ನಾಮಪತ್ರ ಸಲ್ಲಿಸಲು ಒಂದೇ ದಿನ ಕೊನೆಯಿರುವಾಗ ಬಿಜೆಪಿ ಅಭ್ಯರ್ಥಿಯಾಗಿ ತೇಜಸ್ವಿ ಸೂರ್ಯ ಅವರ ಹೆಸರನ್ನು ಪ್ರಕಟಿಸಲಾಗಿತ್ತು, 28 ವರ್ಷದ ಯುವಕನಿಗೆ ಬಿಜೆಪಿ ಲೋಕಸಭೆ ಟಿಕೆಟ್ ನೀಡಿದ್ದಿದ್ದು ಎಲ್ಲೆಡೆ ಚರ್ಚೆಗೆ ಕಾರಣವಾಗಿತ್ತು, ಲೋಕಸಭೆ ಟಿಕೆಟ್ ನೀಡದಿದ್ದರೇ ಪಕ್ಷದ ಪದಾಧಿಕಾರಿ ಅಥವಾ ವಕ್ತಾರರನ್ನಾಗಿ ತೇಜಸ್ವಿ ಅವರನ್ನು ನೇಮಿಸಲಾಗುತ್ತಿತ್ತು ಎಂದು ಬಿಜೆಪಿ ರಾಜ್ಯ.ಪ್ರಧಾನ ಕಾರ್ಯದರ್ಶಿ ಹೇಳಿದ್ದರು.