ಭುವನೇಶ್ವರ: ಒಡಿಶಾ ವಿಧಾನಸಭೆ ಚುನಾವಣೆಯಲ್ಲಿ ಬಿಜು ಜನತಾ ದಳ(ಬಿಜೆಡಿ)ದ ಐತಿಹಾಸಿಕ ಜಯಕ್ಕೆ ಕಾರಣರಾದ ನವೀನ್ ಪಟ್ನಾಯಕ್ 4ನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಹೊಸದಾಗಿ ಆಯ್ಕೆಯಾದ ಶಾಸಕರ ಸಭೆಯು ಭಾನುವಾರ ನಡೆದಿದ್ದು, ಪಟ್ನಾಯಕ್ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಯಿತು. ನಂತರ ಮಾತನಾಡಿದ ಪಟ್ನಾಯಕ್, ನಾವೆಲ್ಲರೂ ಜೊತೆಯಾಗಿ ಒಡಿಶಾ ಮತ್ತು ಜನತೆಯ ಅಭಿವೃದ್ಧಿಗಾಗಿ ಶ್ರಮಿಸೋಣ ಎಂದರು. ಇದೇ ವೇಳೆ, ರಾಜ್ಯದಲ್ಲಿ ಹೊಸ ವಿಧಾನಸಭೆ ರಚನೆ ಪ್ರಕ್ರಿಯೆ ಆರಂಭವಾಗಿದೆ. ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಜ್ಯೋತಿ ಪ್ರಕಾಶ್ ದಾಸ್ ಅವರು ರಾಜ್ಯಪಾಲ ಎಸ್.ಸಿ. ಜಮೀರ್‌ರನ್ನು ಭೇಟಿಯಾಗಿ ಗೆಜೆಟ್ ಅಧಿಸೂಚನೆ ಒದಗಿಸಿದ್ದಾರೆ.
Advertisement