುದಿಲ್ಲ, ಆ ಸ್ಥಾನಕ್ಕೆ ಓರ್ವ ಒಕ್ಕಲಿಗ ನಾಯಕ ಆಗಮಿಸುತ್ತಾರೆ.ಚುನಾಯಿತರಲ್ಲಿ ಒಬ್ಬ ಲಿಂಗಾಯತ ಮತ್ತು ಒಬ್ಬಒಕ್ಕಲಿಗ ನಾಯಕರು ಹಳೆಯ ಜನತಾ ಪಕ್ಷದ ಸೂತ್ರವಾಗಿದ್ದರು ಎಂದು ರಾಜಕೀಯ ವಿಶ್ಲೇಷಕ ಮತ್ತು ಸಂಶೋಧಕ ಪ್ರೊಫೆಸರ್ ನರೇಂದ್ರ ಪಾಣಿ ಹೇಳಿದ್ದಾರೆ.ಸಾಮೂಹಿಕ ಒಕ್ಕಲಿಗ ನಾಯಕನ ಬೆಂಬಲದೊಂದಿಗೆ, ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಜೆಡಿಎಸ್ಮತ್ತು ಕಾಂಗ್ರೆಸ್ ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳಾಗಿದ್ದು, ಬಿಜೆಪಿ ತನ್ನ ಅಸ್ತಿತ್ವವನ್ನು ಉತ್ತಮಗೊಳಿಸಿಕೊಳ್ಳುವ ನಿರೀಕ್ಷೆ ಇದೆ."ಜೆಡಿಎಸ್ ಮತ್ತು ಕಾಂಗ್ರೆಸ್ ನ ತಳಮಟ್ಟದ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುವುದಕ್ಕೆ ಆಗುತ್ತಿಲ್ಲ, ಅವೌ ತಮ್ಮ ಮೇಲಿನ ನಾಯಕರ ಮೈತ್ರಿ ವಿರುದ್ಧ ಸಿಡಿದೆದ್ದಿದ್ದಾರೆ. ಇದು ಬಿಜೆಪಿಗೆ ವರವಾಗಲಿದೆ" ಎಂದು ಬಿಜೆಪಿ ನಾಯಕರು ಅಭಿಪ್ರಾಯಪಟ್ಟರು.
ಒಕ್ಕಲಿಗ ನಾಯಕನಾಗಿ ಹೊರಹೊಮ್ಮಲು ಅಶೋಕ್ ಕೇವಲ ಪಕ್ಷದೊಳಗೆ ಮಾತ್ರವೇ ಹೋರಾಟ ನಡೆಸುತ್ತಿಲ್ಲ  ಕಾಂಗ್ರೆಸ್ ನಲ್ಲಿ ಡಿ.ಕೆ. ಶಿವಕುಮಾರ್ ಪ್ರಭಾವಶಾಲಿ ನಾಯಕರಾಗಿರುವ ಕಾರಣ ಬಿಜೆಪಿ ತನ್ನಲ್ಲಿನ ನಾಯಕರ ಕುರಿತು ಯೋಚಿಸಬೇಕಿದೆ."ಬಿಜೆಪಿ ಒಕ್ಕಲಿಗ ಸಮುದಾಯದೊಳಗೆ ಒಲವನ್ನು ತರಲು ಬಯಸಿದರೆ ಅವರಿಗೆ  ಒಕ್ಕಲಿಗ  ನಾಯಕನ ಅಗತ್ಯವಿರಲಿದೆ.ಆಗ ಇತರೆ ಒಕ್ಕಲಿಗ ನಾಯಕರಿಗಿಂತ ಅಶೋಕ್ ಹೆಚ್ಚು ಪ್ರಬಲರಾದ ಕಾರಣ ಅವರೇ ಭವಿಷ್ಯದ ಸೂತ್ರಧಾರರಾಗಲಿದ್ದಾರೆ" ನರೇಂದ್ರ ಪಾಣಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com