ಹೊರಗಿನವ ಎಂಬ ಆರೋಪ ಸರಿಯಲ್ಲ, ಮೋದಿಯೇ ಪ್ರಮುಖ ಎದುರಾಳಿ, ತೇಜಸ್ವಿ ಅಲ್ಲ- ಬಿ. ಕೆ. ಹರಿ ಪ್ರಸಾದ್

ಹೊರಗಡೆಯವರು ಎಂಬ ಆರೋಪವನ್ನು ನಿರಾಕರಿಸಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ. ಕೆ . ಹರಿಪ್ರಸಾದ್ ನನ್ನಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಮುಖ ಪ್ರತಿಸ್ಪರ್ಧಿ, ತೇಜಸ್ವಿ ಸೂರ್ಯ ಎದುರಾಳಿ ಅಲ್ಲ ಎಂದಿದ್ದಾರೆ.
ಬಿ. ಕೆ. ಹರಿಪ್ರಸಾದ್
ಬಿ. ಕೆ. ಹರಿಪ್ರಸಾದ್

ಬೆಂಗಳೂರು: ಹೊರಗಡೆಯವರು ಎಂಬ ಆರೋಪವನ್ನು ನಿರಾಕರಿಸಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ. ಕೆ . ಹರಿಪ್ರಸಾದ್ ನನ್ನಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಮುಖ ಪ್ರತಿಸ್ಪರ್ಧಿ, ತೇಜಸ್ವಿ ಸೂರ್ಯ ಎದುರಾಳಿ  ಅಲ್ಲ ಎಂದಿದ್ದಾರೆ.

1991ರಿಂದಲೂ ಬಿಜೆಪಿ ಭದ್ರಕೋಟೆಯಾಗಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಂಚಿಕೆ ಹೆಚ್ಚಿನ ಪ್ರಮಾಣದಲ್ಲಾಗುವ ಭರವಸೆ ಇದ್ದು, ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ  ವಿರುದ್ಧ ಗೆಲ್ಲುವ ವಿಶ್ವಾಸ ಇರುವುದಾಗಿ ಹೇಳಿದ್ದಾರೆ.

ಹೊರಗಡೆಯವರು ಎಂಬ ಆರೋಪವನ್ನು ನಿರಾಕರಿಸುವ ಹರಿಪ್ರಸಾದ್ , ತಾನೂ ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದಿದ್ದು, ಇಲ್ಲಿನ ಜನತೆಗೆ ಚೆನ್ನಾಗಿ ಗೊತ್ತಿದೆ. ಬಿಜೆಪಿಗೆ ಮೋದಿ ಬಿಟ್ಟರೆ ಬೇರೆ ಮುಖಗಳೇ ಇಲ್ಲದಿರುವುದರಿಂದ ಇದು ಮೋದಿ ಚುನಾವಣೆ ಆಗಿದೆ. ಬಿಜೆಪಿ ಎಲ್ಲಾ ಅಭ್ಯರ್ಥಿಗಳು ಇದು ನನ್ನ ಚುನಾವಣೆ ಅಲ್ಲ, ಮೋದಿ ಚುನಾವಣೆ ಎನ್ನುತ್ತಿದ್ದಾರೆ. ಆದಕ್ಕಾಗಿ ಮೋದಿ, ಬಿಜೆಪಿ ವಿರುದ್ದ ಹೋರಾಟ ನಡೆಸುವುದಾಗಿ ನುಡಿದರು.

ಬೆಂಗಳೂರು ದಕ್ಷಿಣ ಕ್ಷೇತ್ರ ಇತರ ಕಾರಣಗಳಿಂದಾಗಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ ಹೊರತು ತನ್ನ ಎದುರಾಳಿ ತೇಜಸ್ವಿ ಸೂರ್ಯ ಅಂತಾ ಏನಿಲ್ಲ, ಅದಕ್ಕೆ ಬೇರೆ ಕಾರಣಗಳಿವೆ. ಬೆಂಗಳೂರು ಬಿಟ್ಟಕ್ಕಾಗಿ ಬೇರೆಯ ಕಡೆಯ ಯಾವುದೇ ಅಭ್ಯರ್ಥಿಗಳು ಇದು ಮೋದಿ ಚುನಾವಣೆ ಎನ್ನುತ್ತಿದ್ದಾರೆ. ಬಿಜೆಪಿಗೆ ಮೋದಿ ಬಿಟ್ಟು ಬೇರೆಯ ಮುಖಗಳಿದ್ದರೆ ಅವರಿಗೆ ವೋಟ್ ಹಾಕಿ ಎಂದು ಜನರಿಗೆ ಹೇಳುತ್ತಿದ್ದರು. ಬೇಕಾದರೆ ಪ್ರಚಾರಕ್ಕೆ ಹೋಗಿ ಗಮನಿಸಿ ನನ್ನಗೆ ಮತ ನೀಡಿ ಎಂದು ಕೇಳುವುದಿಲ್ಲ, ಮೋದಿಗಾಗಿ ವೋಟು ಕೊಡಿ ಅಂತಿದ್ದಾರೆ ಎಂದು ಟೀಕಿಸಿದರು.

ಅಭಿವೃದ್ದಿ ಕಾರ್ಯಕ್ರಮಗಳು, ಜಿಎಸ್ ಟಿ , ನೋಟ್ ಅಮಾನ್ಯತೆ  ಬಗ್ಗೆ ಮೋದಿ ಮೌನವನ್ನು  ಹರಿಪ್ರಸಾದ್ ಪ್ರಶ್ನಿಸಿದರು.  ಒಂದೇ  ಒಂದು ಸುದ್ದಿಗೋಷ್ಠಿ ನಡೆಸಿದ 76 ಇಂಚು ಎದೆಯುಳ್ಳ ಮೋದಿ ಆಡಳಿತದಿಂದ ಜನತೆ ಬೇಸತ್ತಿದ್ದು, ಈ ಸರ್ಕಾರವನ್ನು ಕಿತ್ತೊಗೆಲು ಬಯಸುತ್ತಿದ್ದಾರೆ ಎಂದು ಹರಿಪ್ರಸಾದ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com