
ಸಿತಾರ್ ನವಾಝ್ ದಿವಂಗತ ಉಸ್ತಾದ್ ಬಾಲೇಖಾನ್ (1942-2007) ಅವರ 73ನೆ ಜನ್ಮದಿನದ ಪ್ರಯುಕ್ತ ಅವರ ಗೌರವ ಸ್ಮರಣಾರ್ಥ ಉಸ್ತಾದ್ ಬಾಲೇಖಾನ್ ಸ್ಮರಣೆ ಸಮಿತಿ, ಬೆಂಗಳೂರು, ಸಂಗೀತ ಸಂಜೆಯನ್ನು ಏರ್ಪಡಿಸಿದೆ.
ದಿನಾಂಕ: 29 ಅಗಸ್ಟ 2015, ಶನಿವಾರ
ಸಮಯ: 5: 15 ಸಂಜೆ
ಕಛೇರಿ ನಡೆಯುವ ಸ್ಥಳ: ಜೆ ಎಸ್ ಎಸ್ ಆಡಿಟೋರಿಯಂ 8ನೆ ಬ್ಲಾಕ್, ಜಯನಗರ.
ಸಂಗೀತ ಕಛೇರಿಯು ಅನೀಸಾ ಬಾಲೇಖಾನ್ ಮತ್ತು ಪರ್ವಿನ್ ಬಾಲೇಖಾನ್( ಉಸ್ತಾದ್ ಬಾಲೇಖಾನ್ ಅವರ ಪುತ್ರಿಯರು)ಅವರ ಪ್ರಾರ್ಥನೆಯೊಂದಿಗೆ ಆರಂಭವಾಗುವದು.
ಹಿಂದುಸ್ತಾನಿ ಗಾಯನ ಕಛೇರಿಯನ್ನು ಶಿವಲೀಲಾ ಸಿದ್ದವೀರೆ ಇವರು ನಡೆಸಿಕೊಡುತ್ತಾರೆ. ಇವರೊಂದಿಗೆ ತಬಲಾ ಸಾಥ್ ಶ್ರೀ ಭೀಮಶಂಕರ್ ಬಿದನೂರು ಹಾಗೂ ಹಾರ್ಮೋನಿಯಂ ಸಾಥ್ ಶ್ರೀ ಮೃತ್ಯುಂಜಯ ಎಚ್ ನೀಡುತ್ತಾರೆ.
ಗಾಯನದ ಬಳಿಕ ಕೊಳಲು ವಾದನ ಕಛೇರಿಯನ್ನು ಪಂಡಿತ್ ರಾಕೇಶ್ ಚೌರಾಸಿಯಾ (ಪದ್ಮವಿಭೂಷಣ ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅವರ ಶಿಷ್ಯ) ನಡೆಸಿಕೊಡುತ್ತಾರೆ. ಇವರೊಂದಿಗೆ ತಬಲಾ ಸಾಥ್ ಪಂಡಿತ್ ರಾಜೆಂದ್ರ ನಾಕೋಡ್.
ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಪುರಸ್ಕ್ರತ ಪಂಡಿತ್ ಇಂದೂದರ್ ನಿರೋಡಿ (ಹಿರಿಯ ಹಿಂದುಸ್ತಾನಿ ಗಾಯಕ) ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದು, ರಯೀಸ್ ಬಾಲೇಖಾನ್ ಹಾಗೂ ಹಫೀಝ್ ಬಾಲೇಖಾನ್ ಅವರು ಹಾಡಿದ ದಾಸರ ಪದದ ಸಿ.ಡಿ “ದಾಸ ಗಾನ ಸಿಂಚನ” ವನ್ನು ಬಿಡುಗಡೆ ಮಾಡಲಾಗುತ್ತದೆ.
ಬಾಲೇಖಾನ್ ಸ್ಮರಣೆ ಸಮಿತಿಯ ವತಿಯಿಂದ ಈ ವರುಷ ಸಂಗೀತ ವಿದ್ಯಾರ್ಥಿ ಶ್ರೀ. ದೀಪಕ್ ನಾಗಣ್ಣನವರ್ ಅವರಿಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಪ್ರತೀವರುಷವೂ ಸಿತಾರ ನವಾಝ್ ಉಸ್ತಾದ್ ಬಾಲೇಖಾನ್ ಸ್ಮರಣಾರ್ಥ ಯುವಕಲಾವಿದರೊಬ್ಬರಿಗೆ ವಿದ್ಯಾರ್ಥಿವೇತನವನ್ನು ಸಮಿತಿಯ ವತಿಯಿಂದ ನೀಡಲಾಗುತ್ತದೆ.
