ಯಾರ್ ಗೆದ್ರೂ, ಸೋತ್ರೂ ನಮ್ಮ ಹಣೆಬರಹ ಇಷ್ಟೇ: ಬೊಂಬೆನಗರಿ- ರೇಷ್ಮೆನಗರಿ ಮತದಾರರ ಅಳಲು

ಬೊಂಬೆನಗರಿ ಎಂದೇ ಪ್ರಸಿದ್ದವಾಗಿರುವ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಲೋಕಸಭೆ ವ್ಯಾಪ್ತಿಗೆ ಬರುತ್ತದೆ, ...
ಡಿ.ಕೆ ಸುರೇಶ್ ಮತ್ತು ಅಶ್ವತ್ಥ ನಾರಾಯಣ
ಡಿ.ಕೆ ಸುರೇಶ್ ಮತ್ತು ಅಶ್ವತ್ಥ ನಾರಾಯಣ
ರಾಮನಗರ: ಬೊಂಬೆನಗರಿ ಎಂದೇ ಪ್ರಸಿದ್ದವಾಗಿರುವ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಲೋಕಸಭೆ ವ್ಯಾಪ್ತಿಗೆ ಬರುತ್ತದೆ,  ರಾಜ್ಯದ್ಯಂತ ಲೋಕಸಭೆ ಚುನಾವಣಾ ಜ್ವರ ಏರುತ್ತಿದ್ದರೇ ಚನ್ನಪಟ್ಟಣದ ಮತದಾರ ತನಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ತನ್ನ ದೈನಂದಿನ ಗಂಜಿಗಾಗಿ ಕೆಲಸ ಮಾಡುವುದರಲ್ಲಿ ನಿರತರಾಗಿದ್ದಾರೆ.
ನಮ್ಮ ಜೀವನ ಹಲವು ವರ್ಷಗಳಿಂದ ಇದೇ ರೀತಿ ಸಾಗಿಕೊಂಡು ಹೋಗುತ್ತಿದೆ, ನಮ್ಮ ಚನ್ನಪಟ್ಟಣದ ಬೊಂಬೆಗಳು ವಿದೇಶಕ್ಕೆ ರಪ್ತಾಗುತ್ತವೆಷ ಈ ಬೊಂಬೆಗಳಿಗೆ GI ಮಾನ್ಯತೆ ದೊರಕಿದೆ ಎಂದು ಇತ್ತೀಚೆಗೆ ಟಿವಿಯಲ್ಲಿ ನೋಡಿದೆ, ಆದರೆ ನಾನು ತಯಾರು ಮಾಡುವ ಬೊಂಬೆಗೆ ಸಿಗುವುದು ಕೇವಲ2 ರುಪಾಯಿ ಎಂದು 38 ವರ್ಷದ ಗುಂಡ ಎಂಬುವರು ಹೇಳಿದ್ದಾರೆ.
ಚನ್ನಪಟ್ಟಣ, ರಾಮನಗರ, ಬಿಡದಿ, ಕನಕಪುರದ ಸುಮಾರು 4 ಸಾವಿರ ಕುಟುಂಬಗಳು ಈ ಬೊಂಬೆ ಉದ್ಯಮವನ್ನು ನಂಬಿಕೊಂಡು ಜೀವನ ಮಾಡುತ್ತಿವೆ,  ವ್ಯವಹಾರದಲ್ಲಿ ಹಲವು ರೀತಿಯ ಏರಿಳಿತಗಳನ್ನು ಈ ಕುಟುಂಬಗಳು ನೋಡಿವೆ, ಫ್ಯಾಕ್ಚರಿ ಮಾಲೀಕರು ಮತ್ತು ಬೊಂಬೆ ರಪ್ತುದಾರಿಗೆ ಮಾತ್ರ ಸರ್ಕಾರದ ಬದಲಾವವಣೆ ಬೇಕಿದೆ, ಆದರೆ ಗುಂಡ ಮತ್ತು ಆತನಂತರ ದಿನಗೂಲಿ ಕೆಲಸಗಾರರಿಗೆ ಚುನಾವಣೆ ಎಂದರೇ ಒಂದು ದಿನ ರಜೆ ತೆಗೆದುಕೊಂಡು ಹಾಗಿ ಮತದಾನ ಮಾಡುವುದು ಅಷ್ಟೇ.
