ದೇವೇಗೌಡ ಮತ್ತು ಮುದ್ದಹನುಮೇಗೌಡ
ಕರ್ನಾಟಕ
'ಯಾರೂ ಬೇಕಾದರೂ ಬಂದು ಹೋಗಲು ತುಮಕೂರು ರೆಡ್ ಲೈಟ್ ಏರಿಯಾನಾ?'
ದೇವೇಗೌಡರು, ಅವರ ಸೊಸೆ, ಬಂದು ಇಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಹೋಗುತ್ತಾರೆ, ಯಾರೂ ಬೇಕಾದರೂ ಬಂದು ಇಲ್ಲಿ ಹೋಗಲು ತುಮಕೂರು ರೆಡ್ ಲೈಟ್ ...
ತುಮಕೂರು: ದೇವೇಗೌಡರು, ಅವರ ಸೊಸೆ, ಬಂದು ಇಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಹೋಗುತ್ತಾರೆ, ಯಾರೂ ಬೇಕಾದರೂ ಬಂದು ಇಲ್ಲಿ ಹೋಗಲು ತುಮಕೂರು ರೆಡ್ ಲೈಟ್ ಏರಿಯಾ ಆಗಿದೆಯಾ ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ಪ್ರಶ್ನಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಮಾಜಿ ಶಾಸಕ ಕೆ,ಎನ್ ರಾಜಣ್ಣ, ನಾನು ನಿನ್ನೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿದ್ದೆ. ಮುದ್ದ ಹನುಮೇಗೌಡ ಅವರು ನಾಮಪತ್ರ ವಾಪಸ್ ಪಡೆದರೇ ನಾನು ಪಡೆಯುತ್ತೇನೆ ಎಂದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಕೆ,ಎನ್ ರಾಜಣ್ಣ ಹೇಳಿದ್ದಾರೆ,
ನಾಮಪತ್ರ ಹಿಂಪಡೆಯುವಂತೆ ಮುದ್ದಹಮುಮೇಗೌಡರ ಮೇಲೆ ಒತ್ತಡ ಹೆಚ್ಚಾಗಿದೆ, ನಾಮಪತ್ರ ಹಿಂಪಡೆಯುವುದು ಅವರ ವಿವೇಚನೆಗೆ ಬಿಟ್ಟ ವಿಷಯ ಎಂದು ಹೇಳಿದ್ದಾರೆ.
ಈ ಮೊದಲು ತುಮಕೂರಿನಲ್ಲಿ ಈ ಮೊದಲು ದೇವೇಗೌಡರ ಸೊಸೆ ಅನಿತಾ ಕುಮಾರ ಸ್ವಾಮಿ ಬಂದು ಸ್ಪರ್ಧಿಸಿದ್ದರು, ನಂತರ ನೆಲಮಂಗಲ ಕ್ಷೇತ್ರದ ಮಾಜಿ ಎಂಎಲ್ ಸಿ ಬಂದು ಸ್ಪರ್ಧಿಸಿದ್ದಾರೆ, ಈಗ ದೇವೇಗೌಡರು ಬಂದಿದ್ದಾರೆ.ಯಾರೂ ಬೇಕಾದರೂ ಬಂದು ಹೋಗಲು ಇದು ಕೊಲ್ಕೊತಾ ಮತ್ತು ಮುಂಬಯಿಯಲ್ಲಿರುವ ರೆಡ್ ಲೈಟ್ ಏರಿಯಾ ತರಾ ಇಲ್ಲಿ ಏನಾದ್ರೂ ರೆಡ್ ಲೈಟ್ ಏರಿಯಾ ಇದ್ಯಾ ಎಂದು ಟಾಂಗ್ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