
ನನಗೆ ಇನ್ನೂ ನೆನಪಿದೆ ಅಂದು ಅಪ್ಪನ ಕಣ್ಣಲ್ಲಿ ಕಣ್ಣೀರು ತುಂಬಿ ತುಳುಕುತಿತ್ತು ಯಾಕೆಂದರೆ ಅಂದು ದ್ವಿತೀಯ P.U.C ಫಲಿತಾಂಶ ಬಂದಿತ್ತು. ನಾನೇನು rank ಬಂದಿದ್ದೇನೆ ಎಂದು ಅಪ್ಪ ಕಣ್ಣೀರು ಹಾಕುತ್ತಿರಲಿಲ್ಲ ನಮ್ಮ ಮನೆತನದಲ್ಲೇ ಸ್ವಲ್ಪ ಮಟ್ಟಿಗೆ ಜಾಣ ಎನಿಸಿಕೊಂಡ ನಾನೇ ಒಂದಲ್ಲ ಎರಡಲ್ಲ ನಾಲ್ಕು ವಿಷಯಗಳಲ್ಲಿ ಡುಮ್ಕಿ ಹೊಡೆದಿದ್ದೆ ನನಗೇ ಫಲಿತಾಂಶ ತಿಳಿಯುವ ಮೊದಲೇ 'ನನ್ನ ಕೀರ್ತಿ ಪತಾಕೆ ಈಡೀ ಊರಿಗೇ ಹಬ್ಬಿತ್ತು.' ನನ್ನ ಮನೆಯವರ ಸಂಬಂಧಿಕರ ಸ್ನೇಹಿತರ ನೆರೆಹೊರೆಯವರ ಕುಹಕ ನಗೆಗೆ ಆಹಾರವಾಗಿದ್ದೆ. ಅವರ ಆ ವರ್ತನೆ ಕಂಡು ಇವರು ಜೀವನದಲ್ಲಿ ಪ್ರಥಮ ಬಾರಿಗೆ ನಗುತ್ತಿದ್ದಾರೆ ಎನಿಸಿತು.
ಆದರೂ ನನ್ನ ಅಪ್ಪ ನನ್ನಲ್ಲಿ ಛಲ ಧೈರ್ಯ ಸ್ಥೈರ್ಯ ತುಂಬಿದರು . ಜೀವನವೇ ಮುಗಿಯಿತು ಎಂದು ಕುಳಿತ ನನ್ನಲ್ಲಿ ಆತ್ಮವಿಶ್ವಾಸ ಮೂಡಿಸಿ ನನ್ನನ್ನು ಗಟ್ಟಿಗೊಳಿಸಿದರು .ನಾ ತಪ್ಪು ಮಾಡಿದಾಗ ನನ್ನನ್ನು ಅಪ್ಪ ನನ್ನನ್ನು ಬೈದಿದ್ದಾರೆ ಬಡೆದಿದ್ದಾರೆ ಆದರೆ ಅಂದು ಮಾರ್ಗದರ್ಶನ ಮಾಡಿದ್ದು ಹೊಸ ಸ್ಫೂರ್ತಿ ನೀಡಿತು
ಮರು ವರ್ಷವೇ ಹೊಸದಾಗಿ ಪರೀಕ್ಷೆ ಬರೆದು ಪಸ್ಟ ಕ್ಲಾಸ್ನಲ್ಲಿ ಪಾಸಾಗಿದ್ದೆ. ಮುಂದೆಯೂ ಡಿಗ್ರಿನಲ್ಲೂ ಡಿಸ್ಟಿಂಕ್ಷನ್ನಲ್ಲಿ ಪಾಸಾದೆ. ಪಾಸಾದ ಕೆಲವೇ ತಿಂಗಳಲ್ಲಿ ಕೇಂದ್ರ ಸರಕಾರಿ ನೌಕರಿಯು ಸಿಕ್ಕಿತು. ಆವಾಗ ಅಪ್ಪ ಪಟ್ಪಷಟ್ಟು ಖುಷಿ ಬೇರೆ ಯಾರೂ ಪಟ್ಟಿರಲಿಕ್ಕಿಲ್ಲ ಪ್ರಾಯಶಃ ನಾನೂ ಕೂಡ .
ಅಪ್ಪನ ಅಂದಿನ ಸ್ಫೂರ್ತಿ ತುಂಬಿದ ಮಾತುಗಳು ನನಗೆ ಆಗಾಗ ನೆನಪಾಗುತ್ತಲೇ ಇರುತ್ತವೆ. ಅಪ್ಪ ಇದುವರೆಗೂ ನಾ ಕೇಳುವ ಮುಂಚೆಯೇ ನನಗೆ ಬೇಕಿದ್ದನ್ನು ಕೊಡಿಸುತ್ತಾ ಬಂದಿದ್ದಾರೆ .ಹೀಗಾಗಿ ಅಪ್ಪಾ ಅದು ನನಗೆ ಬೇಕು ಎಂದು ಕೇಳಿದ್ದು ಕಡಿಮೆಯೇ ಎನ್ನಿ. ನೌಕರಿ ಸಿಕ್ಕು ಎರಡು ವರ್ಷ ಕಳೆದರೂ ತಪ್ಪಿಯೂ ಬೇಟಾ ನಿನ್ನ ಪಗಾರ ಎಷ್ಟು ಎಂದು ಒಮ್ಮೆಯೂ ಕೇಳಿಲ್ಲಾ. ನಾನು ಹೋದ ವರ್ಷ ಹಬ್ಬಕ್ಕೆ ಮನೆಯಲ್ಲಿ ಎಲ್ಲರಿಗೂ ಹೊಸ ಬಟ್ಟೆ ಖರೀದಿಸಿದೆ ಆದರೆ ನನಗೆ ಬಟ್ಟೆ ಕೊಡಿಸಿದ್ದು ಅಪ್ಪನೆ. ಪ್ರತಿ ಶನಿವಾರ ಊರಿಗೆ ಹೋದಾಗ ನನ್ನ ನೋಡಿ ಅಪ್ಪನ ಮುಖ ಅರಳುವುದನ್ನು ನೋಡುವುದೇ ನನಗೆ ದೊಡ್ಡ ಖುಷಿ ನನಗೆ ಅಪ್ಪನೇ ಶಕ್ತಿ ಅಪ್ಪನೇ ಸ್ಫೂರ್ತಿ.
-ರಾಜು ಅ ಬಂಡೇಬುರುಜ, ಭಾರಪೇಟ ಗಲ್ಲಿ, ರಬಕವಿ, ತಾ. ಜಮಖಂಡಿ
Advertisement