ಕೊಪ್ಪಳ ಕ್ಷೇತ್ರದಲ್ಲಿ ಜಾತಿ ರಾಜಕೀಯದ್ದೇ ಮೇಲಾಟ: ಕರಡಿಗೆ ಮೋದಿ, ಹಿಟ್ನಾಳ್ ಗೆ ಕೈ'ಬಲ'

ವಿಜಯನಗರ ಸಾಮ್ರಾಜ್ಯದ ಭಾಗವಾದ ಕೊಪ್ಪಳ ಲೋಕಸಭೆ ಕ್ಷೇತ್ರ, ಹೈದರಾಬಾದ್ -ಕರ್ನಾಟಕ ಭಾಗದ ಹಿಂದುಳಿದ ಜಿಲ್ಲೆಯಾಗಿದೆ, 8 ವಿಧಾನಸಭೆ ಕ್ಷೇತ್ರ ...
ಸಂಗಣ್ಣ ಕರಡಿ ಮತ್ತು ರಾಜಶೇಖರ್ ಹಿತ್ನಾಳ್
ಸಂಗಣ್ಣ ಕರಡಿ ಮತ್ತು ರಾಜಶೇಖರ್ ಹಿತ್ನಾಳ್
Updated on
ಕೊಪ್ಪಳ: ವಿಜಯನಗರ ಸಾಮ್ರಾಜ್ಯದ ಭಾಗವಾದ ಕೊಪ್ಪಳ ಲೋಕಸಭೆ ಕ್ಷೇತ್ರ, ಹೈದರಾಬಾದ್ -ಕರ್ನಾಟಕ ಭಾಗದ ಹಿಂದುಳಿದ ಜಿಲ್ಲೆಯಾಗಿದೆ, 8 ವಿಧಾನಸಭೆ ಕ್ಷೇತ್ರ ಹೊಂದಿರುಪವ ಕೊಪ್ಪಳ ಲೋಕಸಭೆ ಕ್ಷೇತ್ರದ ಜನತೆ ಏಪ್ರಿಲ್ 23 ರಂದು ನಡೆಯುವ ಚುನಾವಣೆ.ಯಲ್ಲಿ ಮತ ಚಲಾಯಿಸಲು ಸಿದ್ಧತೆ ನಡೆಸಿದ್ದಾರೆ.
ಇಲ್ಲಿನ ಮತದಾರರಿಗೆ ಅಭ್ಯರ್ಥಿ,  ಹಾಗೂ ಅವರ ಪ್ರಣಾಳಿಕೆಗಳು ಮುಖ್ಯವಲ್ಲ, ನೋಟು ಅಮಾನ್ಯೀಕರಣ ಮತ್ತು ಜಿಎಸ್ ಟಿ ಯುವಕರ ಮೇಲೆ ಪ್ರಭಾವ ಬೀರಿದೆ. ಲಿಂಗಾಯತ ಸಮುದಾಯದ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳು ಕೂಡ ಪ್ರಮುಖ ಪಾತ್ರ ವಹಿಸುತ್ತವೆ, 2009ರ  ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿತು, ನಂತರ 2009 ಮತ್ತು 2014 ರ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.
ಈ ಬಾರಿಯ ಚುನಾವಣೆ ಕರಡಿ ಮತ್ತು ಹಿಟ್ನಾಳ್ ಕುಟುಂಬಗಳ ಕದನವೆಂದೇ ಪರಿಗಣಿಸಲ್ಪಟ್ಟಿದೆ.  ಕೊನೆ ಗಳಿಗೆಯಲ್ಲಿ ಟಿಕೆಟ್ ಪಡೆದ ಕರಡಿ ಸಂಗಣ್ಣ ಅವರು ಮೋದಿ ಅಲೆ ನೆಚ್ಚಿಕೊಂಡಿದ್ದಾರೆ, ಕಾಂಗ್ರೆಸ್ ಅಬ್ಯರ್ಥಿ ರಾಜಶೇಖರ್ ಹಿಟ್ನಾಳ್, ಸಿದ್ದರಾಮಯ್ಯ ನಾಮಬಲ ನಂಬಿದ್ದಾರೆ.
ನಮ್ಮ ಪಕ್ಷದಲ್ಲಿ ಯಾವುದೇ ಬಿರುಕಿಲ್ಲ, ಕಾಂಗ್ರೆಸ್ ಸೋಲಿಸುವುದೇ ನಮ್ಮ ಗುರಿ, ಕಳೆದ ಐದು ವರ್ಷದಲ್ಲಿ ಕೊಪ್ಪಳ-ಗಂಗಾವತಿ ರೈಲ್ವೆ ಮಾರ್ಗ ಪೂರ್ಣಗೊಳಿಸಿದ್ದೇವೆ ಎಂದು ಕರಡಿ ಸಂಗಣ್ಣ ಹೇಳಿದ್ದಾರೆ.
ವ್ಯಕ್ತಿಗತ ಟೀಕೆ ಇಲ್ಲದೇ ಸಿದ್ದರಾಮಯ್ಯ ಮೋದಿ ನಡುವಿನ ಚುನಾವಣೆ ಎಂದು ನಡೆಯುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ  ಕುರುಬ ಸಮಾಜಕ್ಕೆ ಸೇರಿದ್ದು, ಆ ಸಮಾಜದವರು ಸಂಘಟಿತರಾಗಿದ್ದಾರೆ, ಹೀಗಾಗಿ ನಮ್ಮ ಗೆಲುವು ಸುಲಭವಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com