10 ಸಂಸದರನ್ನು ಕೊಟ್ಟ ಹಾವೇರಿಯಲ್ಲಿ ಅಸ್ಥಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ಹರಸಾಹಸ!

ಸತತ 50 ವರ್ಷಗಳಿಂದ ಹಾವೇರಿಯಲ್ಲಿ ನೆಲೆಯೂರಿರರುವ ಕಾಂಗ್ರೆಸ್ ಗೆ ಈ ಬಾರಿ ಬಹು ದೊಡ್ಡ ಮಟ್ಟದ ಸವಾಲು ಎದುರಾಗಿದೆ. ಕಾಂಗ್ರೆಸ್ ಭದ್ರಕೋಟೆ ಎಂದೇ ...
ಶಿವಕುಮಾರ ಉದಾಸಿ
ಶಿವಕುಮಾರ ಉದಾಸಿ
ಹಾವೇರಿ: ಸತತ 50 ವರ್ಷಗಳಿಂದ ಹಾವೇರಿಯಲ್ಲಿ ನೆಲೆಯೂರಿರರುವ ಕಾಂಗ್ರೆಸ್ ಗೆ ಈ ಬಾರಿ ಬಹು ದೊಡ್ಡ ಮಟ್ಟದ ಸವಾಲು ಎದುರಾಗಿದೆ. ಕಾಂಗ್ರೆಸ್ ಭದ್ರಕೋಟೆ ಎಂದೇ ಪರಿಗಣಿತವಾಗಿರುವ ಹಾವೇರಿಗೆ ಈ ಬಾರಿ ಬಿಜೆಪಿ ಅಭ್ಯರ್ಥಿ ಲಗ್ಗೆ ಇಟ್ಟಿದ್ದಾರೆ.
1952ರಿಂದ ನಡೆದಿರುವ ಸುಮಾರು 16 ಚುನಾವಣೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ 10 ಸಂಸದರು ಆಯ್ಕೆಯಾಗಿದ್ದಾರೆ, ಅವರೆಲ್ಲರೂ ಕಾಂಗ್ರೆಸ್ ಸಂಸದರೇ ಎಂಬುದು ಗಮನಾರ್ಹ. 
ಆದರೆ 2008ರಿಂದ ಕಾಂಗ್ರೆಸ್ ಸತತವಾಗಿ ಸೋಲನುಭವಿಸಿದೆ, ಹೀಗಾಗಿ ಈ ಬಾರಿ ಕಾಂಗ್ರೆಸ್ ತನ್ನ ಚುನಾವಣಾ ರಣತಂತ್ರ ಬದಲಿಸಿದೆ.ಜೊತೆಗೆ ಬಹುಸಂಖ್ಯಾತ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ, ಹಾವೇರಿ ಕ್ಷೇತ್ರ ಚುನಾವೆ ಜೂಜಾಟ ಎಂದೇ ಕರೆಯಲಾಗಿದೆ, ಹೀಗಾಗಿ ಈ ಬಾರಿ ತಮ್ಮ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂಬ ಭರವಸೆಯಲ್ಲಿದೆ.
ಕಾಂಗ್ರೆಸ್ ಡಿ.ಆರ್ ಪಾಟೀಲ್ ಅವರನ್ನು ಕಣಕ್ಕಿಳಿಸಿದರೇ ಬಿಜೆಪಿಯಿಂದ ಶಿವಕುಮಾರ್ ಉದಾಸಿ  ಸ್ಪರ್ಧಿಸಿದ್ದಾರೆ. ಬಿಜೆಪಿಯಂದ 2 ಬಾರಿ ,ಸಂಸದರಾಗಿ ಆಯ್ಕೆಯಾಗಿರುವ ಶಿವಕುಮಾರ್ ಉದಾಸಿ ಕ್ಲೀನ್ ಇಮೇಜ್ ಹೊಂದಿರುವ ವ್ಯಕ್ತಿ ಎಂದೇ ಹೆಸರುವಾಸಿಯಾಗಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಜಮೀರ್ ಅಹಮದ್ ಖಾನ್ .ಎಚ್.ಕೆ ಪಾಟೀಲ್  ಮುಂತಾದವರು ಮತಯಾಚಿಸಿದ್ದಾರೆ, ಸಂಸದ ಶಿವಕುಮಾರ ಉದಾಸಿ ಅವರ ವಿರೋಧಿ ಅಲೆಯಿದೆ. ಕಳೆದ 10 ವರ್ಷಗಳಲ್ಲಿ ಅವರು ಯಾವುದೇ ಕೆಲಸ ಮಾಡಿಲ್ಲ, ಜೊತೆಗೆ ಸಂಸದರು ಕೈಗೆ ಸಿಗುವುದಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ, ಆದರೆ ಇಲ್ಲಿ ಅಭ್ಯರ್ಥಿಗೆ ಪ್ರಾಮುಖ್ಯತೆ ಇಲ್ಲ,ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬುದು ಇಲ್ಲಿನ ಜನರ ಆಶಯ. 
ಕಾಂಗ್ರೆಸ್ ಸುಮಾರು 50 ವರ್ಷಗಳ ಕಾಲ ಆಡಳಿತ ನಡೆಸಿದೆ, ಕಳೆದ 5 ವರ್ಷಗಳಿಂದ ಮೋದಿ ಉತ್ತಮ ಕೆಲಸ ಮಾಡಿದ್ದಾರೆ ಎಂಬುದು ಕೆಲವರ ವಾದ, 
ನಾನು ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ, ರಸ್ತೆ ಮತ್ತು ರೇಲ್ವೆ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದೇನೆ, ಮೊದಲ ಬಾರಿಗೆ ಉಜ್ವಲ ಯೋಜನೆ ಜಾರಿಗೆ ತಂದ ಯಶಸ್ಸು ನಮ್ಮದು. 1.92 ಲಕ್ಷ ಗ್ಯಾಸ್ ಸಂಪರ್ಕ ನೀಡಿದ್ದೇವೆ, ಗದಗದಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ ಆರಂಭಿಸಿದ್ದೇವೆ, ಹೀಗಾಗಿ ಜನ ನನಗೆ ಮತ ಹಾಕುತ್ತಾರೆ ಎಂದು ಉದಾಸಿ ಭರವಸ್ ವ್ಯಕ್ತ ಪಡಿಸಿದ್ದಾರೆ.
ನೂರಕ್ಕೆ ನೂರರಷ್ಟು ಕಾಂಗ್ರೆಸ್ ಗೆಲುವು ಸಾಧಿಸುತ್ತದೆ,.ಮಧ್ಯ ಪ್ರದೇಶ ಮತ್ತು ಛತ್ತೀಸ್ ಗಡದಲ್ಲಿ ಈಗಾಗಲೇ ಸಾಲ ಮನ್ನಾ ಮಾಡಲಾಗಿದೆ, ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಿದ್ದಾರೆ. ಮೋದಿ ಅಲೆ ಕಾಂಗ್ರೆಸ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್ ಪಾಟೀಲ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com