ಉಸ್ತಾದ್ ಬಾಲೇಖಾನ್ ಅವರು ‘ಸಿತಾರ ರತ್ನ’ ರಹೀಮತ್ ಖಾನ್ ಅವರ ಸಂಗೀತ ಪರಂಪರೆಯ ಮನೆತನದ ಕುಡಿಯಾಗಿದ್ದು, ತಮ್ಮ ಹಾಡುವ ಸಿತಾರನಿಂದ ಪ್ರಸಿದ್ಧಿ ಪಡೆದಿದ್ದರು. ಅವರು ಸಿತಾರ್ ಕಲಿಕೆಯನ್ನು ತಮ್ಮ ಅಜ್ಜ ರಹೀಮತ್‍ಖಾನ್ ಅವರಿಂದ ಆರಂಭ ಮಾಡಿದ್ದು, ರಹೀಮತ್‍ಖಾನ್ ಮಧ್ಯಪ್ರದೇಶದ ಇಂದೋರ್‍ನಿಂದ 1912ರಲ್ಲಿ ಧಾರವಾಡಕ್ಕೆ ವಲಸೆ ಬಂದವರಾಗಿದ್ದು, ಮೈಸೂರು ಮಹಾರಾಜರಿಂದ ‘ಸಿತಾರ್ ರತ್ನ’ ಬಿರುದನ್ನು ಪಡೆದರು. ಉಸ್ತಾದ್ ಬಾಲೇಖಾನ್ ತಮ್ಮ ತಂದೆ ಪ್ರೋಫೆಸರ್ ಅಬ್ದುಲ್ ಕರಿಂಖಾನ್ ಅವರಿಂದ ಸಿತಾರ್ ತರಬೇತಿ ಪಡೆದಿದ್ದು ಧಾರವಾಡ ಆಕಾಶವಾಣಿಯಲ್ಲಿ 1973ರಿಂದ 2002ರವರೆಗೆ ನಿಲಯ ಕಲಾವಿದರಾಗಿದ್ದರಲ್ಲದೇ, ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ‘ಏ’ ಗ್ರೇಡ್ ಕಲಾವಿದರಾಗಿದ್ದರು. ಅವರಲ್ಲದೇ ಅವರ ಕುಟುಂಬವೂ ದಕ್ಷಿಣ ಭಾರತದಲ್ಲಿ ‘ಸಿತಾರ್’ ಜನಪ್ರೀಯತೆ ಗಳಿಸುವಲ್ಲಿ ಅಪಾರ ಕೊಡುಗೆ ನೀಡಿದ್ದಾರೆ.
ಧಾರವಾಡದಲ್ಲಿ ನೆಲೆಸಿದ್ದರೂ ಬಾಲೇಖಾನ್ ಅವರಿಗೆ ಬೆಂಗಳೂರು ಎರಡನೇ ಮನೆಯಂತಿತ್ತು. ಅವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಗೆ ಮೂರು ಅವಧಿಗೆ ಸದಸ್ಯರಾಗಿದ್ದರು. ಬೆಂಗಳೂರಿನಲ್ಲಿ ಹಲವಾರು ಕಛೇರಿ ನೀಡಿ ಇಲ್ಲಿನ ಸಂಗೀತ ಪ್ರೀಯರ ಮನಸೂರೆಗೊಂಡಿದ್ದರು. 1970ರ ದಶಕದಿಂದ ಮೂರು ದಶಕಗಳ ಕಾಲ ಪ್ರತೀ ತಿಂಗಳು ಬೆಂಗಳೂರಿನಲ್ಲಿ ತರಗತಿ ನಡೆಸಿ ನೂರಾರು ವಿದ್ಯಾರ್ಥಿಗಳಿಗೆ ಸಿತಾರ್ ತರಬೇತಿ ನೀಡಿದ್ದರು. ಅವರ 50ನೇ ಜನ್ಮದಿನದ ವರುಷದ ಪ್ರಯುಕ್ತ ಅಕ್ಟೋಬರ್ 1992ರಲ್ಲಿ ಚೌಡಯ್ಯ ಮೆಮೋರಿಯಲ್ ಸಭಾಂಗಣದಲ್ಲಿ ಅವರ ಅಪಾರ ಶಿಷ್ಯವರ್ಗ, ಅಭಿಮಾನಿವೃಂದ, ಹಾಗೂ ಸ್ನೇಹಿತರು ಅವರನ್ನು ಸನ್ಮಾನಿಸಿದರು. ಹಾಗೂ ಭಾರತ ರತ್ನ ದಿವಂಗತ ಪಂಡಿತ ಭೀಮಸೇನ ಜೋಶಿ ಅವರ ಘನ ಉಪಸ್ಥಿತಿಯಿದ್ದು ಅವರ ಸಂಗೀತ ಕಛೇರಿಯು ಸನ್ಮಾನ ಸಮಾರಂಭವನ್ನು ಕಳೆಗಟ್ಟಿತ್ತು.
