"ತಾಯಿ ಜನ್ಮ ಕೊಟ್ಟಳು, ತಂದೆ ಜನ್ಮಕ್ಕೆ ಅರ್ಥ ಕೊಡಲಿಲ್ಲ"

ಲಾಲ್ ಬಾಗ್ ನಲ್ಲಿರುವ ಬಂಡೆಗಳ ಮೇಲೆ ಆಟ ಆಡಬೇಕು.ಬೇಕರಿಯಲ್ಲಿ ನೋಡುವ ತರಾವರಿ ತಿಂಡಿಗಳನ್ನು ಸವಿಬೇಕು ಅಂತ ಮಕ್ಕಳು ಆಸೆ ಪಡೋದು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಅಪ್ಪ...ಅಂದರೆ ಆಕಾಶ.ಸಂಸಾರದ ಜವಾಬ್ದಾರಿ ವಹಿಸಿಕೊಳ್ಳೊ ಯಜಮಾನ.ಸಾಮಾನ್ಯವಾಗಿ ಶಾಲಾ ಕಾಲೇಜುಗಳಲ್ಲಿ ಮಕ್ಕಳು ಮೈ ಡ್ಯಾಡಿ ಇಸ್ ಗ್ರೇಟ್. ಅವರ ಸಪೋರ್ಟ್ ಇಲ್ಲ ಅಂದರೆ ನಾನು ಈ ಮಟ್ಟಕ್ಕೆ  ಸಾಧನೆ ಮಾಡೋಕೆ ಆಗುತ್ತಿರಲಿಲ್ಲ ಎಂದು ಹೇಳಿದ್ದನ್ನು ಕೇಳಿದ್ದೇವೆ. ಆದರೆ ಸಪೋರ್ಟ್ ಮಾಡಿದ ಅಪ್ಪಂದಿರು ನಮ್ಮ ನಡುವೆ ಕೆಲವರಿದ್ದಾರೆ.ಮದುವೆ ಮಕ್ಕಳು ಮಾಡಿಕೊಂಡರೆ ಸಾಕೇ?ಅವರ ಕಷ್ಟ. ಸುಖಗಳಲ್ಲಿ ಭಾಗಿಯಾಗುವುದು ಬೇಡವೆ? ಇಂಥಹ ಪ್ರಶ್ನೆ ಹುಟ್ಟಲು ಕಾರಣವಾಗಿದ್ದು  ವಿನೋದ್  ಎಂಬ ಹುಡುಗನ ಜೀವಗಾಥೆ.
ತಾಯಿ ಜನ್ಮ ಕೊಟ್ಟಳು.ತಂದೆ ಜನ್ಮಕ್ಕೆ  ಅರ್ಥನೇ ಕೊಡಲಿಲ್ಲ ಎಂದು ತನ್ನ. ತಂದೆಯನ್ನು ನೆನಸಿಕೊಂಡು ಕೊರಗುತ್ತಿರುವ ಅನೇಕ ಮಕ್ಕಳಲ್ಲಿ ಈತನು ಒಬ್ಬ.ಬಾಲ್ಯದಲ್ಲಿ ತಂದೆಯ ಜೊತೆ ಕಬ್ಬನ್ ಪಾರ್ಕ್ ಹೋಗಬೇಕು.ಬಾಲಭವನದಲ್ಲಿ ಇರೋ ಟ್ರೈನ್ ಅಲ್ಲಿ ಜಾಲಿ ರೌಂಡ್ ಹೊಡೀಬೇಕು.ಲಾಲ್ ಬಾಗ್ ನಲ್ಲಿ ಪ್ಲವರ್ ಶೋ ನೋಡಬೇಕು.ಲಾಲ್ ಬಾಗ್ ನಲ್ಲಿರುವ ಬಂಡೆಗಳ ಮೇಲೆ ಆಟ ಆಡಬೇಕು.ಬೇಕರಿಯಲ್ಲಿ ನೋಡುವ ತರಾವರಿ ತಿಂಡಿಗಳನ್ನು ಸವಿಬೇಕು ಅಂತ ಮಕ್ಕಳು ಆಸೆ ಪಡೋದು ಸಹಜ.ಹಾಗೆ ಆಸೆ ಪಟ್ಟವ ಇವ.ಆದರೆ ಈತನಿಗೆ ಆ ಭಾಗ್ಯ ಸಿಗಲಿಲ್ಲ. ಅದಕ್ಕೆ ಅಪ್ಪನ ಬೇಜವಾಬ್ದಾರಿ ಕಾರಣ ಎಂದು ವಿಶೇಶವಾಗಿ ಹೇಳಬೇಕಿಲ್ಲ.ಒಂದೊಮ್ಮೆ ಈತ ತನ್ನ ತಾಯಿಯೊಂದಿಗೆ ದೇವಸ್ಥಾನಕ್ಕೆ ಹೋದಾಗ ತಿಂಡಿ ಕೊಡಿಸು ಎಂದು ಹಠ ಮಾಡುತ್ತಿದ್ದನಂತೆ.ಆದರೆ ಆತನ ತಾಯಿ ಹಣ ಇಲ್ಲದ ಖಾಲಿ ಪರ್ಸನ್ನು ನೋಡಿ ತಿಂಡಿ ಕೊಡಿಸಲಾಗದೆ ದಾರಿಯುದ್ದಕ್ಕೂ ಸಮಾಧಾನ ಮಾಡುತ್ತಾ ಕರೆತಂದಿದ್ದರಂತೆ.ತಿಂಡಿ ಕೊಡಿಸಲಿಲ್ಲ ಎಂದು ಈತ ಅಳುತ್ತಿದ್ದರೆ,ಮಗನ ಚಿಕ್ಕ. ಬೇಡಿಕೆಯನ್ನು ಈಡೇರಿಸಲಾಗಲಿಲ್ಲವಲ್ಲ. ಎಂದು ಕಣ್ಣೀರಲ್ಲಿ ಕೈ ತೊಳೆದರಂತೆ.

