ಬಿಕ್ಕಿ ಬಿಕ್ಕಿ ಅತ್ತಿದ್ದ ನನ್ನಪ್ಪ ; ತದನಂತರ ಹರಿಯಿತು ಆನಂದಬಾಷ್ಪ

ನಾನು ಐದನೇ ತರಗತಿ ಒದುತ್ತಿರುವಾಗ ಸಾಯಂಕಾಲ ಶಾಲೆಯಿಂದ ಮನೆಗೆ ಹೊರಡುವ ಸಮಯದಲ್ಲಿ ತೆಂಗಿನ ಮರದ ಕಟ್ಟೆ ಹತ್ತಿರ ಆಟ ಆಡುತ್ತಿದ್ದಾಗ...
ರೇಣುಕ ಪ್ರಸಾದ್ ಗೌಡ ಅಪ್ಪ ಲಕ್ಷ್ಮಣಯ್ಯ
ರೇಣುಕ ಪ್ರಸಾದ್ ಗೌಡ ಅಪ್ಪ ಲಕ್ಷ್ಮಣಯ್ಯ

ನಾನು ಐದನೇ ತರಗತಿ ಒದುತ್ತಿರುವಾಗ ಸಾಯಂಕಾಲ ಶಾಲೆಯಿಂದ ಮನೆಗೆ ಹೊರಡುವ ಸಮಯದಲ್ಲಿ ತೆಂಗಿನ ಮರದ ಕಟ್ಟೆ ಹತ್ತಿರ ಆಟ ಆಡುತ್ತಿದ್ದಾಗ ಒಂದು ಹುಡುಗಿ ಹಿಂದಿನಿಂದ ತಮಾಷೆಗಾಗಿ ತಳ್ಳಿದಳು.. ಆದರೆ ನನ್ನ ಎಡಗೈ ಕೀಲಿನ ಜೋಡಣೆ ಮುರಿದಿತ್ತು ಕೂಡಲೇ ಎಚ್ಚೆತ್ತ ಶಿಕ್ಷಕರು ಊರಿನವರಿಗೆ ವಿಷಯ ತಿಳಿಸಿದರು, ನಮ್ಮ ಊರಿನವರು ನನ್ನನ್ನು ಕೂಡಲೇ ಯಂಟಗಾನಹಳ್ಳಿ ನಾಟಿ ಆಸ್ಪತ್ರೆಗೆ ಕರೆದೊಯ್ದರು, ಪಟ್ಟಿ ಕಟ್ಟಿಸಿದರು. ಸ್ವಲ್ಪ ದಿನ ಆದ ಮೇಲೆ ವಾಸಿಯಾಗಬಹುದೆಂದು ಅಂದುಕೊಂಡಿದ್ದೆ ಆದರೆ ಊತ ಕಡಿಮ ಆಗಲಿಲ್ಲ. ಇದನ್ನರಿತ ಅಪ್ಪ ನೆಲಮಂಗಲದ ಸಕರ್ಾರಿ ಆಸ್ಪತ್ರೆಗೆ ಕರೆದೊಯ್ದು, ಸ್ಕ್ಯಾನಿಂಗ್ ಮಾಡಿಸಿದರು, ಸ್ಕ್ಯಾನಿಂಗ್ ನೋಡಿದ ಡಾ|ತುಳಸಿದಾಸ್ ಈ ಕೈ ಸರಿಹೋಗಲ್ಲ ತಡಮಾಡಿದಿರ ಎಂದು ಹೇಳಿಬಿಟ್ಟರು. ಜೀವನಪೂತರ್ಿ ಒಂದು ಕೈ ಇಲ್ಲದೆ ಬದುಕಬೇಕೆಂದು ನೆನೆದು ಅಪ್ಪ ಡಾಕ್ಟರ್ ಮುಂದೆ ಅಳತೊಡಗಿದರು.ಅಪ್ಪನ ಎದೆ ನಡುಗಿತು, ಅಪ್ಪ ವಿಕ್ಟೋರಿಯ ಆಸ್ಪತ್ರೆಗೆ ಕಳುಹಿಸಿಕೊಡಿ ಎಂದರು. ಅಲ್ಲಿಂದ ಹೊರಟು ಖಾಸಗಿ ಬಸ್ಸಿನಲ್ಲಿ ಹಿಂದಿನ ಸೀಟಿನಲ್ಲಿ ಕುಳಿತುಕೊಂಡೊ, ಬಸ್ಸಿನಲ್ಲಿ ಯಾರು ಇರಲಿಲ್ಲ. ಅಪ್ಪ ನನ್ನ ಕೈ ನೋಡಿ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ನನಗೆ ಆಗ ಯಾಕೆ ಎಂದು ಅರ್ಥ ಆಗಲಿಲ್ಲ. ನನಗೆ ಕೈ ಮುರಿದಿದ್ದಕ್ಕೆ ಒಂದು ರೀತಿ ಖುಷಿಯಿತ್ತು ಏಕೆಂದರೆ ಶಾಲೆಗೆ ರಜೆ ಕೊಟ್ಟಿದ್ದರು, ಅಪ್ಪ ಪ್ರತಿ ದಿನ ಸಾಲ ಸೊಲ ಮಾಡಿ, ದುಡ್ಡು ತಂದು ಹೋಟೆಲ್ನಲ್ಲಿ ಕೇಳಿದ್ದನ್ನು ಕೊಡಿಸುತ್ತಿದ್ದರು. ನಾನಂತೂ ಚೆನ್ನಾಗಿ ತಿನ್ನುತ್ತಿದ್ದೆ, ಈ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ.

