ಫಿಫಾ ವಿಶ್ವಕಪ್ ಪುಟ್ಬಾಲ್: ಟಿಮೊ ವಾರ್ನರ್, ರೊನಾಲ್ಡೊ ಸೇರಿ ಐವರು ಸ್ಟಾರ್ ಆಟಗಾರರು ಇವರು
: 2018 ಫಿಫಾ ವಿಶ್ವಕಪ್ ಪುಟ್ಬಾಲ್ ಟೂರ್ನಿಗೆ ನಾಳೆ ಚಾಲನೆ ದೊರೆಯಲಿದೆ. ಈ ಬಾರಿಯ ವಿಶ್ವಕಪ್ ನಲ್ಲಿ ಐವರು ಪೆನಾಲ್ಟಿ ಬಾಕ್ಸ್ ಆಟಗಾರರು ಅದ್ಬುತ ಪ್ರದರ್ಶನ ತೋರಲು ಕಾತುರರಾಗಿದ್ದಾರೆ.
ಸೆಂಟ್ ಪಿಟರ್ಸ್ ಬರ್ಗ್: 2018 ಫಿಫಾ ವಿಶ್ವಕಪ್ ಪುಟ್ಬಾಲ್ ಟೂರ್ನಿಗೆ ನಾಳೆ ಚಾಲನೆ ದೊರೆಯಲಿದೆ. ಈ ಬಾರಿಯ ವಿಶ್ವಕಪ್ ನಲ್ಲಿ ಐವರು ಪೆನಾಲ್ಟಿ ಬಾಕ್ಸ್ ಆಟಗಾರರು ಅದ್ಬುತ ಪ್ರದರ್ಶನ ತೋರಲು ಕಾತುರರಾಗಿದ್ದಾರೆ.
ಈ ಆಟಗಾರರು ಪಂದ್ಯದ ಗತಿಯನ್ನೇ ಬದಲಾಯಿಸುವಂತಹ ಶಕ್ತಿ ಹೊಂದಿದ್ದು, ಇವರ ಆಟ ವೀಕ್ಷಿಸಲು ಪ್ರಪಂಚದಾದ್ಯಂತ ಸಾವಿರಾರು ಪುಟ್ಬಾಲ್ ಪ್ರೇಮಿಗಳು ಕಾಯುತ್ತಿದ್ದಾರೆ. ಅಂತಹ ಆಟಗಾರರ ಬಗ್ಗೆ ಒಂದಿಷ್ಟು ಕಿರುಪರಿಚಯ.
ಟಿಮೊ ವಾರ್ನರ್: ಜರ್ಮನಿಯ ಮಿರೊಸ್ಲಾವ ಕ್ಲೊಸೆ 2014ರ ಅಂತಾರಾಷ್ಟ್ರೀಯ ಪುಟ್ಬಾಲ್ ಟೂರ್ನಿಯ ನಂತರ ನಿವೃತ್ತಿಯಾದ ನಂತರ ಆ ಸ್ಥಾನವನ್ನು ವಾರ್ನರ್ ತುಂಬುತ್ತಿದ್ದಾರೆ. ಕಳೆದ ಆವೃತ್ತಿಯಲ್ಲಿ ಅವರು 21 ಗೋಲುಗಳನ್ನು ಪಡೆದುಕೊಂಡಿದ್ದಾರೆ. 22 ವರ್ಷದ ವಾರ್ನರ್ ಮೊದಲ ಟೂರ್ನಮೆಂಟಿನಲ್ಲಿಯೇ ಅದ್ಬುತ ಪ್ರದರ್ಶನ ತೋರುವ ಉತ್ಸಾಹದಲ್ಲಿದ್ದಾರೆ.
ಗ್ಯಾಬ್ರಿಲ್ ಜಿಸಸ್: ಮುಂದಿನ ಸ್ಥಾನದಲ್ಲಿ ಭ್ರಜಿಲ್ ತಂಡಕ್ಕೆ ಪ್ರತಿಭಾವಂತ ಆಟಗಾರರ ಕೊರತೆ ಇದೆ. ಆದರೆ, ಫೆನಾಲ್ಟಿ ಪ್ರದೇಶದಲ್ಲಿ ಕ್ಷಿಪ್ರ ಗತಿಯಲ್ಲಿ ಚಿಂತನೆ ,ಆಟ ಪೂರ್ಣಗೊಳಿಸುವ ಕಾರಣ ಜಿಸಸ್ ಈ ಮಾರ್ಗವನ್ನು ಮುನ್ನುಗಿಸುವ ನಿರೀಕ್ಷೆ ಇದೆ.
ಹ್ಯಾರಿ ಕ್ಯಾನೆ: ಇಂಗ್ಲೆಂಡ್ ತಂಡದ ನಾಯಕರೆಂದು ಹ್ಯಾರಿಕ್ಯಾನೆ ಕಳೆದ ತಿಂಗಳಷ್ಟೇ ಅಧಿಕೃತವಾಗಿ ಘೋಷಿಸಲಾಗಿದೆ. ಕಳೆದ ಅವಧಿಯ ಟೊಟೆಹೆಮ್ ಚಾಂಫಿಯನ್ ಲೀಗ್ ನಲ್ಲಿ ಏಳು ಪಂದ್ಯಗಳಲ್ಲಿ ಏಳು ಗೋಲು ಗಳಿಸಿದ್ದರು. ಒಂದು ವೇಳೆ ಇಂಗ್ಲೆಂಡ್ ಅವಕಾಶ ಮಾಡಿಕೊಟ್ಟರೆ ಕ್ಯಾನೆ ನೆಟ್ ನ್ನು ಕಂಡುಕೊಳ್ಳಲಿದ್ದಾರೆ.
ಕ್ರಿಸ್ಟಿಯಾನೊ ರೊನಾಲ್ಡೊ: ಪೋರ್ಚಗಲ್ ತಂಡದ ಪ್ರಮುಖ ಸ್ಟ್ರೈಕರ್ ಆಗಿರುವ ರೊನಾಲ್ಡೊ, ಕಾಲು ಹಾಗೂ ಗಾಳಿಯಲ್ಲಿ ಚೆಂಡನ್ನು ಹೊತ್ತೊಯ್ಯುವಲ್ಲಿ ಅಪಾಯಕಾರಿ ಆಟಗಾರರಾಗಿದ್ದಾರೆ. 33 ವರ್ಷದ ಈ ಆಟಗಾರ 50 ಪಂದ್ಯಗಳಲ್ಲಿ 50 ಗೋಲು ಗಳಿಸಿದ್ದಾರೆ.
ಇಯಾಗೊ ಆಸ್ ಪಾಸ್: ಡಿಯಾಗೊ ಕೊಸ್ಟಾ ಸ್ಪೇನ್ ತಂಡವನ್ನು ಮುನ್ನಡೆಸುವ ನೆಚ್ಚಿನ ಆಟಗಾರರಾಗಿದ್ದರೆ, ಆಸ್ ಪಾಸ್, ಆರಂಭದಲ್ಲಿ ಚೆಂಡನ್ನು ಪುಸ್ ಮಾಡುವುದರಲ್ಲಿ ನಿಸ್ಸಿಮರಾಗಿದ್ದಾರೆ. ಕಳೆದ ವಾರ ನಡೆದ ಟ್ಯೂನಿಸಿಯಾ ವಿರುದ್ಧದ ಪಂದ್ಯದಲ್ಲಿ ಉತ್ತಮ ಆಟ ಪ್ರದರ್ಶಿಸಿದ್ದರು.