ಯಾರೂ ಅಧಿಕಾರಕ್ಕೆ ಬಂದರೂ ನಾವು ಅವರನ್ನು ಅವಲಿಂಬಿಸಿಲ್ಲ, ಯಾರು ನಮ್ಮ ರಾಜ್ಯಕ್ಕೆ ಏನು ಮಾಡುತ್ತಾರೆ ಎಂಬುದು ನಮಗೆ ಗೊತ್ತಿಲ್ಲ, ನಮಗೆ ನಮ್ಮ ನಾಯಕ ರಾಮೇಗೌಡ ಎಂಬುವರ ಬಗ್ಗೆ ಗೊತ್ತು, ನಾವು ಸುರೇಶ್ ಅಣ್ಣನಿಗೆ ಮತ ಹಾಕುತ್ತೇವೆ, ರಾಮೇಗೌಡರು ಹೇಳುವ ಪ್ರಕಾರ ಸುರೇಶ್ ಅಣ್ಣ ಉತ್ತಮ ನಾಯಕ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾರೆ, ಎಂದು ಬೊಂಬೆ ಕೆಲಸಗಾರನ ಪತ್ನಿ ರಂಗಮ್ಮ ಅವರ ಮಾತು.
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ ಹಲವು ಕಾರಣಗಳಿಗೆ ವಿಶೇಷವಾಗಿದೆ, 1967 ರಿಂದ ಹಲವು ರಾಜಕೀಯ ಏರಿಳಿತಗಳಿಗೆ ಸಾಕ್ಷಿಯಾಗಿದೆ, ಹಲವು ಚುನಾವಣೆಗಳಲ್ಲಿ ಕಾಂಗ್ರೆಸ್ ಅನಾಯಾಸವಾಗಿ ಗೆದ್ದು ಬೀಗಿದೆ, ಸುಮಾರು 10 ಬಾರಿ ಕಾಂಗ್ರೆಸ್ ಸಂಸದರು ಆಯ್ಕೆಯಾಗಿದ್ದಾರೆ, ಜೆಡಿಎಸ್ ಮೂರು ಬಾರಿ ಹಾಗೂ ಬಿಜೆಪಿ ಒಂದು ಬಾರಿ ಗೆಲುವು ಸಾಧಿಸಿತ್ತು, ಈ ಬಾರಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಿ.ಕೆ ಸುರೇಶ್ ಮತ್ತು ಬಿಜೆಪಿಯ ಅಶ್ವತ್ಥನಾರಾಯಣ ನಡುವೆ ನೇರ ಹಣಾಹಣಿ.
ಈ ಹಿಂದೆ ಕಾಂಗ್ರೆಸ್ ನಲ್ಲಿದ್ದು ಸದ್ಯ ಬಿಜೆಪಿಯಲ್ಲಿ ಸಕ್ರಿಯರಾಗಿರುವ ಸಿ,ಪಿ ಯೋಗೇಶ್ವರ್ ಅವರಿಗೆ ಇಲ್ಲಿನ ಜನ ಕೃತಜ್ಞರಾಗಿದ್ದಾರೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬರದಿಂದಾಗಿ ನೀರಿಗೆ ಹಾಹಾಕಾರ ಎದ್ದರೇ ರಾಮನಗರ ಜಿಲ್ಲೆಯಲ್ಲಿ ಮಾತ್ರ ನೀರಿಗೆ ಕೊರತೆಯೇ ಇಲ್ಲ, ಯೋಗೇಶ್ವರ್ ಕೈಗೊಂಡ ಉತ್ತಮ ಕೆಲಸದಿಂದಾಗಿ ಎಲ್ಲಾ ಹಳ್ಳಿಗಳ ಕೆರೆಗಳು ತುಂಬಿ ತುಳುಕುತ್ತಿವೆ, ಕಪ್ಪುಹಣವನ್ನು ಭಾರತದಿಂದ ಮೋದಿ ತೆರವುಗೊಳಿಸಿದರು, ನಂತರ ಪಾಕಿಸ್ತಾನದ ಮೇಲೆ ದಾಳಿ ನಡೆಸಿದರು,. ಅದಕ್ಕಾಗಿ ಮೋದಿ ಮತ್ತೆ ಆರಿಸಿ ಬರಬೇಕು,  ಅವರು ನಮ್ಮ ದೇಶವನ್ನು ರತ್ರಿಸುತ್ತಾರೆ,   ನಮ್ಮ ನಾಯಕರು ಮೂಲಭೂತ ಸೌಕರ್ಯಗಳಾದ, ರಸ್ತೆ ಕುಡಿಯುವ ನೀರು, ಆಸ್ಪತ್ರೆ, ಶಾಲೆ,ಸೇರಿಂತೆ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸಿದ್ದಾರೆ ಎಂದು  ವೆಂಕಟೇಶಪ್ಪ ಎಂಬ ರೈತ ಹೇಳಿದ್ದಾರೆ.