ಬಾಲ್ಯದಲ್ಲಿ ತಾತನ ತೋಳಿನಲ್ಲಿ ಶ್ರೀಮಂತಿಕೆಯಿಂದ ಬೆಳೆದ ಈತ ೬ ವರ್ಷದವನಾಗಿದ್ದಾಗ ತಾತನನ್ನು ಕಳೆದುಕೊಂಡ.ಅಪ್ಪ ಮನೆ ಜವಾಬ್ದಾರಿ ತೆಗೆದುಕೊಳ್ಲಬೇಕಿತ್ತು.ಅದು ಆಗಲಿಲ್ಲ.ಅಜ್ಜಿ ಆಸ್ತಿ ಎಂದು ನಿಟ್ಟುಸಿರು ಬಿಡೊ ಹೊತ್ತಲ್ಲಿ ಅಜ್ಜಿಯಿಂದ ಸಹಾಯ ಸಿಗದೇ ಉಸಿರು ಕಟ್ಟಿದ ಹಾಗಾಯಿತು.ಆ ಸಂದರ್ಭದಲ್ಲಿ ಈತನ ತಾಯಿಯ ಹೊಟ್ಟೆಯಲ್ಲಿ ಮಗು ಬೆಳೆಯುತ್ತಿತ್ತು ಗರ್ಭಿಣಿಯಾದವಳಿಗೆ ಹೊಟ್ಟೆತುಂಬ ಊಟ,ಆರೈಕೆ ಬಹಳ ಮುಖ್ಯ ಅಂತಹ ಸಂದರ್ಭದಲ್ಲಿ ಪಕ್ಕದ ಮನೆಯವರ ಬಳಿ ಊಟ ಬೇಡುವ ಪರಿಸ್ಥಿತಿ ಎದುರಾಯಿತು,ಅಮ್ಮ. ಆಸ್ಪತ್ರೆ ಸೇರಿಕೊಂಡರು.ಅಲ್ಲಿನ ಖರ್ಚು ವೆಚ್ಚ. ನೋಡಿಕೊಳ್ಳಬೇಕಾದ ಮನೆ ಒಡೆಯ ತನ್ನ ಖರ್ಚಿಗೆ  ಹಣ ಕಿತ್ತುಕೊಂಡು ಬರುತ್ತಿದ್ದರು.ಇಂತಹ ಕಷ್ಟದ ದಿನಗಳಲ್ಲಿ ಇವರ ಬಾಳಲ್ಲಿ ಆಶಾಕಿರಣ ಮೂಡಿತು.ಅಜ್ಜಿ ಮನೆಯ ಜವಾಬ್ದಾರಿ ವಹಿಸಿಕೊಂಡು ಇವರ ಬಾಳಿಗೆ ಬೆಳಕಾದರು.ಬಾಳಿನಲ್ಲಿ ಕಷ್ಟದ ದಿನಗಳು ಕಳೆಯುತ್ತಾರೆ ಬಂದಿದೆ ಎನ್ನುವಷ್ಟರಲ್ಲಿ ಮತ್ತೊಂದು ಸಮಸ್ಯೆ ತಲೆದೋರಿತು.
ಈತನ ತಂದೆ ಹಣ ನೋಡಿದಮೇಲೆ ಕೆಲಸಕ್ಕೆ ಸಂಪೂರ್ಣ ವಿದಾಯ ಹೇಳಿದರು.ಕೆಟ್ಟ ಚಟಗಳಿಗೆ ಬಲಿಯಾಗಿ ಕಳ್ಳತನ ಮಾಡೋದು,ಸಾಲ ಮಾಡೋದು ಹೆಚ್ಚು ಮಾಡಿದರು.ಮನೆಯಲ್ಲಿ ಟಿ.ವಿ.ನೋಡುತ್ತಾ ಸಮಯ ವ್ಯರ್ಥ ಮಾಡೋದು ಅಪ್ಪನ ಫುಲ್ ಟೈಮ್ ಡ್ಯೂಟಿ ಆಯಿತು.ಇವರನ್ನೇ ನಂಬಿಕೊಂಡಿದ್ದ ಇವರ ಕುಟುಂಬದ ಸ್ಥಿತಿ ಬಳಲಿ ಬೆಂಡಾಯಿತು.ಇಂಥ ಅಪ್ಪಂದಿರ ನಂಬಿಕೊಂಡು ಕಷ್ಟದ ಜೀವನ ನಡೆಸುತ್ತಿರುವ ತಾಯಿ ಮಕ್ಕಳಿಗೇನು ಕಮ್ಮಿ ಇಲ್ಲ. ಹೆಂಡತಿ ಮಕ್ಕಳ ಚಿಕ್ಕ ಚಿಕ್ಕ ಬೇಡಿಕೆಗಳನ್ನು ಇಡೇರಿಸಲಾಗದ ಇಂಥ ತಂದೆಯಂದಿರ ಮನಸ್ಸಿನ ಆರೋಗ್ಯಕರ ಬದಲಾವಣೆ ಎಂದು ಎಂಬುದೇ ಯಕ್ಷ ಪ್ರಶ್ನೆ?


- ಪಲ್ಲವಿ ಗೌಡ
 (ಮಾಧ್ಯಮ ವಿದ್ಯಾರ್ಥಿ)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com