ಕುಂದಗೋಳ: ಹೆಚ್ಚಿನ ಮತದಾರರನ್ನು ಹೊಂದಿರುವ ಕುಟುಂಬ, ರಾಜಕೀಯದಲ್ಲಿ ಪ್ರಮುಖ ಪಾತ್ರ

ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಗುಡಿಗೇರಿ ಗ್ರಾಮದ ಸುತಾರ್ ಕುಟುಂಬ ತಾಲೂಕಿನಲ್ಲಿಯೇ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಕುಟುಂಬ ಎಂದು ಹೆಸರಾಗಿದೆ. ಈ ಕುಟುಂಬದ ಸದಸ್ಯರು ಕೂಡಾ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದಾರೆ.
ಕುಟುಂಬ ಸದಸ್ಯರು
ಕುಟುಂಬ ಸದಸ್ಯರು
Updated on

ಗುಡಿಗೇರಿ: ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಗುಡಿಗೇರಿ ಗ್ರಾಮದ ಸುತಾರ್ ಕುಟುಂಬ ಯಾವುದೇ ಹಬ್ಬಕ್ಕೂ ಕಡಿಮೆ ಇಲ್ಲದಂತೆ ಮತದಾನದಲ್ಲಿ ಪಾಲ್ಗೊಂಡಿದ್ದರು.

ಈ ಕುಟುಂಬದಲ್ಲಿ22 ಅರ್ಹ ಮತದಾರರಿದ್ದು, ತಾಲೂಕಿನಲ್ಲಿಯೇ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಕುಟುಂಬ ಎಂದು ಹೆಸರಾಗಿದೆ. ಈ ಕುಟುಂಬದ ಸದಸ್ಯರು ಕೂಡಾ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದಾರೆ.

ಸುತಾರ್ ಕುಟುಂಬದ ನಾಲ್ಕು ತಲೆಮಾರಿನ ಸದಸ್ಯರು ಸ್ಥಳೀಯ ಆಡಳಿತದಲ್ಲಿ  ಪ್ರಮುಖ ಪಾತ್ರ ವಹಿಸುತ್ತಾರೆ.  ಈ ಕುಟುಂಬ 30 ಸದಸ್ಯರನ್ನು ಹೊಂದಿದೆ. ಈ ಬಾರಿ  ಮೂವರು ಮೊದಲ ಬಾರಿಗೆ ಮತ ಚಲಾಯಿಸಿದ್ದಾರೆ. ನಿನ್ನೆದಿನ ಹುಬ್ಭಳಿಯಿಂದ ಬರಬೇಕಾದ  ಹೊಸ ಮತದಾರರಿಗಾಗಿ ಕುಟುಂಬ ಕಾಯುತಿತ್ತು. ಅವರು ಬಂದ ನಂತರ ಎಲ್ಲರೂ ಒಟ್ಟಿಗೆ ಸೇರಿ ಮತ ಚಲಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com