ಸಿದ್ದರಾಮಯ್ಯ
ಕರ್ನಾಟಕ
ಬಾಗಲಕೋಟೆ: ಸಂವಿಧಾನ ಬದಲಾಯಿಸಿದರೆ ರಕ್ತಪಾತ, ನಾನೇ ಅದರ ನೇತೃತ್ವ ವಹಿಸುವೆ- ಸಿದ್ದರಾಮಯ್ಯ
ದೇಶದ ಸಂವಿಧಾನವನ್ನು ಬದಲಾಯಿಸಿದರೆ ರಕ್ತಪಾತ ಉಂಟಾಗಲಿದೆ. ಅದರ ಮುಂದಾಳತ್ವವನ್ನು ನಾನೇ ವಹಿಸಿಕೊಳ್ಳುವೆ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.
ಬಾಗಲಕೋಟೆ: ದೇಶದ ಸಂವಿಧಾನವನ್ನು ಬದಲಾಯಿಸಿದರೆ ರಕ್ತಪಾತ ಉಂಟಾಗಲಿದೆ. ಅದರ ಮುಂದಾಳತ್ವವನ್ನು ನಾನೇ ವಹಿಸಿಕೊಳ್ಳುವೆ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.
ರಬಕವಿ ಬನಹಟ್ಟಿಯಲ್ಲಿ ಇಂದು ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ್ ಪರ ಪ್ರಚಾರ ನಡೆಸಿದ ಅವರು , ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದ ಪ್ರಧಾನಿಗಳಲ್ಲಿಯೇ ಅತಿ ಹೆಚ್ಚಿನ ಸುಳ್ಳು ಹೇಳಿದ ಕೀರ್ತಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ನರೇಂದ್ರ ಮೋದಿ ಮಹಾನ್ ಸುಳ್ಳುಗಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಹಿಟ್ಲರ್ ಆಗಲಿದ್ದಾರೆ ಈ ದೇಶ , ಇಲ್ಲಿನ ಪ್ರಜಾತಂತ್ರ ಉಳಿಯಬೇಕಾದರೆ ಮೋದಿ ಸೋಲಬೇಕು ಎಂದು ಹೇಳಿದರು.
ಸೋಲುವ ಹತಾಶೆಯಿಂದ ಮೋದಿ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಮೇಲೆ ಆದಾಯ ತೆರಿಗೆ ದಾಳಿ ಮಾಡಿಸುತ್ತಿದ್ದಾರೆ. ಮುಂದೊಂದು ದಿನ ಅದೇ ಅವರಿಗೆ ತಿರುಗುಬಾಣವಾಗಲಿದೆ ಎಂದು ಅವರು ಎಚ್ಚರಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