ಶೋಲೆ ಸಿನಿಮಾ ಶೂಟಿಂಗ್ ನಂತರ ಲೈಮ್ ಲೈಟ್ ಗೆ ಬಂದ ಮತ್ತೊಂದು ವಿಧಾನಸಭೆ ಕ್ಷೇತ್ರ ರಾಮನಗರ,  ಒಕ್ಕಲಿಗ ಪ್ರಾಬಲ್ಯವಿರುವ ಮತ್ತೊಂದು ನಗರ, ಜಾತಿ ರಾಜಕಾರಣ ಇಲ್ಲಿ ಪ್ರಮುಖವಾಗಿ ಕೆಲಸ ಮಾಡುತ್ತದೆ, ಇಲ್ಲಿ ರೇಷ್ಮೆ ಕೃಷಿ ಪ್ರಧಾನವಾದದ್ದು, ರೇಷ್ಮೆಯೇ ಇಲ್ಲಿನ ಎಲ್ಲಾ ಪಕ್ಷಗಳ ಚುನಾವಣಾ ಸರಕು, ರಾಮನಗರ ಏಷ್ಯಾದ ಅತಿ ದೊಡ್ಡ ರೇಷ್ಮೆಗೂಡು ಮಾರುಕಟ್ಟೆ  ಎಂಬ ಖ್ಯಾತಿಗೆ ಪಾತ್ರವಾಗಿದೆ.
ಈ ಭಾಗದಲ್ಲಿ 30 ಸಾವಿರ ರೇಷ್ಮೆ ಬೆಳೆಗಾರರು ಹಾಗೂ 1,800 ರೀಲರ್ಸ್ ಗಳಿದ್ದಾರೆ, ಬೆಂಗಳೂರಿನಿಂದ ಸುಮಾರು 50 ಕಿಮೀ ದೂರದಲ್ಲಿರುವ ರಾಮನಗರ ಸರ್ಕಾರದ ಖಜಾನೆಗೆ ವಾರ್ಷಿಕವಾಗಿ 10 ಕೋಟಿ ರು ಆದಾಯ ತಂದುಕೊಡುತ್ತದೆ. ರಾಜಕೀಯ ಪಕ್ಷಗಳಿಗೆ ನಾವು ಕಬ್ಬಿನಂತೆ, ನಮ್ಮಲ್ಲಿರುವ ಎಲ್ಲಾ ರಸವನ್ನು ಹೀರಿಕೊಳ್ಳುತ್ತಾರೆ ಎಂದು  ರೇಷ್ಮೆ ಬೆಳೆಗಾರ 68 ವರ್ಷದ ನಂಜೇಗೌಡ ಬೇಸರ ವ್ಯಕ್ತ ಪಡಿಸಿದ್ದಾರೆ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ರೇಷ್ಮೆ ಸಬ್ಸಿಡಿ ಏರಿಕೆ ಮಾಡುವುದಾಗಿ ಹೇಳಿದ್ದರು. ಥೈಲ್ಯಾಂಡ್ ನಲ್ಲಿ ರೇಷ್ಮೆ ಉತ್ಪಾದನೆ ಬಗ್ಗೆ ಅಧ್ಯಯನ ಮಾಡಿಬಂದು ಇಲ್ಲಿನ ಯುವಕರಿಗೆ ತರಬೇತಿ ನೀಡುವುದಾಗಿ ಜೆಡಿಎಸ್ ಹೇಳಿತ್ತು, ರೇಷ್ಮೆ ಕಾರಿಡಾರ್ ಮಾಡುವುದಾಗಿ ಕಾಂಗ್ರೆಸ್  ಭರವಸೆ ನೀಡಿತ್ತು. ಆದರೆ ಮೂರು ಪಕ್ಷಗಳ ನೀಡಿದ್ದ ಯಾವ ಭರವಸೆಯೂ ಇಲ್ಲಿಯವರೊ ಈಡೇರಿಲ್ಲ.
ರಾಮನಗರದಲ್ಲಿ ರೇಷ್ಮೆ ಉದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ, ಚನ್ನಪಟ್ಟಣದಲ್ಲಿರುವ ಮೈಸೂರು ಸಿಲ್ಕ್ ಕಾರ್ಖಾನೆಯನ್ನು ಮೇಲ್ಜರ್ದಜೆಗೇರಿಸುವುದಾಗಿ ಹೇಳಲಾಗಿತ್ತು,. ಸಮ್ಮಿಶ್ರ ಸರ್ಕಾರದ  ಮೈತ್ರಿ  ಅಭ್ಯರ್ಥಿ ಇಲ್ಲಿ ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ, ಡಿ.ಕೆ ಶಿವಕುಮಾರ್ ಅವರಂತ ರಾಜಕೀಯ ನಿಪುಣಗಾರನಿದ್ದರೂ ಕನಕಪುರ ಕ್ಷೇತ್ರ ಇನ್ನೂ ಹಿಂದುಳಿದಿದೆ. 
