ಸುಭಾಷ್ ರಾಥೋಡ್
ಕರ್ನಾಟಕ
ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಥೋಡ್ ಗೆ 4 ಕಡೆ ವೋಟರ್ ಐಡಿ: ಬಿಜೆಪಿಯಿಂದ ದೂರು ದಾಖಲು
ಚಿಂಚೋಳಿ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಿಲು ಕೊನೆಯ ದಿನಾಂಕ ಮುಗಿದಿದೆ, ನಾಲ್ಕು ಕಡೆ ಮತದಾನದ ಗುರುತಿನ ಚೀಟಿ ಹೊಂದಿರುವ ಕಾಂಗ್ರೆಸ್ ಅಭ್ಯರ್ಥಿ ...
ಬೆಂಗಳೂರು: ಚಿಂಚೋಳಿ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಿಲು ಕೊನೆಯ ದಿನಾಂಕ ಮುಗಿದಿದೆ, ನಾಲ್ಕು ಕಡೆ ಮತದಾನದ ಗುರುತಿನ ಚೀಟಿ ಹೊಂದಿರುವ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಥೋಡ್ ಅವರ ನಾಮಪತ್ರವನ್ನು ರದ್ದುಪಡಿಸುವಂತೆ ಬಿಜೆಪಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.
ಈ ಸಂಬಂಧ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್‍ಗೆ ದಾಖಲೆಗಳ ಸಮೇತ ದೂರು ಸಲ್ಲಿಸಿರುವ ಬಿಜೆಪಿ ವಕ್ತಾರ ಅಶ್ವಥ್ ನಾರಾಯಣ, ಸಂಚಾಲಕ ದತ್ತಗುರು ಹೆಗಡೆ, ಸಹ ವಕ್ತಾರರಾದ ಎಸ್.ಪ್ರಕಾಶ್, ಎ.ಎಚ್.ಆನಂದ್, ಮುಖಂಡ ಛಲವಾದಿ ನಾರಾಯಣಸ್ವಾಮಿ ಅವರುಗಳು, ಕೂಡಲೇ ಸುಭಾಷ್ ರಾಥೋಡ್ ಅವರ ನಾಮಪತ್ರವನ್ನು ಅಸಿಂಧುಗೊಳಿಸುವಂತೆ ಒತ್ತಾಯಿಸಿದ್ದಾರೆ.
ಸುಭಾಷ್ ರಾಥೋಡ್ ಗುಲ್ಬರ್ಗ ಜಿಲ್ಲೆಯ ಆಳಂದ, ಕಲಬುರಗಿ ದಕ್ಷಿಣ, ಕಲಬುರಗಿಯ ಚಿಂಚೋಳಿ ಹಾಗೂ ಗುಲ್ಬರ್ಗ ದಕ್ಷಿಣದಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ. ಸುಭಾಷ್ ರಾಥೋಡ್ ನಾಲ್ಕು ಕಡೆ ಮತಪಟ್ಟಿಯಲ್ಲಿ ಹೆಸರು ಹೊಂದಿರುವುದರ ಜೊತೆಗೆ ಅಷ್ಟೇ ಸಂಖ್ಯೆಯ ಗುರುತಿನ ಚೀಟಿ ಹೊಂದಿದ್ದಾರೆ.
ನಾನು ನಾಲ್ಕು ಕಡೆ ಗುರುತಿನ ಚೀಟಿ ಹೊಂದಿರುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ, ಏಕೆಂದರೇ ಈ ವಿಷಯ ಕಲಬುರಗಿ ಆಯುಕ್ತ ಮತ್ತು ಉಪ ಆಯುಕ್ತರಿಗೆ ಈ ವಿಷಯ ತಿಳಿದಿದೆ, ಗುರುತಿನ ಚೀಟಿ ರದ್ದು ಪಡಿಸುವಂತೆ ನೀಡಿರುವ ಪತ್ರ ಕೂಡ ನನ್ನ ಬಳಿಯೇ ಇದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