ಎಚ್.ಡಿ ದೇವೇಗೌಡ
ಕರ್ನಾಟಕ
ದೇವೇಗೌಡರನ್ನು ಗೆಲ್ಲಿಸಲು ಪರಮೇಶ್ವರ್ ಪ್ರಯತ್ನವನ್ನೇ ಮಾಡಿಲ್ಲ: ಸುರೇಶ್ ಗೌಡ
ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ದೇವೇಗೌಡರನ್ನು ಗೆಲ್ಲಿಸಲು ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಪ್ರಯತ್ನ ಮಾಡಿಯೇ ಇಲ್ಲ ಎಂದು ....
ಬೆಂಗಳೂರು: ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ದೇವೇಗೌಡರನ್ನು ಗೆಲ್ಲಿಸಲು ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಪ್ರಯತ್ನ ಮಾಡಿಯೇ ಇಲ್ಲ ಎಂದು ಮಾಜಿ ಶಾಸಕ ಸುರೇಶ್ ಗೌಡ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ತುಮಕೂರಿನಲ್ಲಿ ಕಾಂಗ್ರೆಸ್ ಪಕ್ಷದವರನ್ನೇ ನಿಲ್ಲಿಸುವ ಮನಸ್ಸಿತ್ತು ಆದರೆ ಅನಿವಾರ್ಯವಾಗಿ ದೇವೇಗೌಡರಿಗೆ ಬೆಂಬಲ ಸೂಚಿಸಬೇಕಾಯಿತು. ಹಾಗಾಗಿ ಪರಮೇಶ್ವರ ಕೂಡ ದೇವೇಗೌಡರ ಪರ ಪ್ರಚಾರವನ್ನೇ ಮಾಡಲಿಲ್ಲ ಎಂದು ಆಪಾದಿಸಿದ್ದಾರೆ.
ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ ಕೂಡ ದೇವೇಗೌಡರನ್ನ ಗೆಲ್ಲಿಸುವುದಕ್ಕೆ ಒಂದು ರೂಪಾಯಿ ಕೆಲಸ ಮಾಡಿಲ್ಲ. ಅಲ್ಲದೆ ಉಪಮುಖ್ಯಮಂತ್ರಿ ಪರಮೇಶ್ವರ್ ಕೂಡ ಎಲ್ಲೂ ಸಭೆ ಮಾಡಿ ಗೆಲ್ಲಿಸೋಕೆ ಶ್ರಮಿಸಿಲ್ಲ ಎಂದು ಆಪಾದಿಸಿದ್ದಾರೆ. ಒಂದೊಮ್ಮೆ ತುಮಕೂರಿನಲ್ಲಿ ದೇವೇಗೌಡರು ಸೋತರೆ ಅದಕ್ಕೆ ಕಾಂಗ್ರೆಸ್-ಜೆಡಿಎಸ್ ಕಾರಣವೇ ಹೊರತು ಬಿಜೆಪಿ ಅಲ್ಲ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