
ಬೆಂಗಳೂರು: `ಮಲೆಗಳಲ್ಲಿ ಮದುಮಗಳು' ನಗರದಲ್ಲಿ ಮತ್ತೆ ಅನಾವರಣಗೊಳ್ಳಲಿದ್ದಾಳೆ. ನಗರದ ಜನತೆ ಕಾತರದಿಂದ ಕಾಯುತ್ತಿರುವ ನಾಟಕದ ಮೂರನೇ ಆವೃತ್ತಿ
ಮತ್ತೆ ಬೆಂಗಳೂರಿಗೆ ಬರುತ್ತಿದೆ. ರಾಷ್ಟ್ರೀಯ ನಾಟಕ ಶಾಲೆ ವತಿಯಿಂದ ಕುವೆಂಪು ಅವರ ಜನಪ್ರಿಯ ನಾಟಕ `ಮಲೆಗಳಲ್ಲಿ ಮದುಮಗಳು' ಫೆ.16ರಿಂದ ಮಾರ್ಚ್ 21ರವರೆಗೆ ಪ್ರತಿ ಸೋಮವಾರ, ಬುಧವಾರ, ಶುಕ್ರವಾರ, ಶನಿವಾರ ರಾತ್ರಿ 8.30ಕ್ಕೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ನಡೆಯಲಿದೆ. ವೈ.ಕೆ. ರಂಗಸ್ವಾಮಿ ರಂಗರೂಪ ನೀಡಲಿದ್ದು, ಹಂಸಲೇಖ ಅವರ ಸಂಗೀತ, ಶಶಿಧರ ಅಡಪ ಅವರ ರಂಗವಿನ್ಯಾಸದಲ್ಲಿ, ಸಿ. ಬಸವಲಿಂಗಯ್ಯ ಅವರ ನಿರ್ದೇಶನದಲ್ಲಿ 9 ಗಂಟೆಗಳ ರಂಗ ಪ್ರಯೋಗ ಮೂಡಿಬರಲಿದೆ. ಟಿಕೆಟ್ ದರ ರು. 200, ವಿದ್ಯಾರ್ಥಿಗಳಿಗೆ ರು. 150. ಕಲಾಗ್ರಾಮದಲ್ಲಿ ಟಿಕೆಟ್ ಲಭ್ಯ. ಇದಲ್ಲದೆ ಬುಕ್ ಮೈಷೋನಲ್ಲೂ ಟಿಕೆಟ್ ಬುಕ್ ಮಾಡಬಹುದು.
Advertisement