ಉಸ್ತಾದ್ ಬಾಲೇಖಾನ್ ಸ್ಮರಣೆ ಸಮಿತಿ ಬೆಂಗಳೂರು, 2010ರಲ್ಲಿ ಉಸ್ತಾದ್ ಹಫೀಜ್‍ಖಾನ್ (ಬಾಲೇಖಾನ್ ಅವರ ಪುತ್ರ) ಅವರಿಂದ ಆರಂಭಗೊಂಡಿದ್ದು ಐದು ವರುಷದಲ್ಲೇ ಉಸ್ತಾದ್ ಬಾಲೇಖಾನ್ ಸ್ಮರಣಾರ್ಥ ಆರು ಸಂಗೀತ ಕಛೇರಿಯನ್ನು ಯಶಸ್ವಿಯಾಗಿ ನಡೆಸಿದ್ದು ಪದ್ಮವಿಭೂಷಣ ಡಾ. ಎನ್ ರಾಜಮ್, ವಿದುಷಿ ಸಂಗೀತಾ ಶಂಕರ್, ಪಂಡಿತ್ ವಿನಾಯಕ್ ತೊರವಿ, ಗ್ರ್ಯಾಮಿ ಪ್ರಶಸ್ತಿ ವಿಜೇತ ಪಂಡಿತ್ ವಿಶ್ವಮೋಹನ್ ಭಟ್, ಪದ್ಮ ಶ್ರೀ ಉಸ್ತಾದ್ ಶಾಹಿದ್ ಪರ್ವೆಜ್, ಕೇಂದ್ರ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ಪಂಡಿತ್ ವೆಂಕಟೇಶ್ ಕುಮಾರ್, ಶ್ರೀಮತಿ ಡಾ. ಜಯಂತಿ ಕುಮರೇಶ್ ಹಾಗೂ ಇನ್ನಿತರರು ಕಚೇರಿ ನಡೆಸಿ ಪಾಲ್ಗೊಂಡು ಬಾಲೇಖಾನ್ ಸ್ಮರಣೆ ಸಮಿತಿಯ ಆಶಯವನ್ನು ಶ್ರೀಮಂತಗೊಳಿಸಿದ್ದಾರೆ.
ಸಮಿತಿಯು ಕಲೆ ಹಾಗೂ ಸಂಗೀತ ರಸಿಕರಿಂದ ಉದಾರ ದೇಣಿಗೆಯನ್ನು ಸ್ವಾಗತಿಸುತ್ತದೆ. ಪ್ರವೇಶ ಉಚಿತ.
ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಸಂಪರ್ಕಿಸಿ
ಶ್ರೀಮತಿ. ಶಾರದಾ ಶ್ರೀನಿವಾಸನ್: 9880088455
ಕುಮಾರಿ ಚರಿತಾ ಕಲಿಹಾಳ್: 9943118663
ಚೇರಮನ್
ಉಸ್ತಾದ್ ಬಾಲೇಖಾನ್ ಸ್ಮರಣೆ ಸಮಿತಿ, ಬೆಂಗಳೂರು
(ಉಸ್ತಾದ್ ಹಫೀಝ್ ಬಾಲೇಖಾನ್)
ಸಂಪರ್ಕ: 9886155663
Advertisement