ಕನಕಪು ಕ್ಷೇತ್ರದಲ್ಲಿ ಕೃಷಿಭೂಮಿ ಸಂಪದ್ಬರಿತವಾಗಿದೆ, ರಾಗಿ, ಭತ್ತ, ಕಬ್ಬು, ಶೇಂಗಾ,ದ್ರಾಕ್ಷಿ ಮತ್ತು ರೇಷ್ಮೆ ಬೆಳೆಯಲಾಗುತ್ತದೆ, ಶಿವಕುಮಾರ್ ಅವರಿಗೆ ಕೃಷಿಯಲ್ಲಿ ಯಾವುದೇ ಆಸಕ್ತಿಯಿಲ್ಲ, ಅವರ ಆಸಕ್ತಿ ಏನಿದ್ದರೂ ಕಲ್ಲು ಗಣಿಗಾರಿಕೆ ಮತ್ತು ರಿಯಲ್ ಎಸ್ಟೇಟ್ ಉದ್ಯಮ, ಅವರ ಬಗ್ಗೆ ನಾನು ಏನು ಹೇಳಲು ಬಯಸುವುದಿಲ್ಲ,  ಅವರ ಸಹೋದರ ಗೆಲ್ಲುತ್ತಾರೆ, ಅವರ ಬಗ್ಗೆ ಮಾತನಾಡಿ ನನ್ನ ವ್ಯಾಪಾರ ನಷ್ಟ ಮಾಡಿಕೊಳ್ಳಲು ನನಗೆ ಇಷ್ಟವಿಲ್ಲ ಎಂದು ಇಲ್ಲಿನ ನಿವಾಸಿಯೊಬ್ಬರು ಹೇಳಿದ್ದಾರೆ.
ಸಿಎಂ ಮತ್ತು ಅವರ ಕುಟುಂಬದವರ ಕಣ್ಣೀರಿನಿಂದ ನಮ್ಮ ಬಾವಿ ಹಾಗೂ ಕೆರಗೆಳನ್ನು ತುಂಬಿಸಿಕೊಳ್ಳಲು ನಾವು ಕಾಯುತ್ತಿದ್ದೇವೆ ಎಂದು ಹೇಳಿರುವ ರಾಜರಾಜೇಶ್ವರಿ ನಗರ ನಿವಾಸಿ ಶಿಲ್ಪಾ ಎನ್ ರಾಮ್, ಬಿಜೆಪಿ ಅಭ್ಯರ್ಥಿ ಅಶ್ವತ್ಥ ನಾರಾಯಣ ಅವರ ಬಗ್ಗೆ ನಮಗೆ ತಿಳಿದೆ ಇಲ್ಲ ಎಂದು ಹೇಳಿದ್ದಾರೆ, ಆದರೆ ಮೋದಿ ಅವರಿಗೋಸ್ಕರ ಬಿಜೆಪಿ ಅಭ್ಯರ್ಥಿಗೆ ಮತ ಹಾಕುತ್ತೇನೆ, ರಾಜ್ಯದ ಪ್ರಾದೇಶಿಕ ಪಕ್ಷದ ನಾಟಕ ನೋಡಿ ನಾನು ಬೇಸತ್ತಿದ್ದೇನೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ರಾಜರಾಜೇಶ್ವರಿ ನಗರದ ಕ್ಷಿಪ್ರ ಬೆಳವಣಿಗೆಯಿಂದಾಗಿ  ಇಲ್ಲಿನ ಜನ ಬೆಂಗಳೂರು ಗ್ರಾಮಾಂತರ ಅಥವಾ ಬಿಬಿಎಂಪಿ ಗೂ ಸೇರಲು ಇಷ್ಟ ಪಡುತ್ತಿಲ್ಲ, ಈ ಮೊದಲು ರಾಜರಾಜೇಶ್ವರಿ ನಗರ ಕೃಷಿ ಭೂಮಿಯಾಗಿತ್ತು, ನಂತರ ರಿಯಲ್ ಎಸ್ಟೇಟ್ ನಿಂದಾಗಿ ತಮ್ಮ ಭೂಮಿ ಕಳೆದಿಕೊಂಡ ಇಲ್ಲಿನ ರೈತರು ರಾಜಕಾರಣಿಗಳಿಗೆ ಹಿಡಿ ಹಿಡಿ ಶಾಪ ಹಾಕುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com