ಅಪ್ಪ ಎಂದು ಆ ರೀತಿ ಅತ್ತಿದ್ದು ನಾನು ನೋಡಿರಲಿಲ್ಲ ಹೇಗೊ ವಿಕ್ಟೋರಿಯಾ ಆಸ್ಪತ್ರೆಗೆ ಹೋದಾಗ ಅಲ್ಲಿ ನಾಟಿ ಚಿಕಿತ್ಸೆ ತೆಗೆದುಕೊಂಡ ಕಾರಣ ಚಿಕಿತ್ಸೆ ನೀಡಲ್ಲ ಎಂದರು. ಹೇಗೋ ಒಪ್ಪಿಸಿದರು, ತದನಂತರ ನೂರು ರೂಪಾಯಿ ಕೊಡಿ ಎಂದರು ಡಾಕ್ಟರ್, ಅಪ್ಪನ ಹತ್ತಿರ ಅಷ್ಟು ದುಡ್ಡಿರಲಿಲ್ಲ. ದೊಡ್ಡಪ್ಪನಿಗೆ ಫೋನ್ ಮಾಡಿ ಕರೆಸಿಕೊಂಡೊ, ದೊಡ್ಡಪ್ಪ ದುಡ್ಡು ಕೊಟ್ಟರು, ಸುಮಾರು 2 ತಿಂಗಳ ನಂತರ ಕೈ ಸ್ವಲ್ಪ ಮಟ್ಟಿಗೆ ಸರಿಹೋಯಿತು. ಪೂರ್ತಿ ಸರಿ ಹೋಗಬೇಕಾದರೆ ಪ್ರತಿ ದಿನ ಬಿಸಿ ನೀರಿನಲ್ಲಿ ಕೆಲವು ವ್ಯಾಯಾಮ ಹೇಳಿಕೊಟ್ಟರು. ಅದರಂತೆ ಅಪ್ಪ ಪ್ರತಿದಿನ ಎಲ್ಲೇ ಇದ್ದರು, ಎಷ್ಟೇ ಕೆಲಸವಿದ್ರು ಓಡಿ ಬಂದು ನನಗಾಗಿ ಮರುಗಿದರು, ಚಿಕಿತ್ಸೆ ಕೊಟ್ಟರು. ಕೈ ಸರಿ ಹೋಯಿತು, ಅಪ್ಪನಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ನನಗಿಂತ ಹೆಚ್ಚು ನೋವು ಪಟ್ಟಿದ್ದು ಅಪ್ಪ, ಅಪ್ಪನಿಗೆ ಅಪ್ಪನೇ ಸಾಟಿ.


-ರೇಣುಕ ಪ್ರಸಾದ್ ಗೌಡ,
ಚಿಕ್ಕಸಂದ್ರ,
ಬೆಂಗಳೂರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com