ಶಂಕರ್ ಮುನವಳ್ಳಿ
ಕರ್ನಾಟಕ
ಕಾಂಗ್ರೆಸ್ ಅಭ್ಯರ್ಥಿಗಳ ಬಿ ಫಾರಂ ತಡೆಹಿಡಿಯಿರಿ: ಹೈಕೋರ್ಟ್ ಮೆಟ್ಟಿಲೇರಿದ ಶಂಕರ ಮುನವಳ್ಳಿ
ಕಾಂಗ್ರೆಸ್ ಪಕ್ಷದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಬಿ ಫಾರಂ ಅನ್ನು ತಡೆ ಹಿಡಿಯಬೇಕೆಂದು ಪ್ರಸಿದ್ಧ ನಾಯಕ ಬೆಳಗಾವಿಯ ...
ಬೆಳಗಾವಿ: ಕಾಂಗ್ರೆಸ್ ಪಕ್ಷದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಬಿ ಫಾರಂ ಅನ್ನು ತಡೆ ಹಿಡಿಯಬೇಕೆಂದು ಪ್ರಸಿದ್ಧ ನಾಯಕ ಬೆಳಗಾವಿಯ ಶಂಕರ್ ಮುನವಳ್ಳಿ ಧಾರವಾಡ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ರಾಗಿ ಕಾರ್ಯನಿರ್ವಹಿಸುತ್ತಿರುವ ದಿನೇಶ್ ಗುಂಡುರಾವ್ ಅವರ ಅಧಿಕಾರ ಮಾನ್ಯತೆ ಪ್ರಶ್ನಿಸಿ ಧಾರವಾಡ ಹೈಕೋರ್ಟ್ ಪೀಠದಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ಮಾಜಿ ಕೆಪಿಸಿಸಿ ಸದಸ್ಯ ಶಂಕರ ಮುನವಳ್ಳಿ ಹೇಳಿದರು.
ಹೈಕೋರ್ಟ್ ಪೀಠದಲ್ಲಿ ದಾಖಲಿಸಿರುವ ಅರ್ಜಿಯ ವಿಚಾರಣೆ ಮಾ.28 ರಂದು ನಡೆಯಲಿದೆ. ದಿನೇಶ ಗುಂಡುರಾವ್ ಬಿ ಪಾರ್ಮ್ ನೀಡುವ ಅಧಿಕಾರ ಹೊಂದಿರುವುದಿಲ್ಲ. ಕಾಲಕಾಲಕ್ಕೆ ನಡೆಯಬೇಕಿದ್ದ ಪಕ್ಷದಲ್ಲಿ ವಿವಿಧ ಹುದ್ದೆಗಳಿಗೆ ಆಂತರಿಕ ಚುನಾವಣೆ ಕೂಡ ನಡೆಸುತ್ತಿಲ್ಲ. ಕೆಪಿಸಿಸಿ ಕಾರ್ಯಚಟುವಟಿಕೆಗಳ ಕುರಿತು 20 ವರ್ಷಗಳಿಂದ ಆದಾಯ ಇಲಾಖೆಗೂ ಲೆಕ್ಕಪತ್ರ ತೋರಿಸಿಲ್ಲ.
ಪಕ್ಷ ಸಂಘಟನೆಗೆ ನೀಡಿರುವ ಧನ ಸಹಾಯವನ್ನೂ ಪಕ್ಷದ ಅಧ್ಯಕ್ಷರು ಮತ್ತು ನಾಯಕರು ದುರುಪಯೋಗ ಪಡಿಸಿಕೊಂಡಿದ್ದಾರೆ. 2015 ರಿಂದ 2017ರ ಅವಧಿಯಲ್ಲಿ ಒಟ್ಟು 24 ಲಕ್ಷ ರೂ.ನೀಡಲಾಗಿತ್ತು. ಆ ಪೈಕಿ 5 ಲಕ್ಷ ರೂ.ಮಾತ್ರ ಮರು ಪಾವತಿಸಿರುವ ಕೆಪಿಸಿಸಿ ಇನ್ನುಳಿದ ದೇಣಿಗೆ ಹಣ ಬಳಕೆ ಕುರಿತು ಮಾಹಿತಿ ನೀಡಿಲ್ಲ. ಆದ್ದರಿಂದ, ಈ ಎಲ್ಲ ನ್ಯೂನತೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಅದಕ್ಕೂ ಮುಂಚೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ದಿನೇಶ ಗುಂಡೂರಾವ್ ಅವರು ನೀಡುವ ಬಿ ಫಾರ್ಮ್ ವಿತರಣೆಗೂ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ವಿನಂತಿಸಲಾಗಿದೆ ಎಂದು ಅವರು ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