ಫೀಫಾ ವಿಶ್ವಕಪ್ : ಮೆಸ್ಸಿ, ರೊನಾಲ್ಡೊ ಯಾರೂ ಇಲ್ಲ, ಸ್ವಂತ ಗೋಲುಗಳ ಟ್ರೆಂಡ್ ಸೃಷ್ಟಿ

ಫೀಫಾ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿ ಆರಂಭವಾಗಿ ಒಂದು ವಾರ ಕಳೆದಿದ್ದು, ಈಗಾಗಲೇ ಐದು ಸ್ವಂತ ಗೋಲುಗಳು ದಾಖಲಾಗಿವೆ. ಇನ್ನೂ 47 ಪಂದ್ಯಗಳು ಬಾಕಿ ಉಳಿದಿದ್ದು, 1998ರಲ್ಲಿ ಫ್ರಾನ್ಸ್ ದಾಖಲಿಸಿದ್ದ 6 ಸ್ವಂತ ಗೋಲುಗಳ ದಾಖಲೆ ಅಳಿಸುವ ಸಾಧ್ಯತೆಗಳು ಕಂಡುಬರುತ್ತಿವೆ.
ಅಜಿಜ್ ಬೌಹಾದ್ದೊಜ್
ಅಜಿಜ್ ಬೌಹಾದ್ದೊಜ್

ರಷ್ಯಾ: ಫೀಫಾ ವಿಶ್ವಕಪ್ ಪುಟ್ಬಾಲ್  ಪಂದ್ಯಾವಳಿ ಆರಂಭವಾಗಿ ಒಂದು ವಾರ ಕಳೆದಿದ್ದು, ಈಗಾಗಲೇ ಐದು ಸ್ವಂತ ಗೋಲುಗಳು  ದಾಖಲಾಗಿವೆ.  ಇನ್ನೂ 47 ಪಂದ್ಯಗಳು ಬಾಕಿ ಉಳಿದಿದ್ದು,  1998ರಲ್ಲಿ ಫ್ರಾನ್ಸ್ ದಾಖಲಿಸಿದ್ದ 6 ಸ್ವಂತ ಗೋಲುಗಳ ದಾಖಲೆ ಅಳಿಸುವ ಸಾಧ್ಯತೆಗಳು ಕಂಡುಬರುತ್ತಿವೆ.

ಜೂನ್. 15 ರಂದು  ನಡೆದ ಬಿ. ಗುಂಪಿನ ಪಂದ್ಯದಲ್ಲಿ ಮೊರಾಕೊ ವಿರುದ್ಧ ಸ್ವಂತ ಗೋಲು ಸಿಡಿಸಿದ  ಅಜಿಜ್ ಬೌಹಾದ್ದೊಜ್  1-0 ಅಂತರದಿಂದ ಇರಾನ್ ತಂಡವನ್ನು ಗೆಲ್ಲಿಸಿಕೊಟ್ಟಿದ್ದರು.
ಅಂಟೋನಿ ಗ್ರಿಜ್ ಮ್ಯಾನ್ ಪೆನಾಲ್ಟಿ ಕಾರ್ನರ್ ನಲ್ಲಿ ಪಡೆದ ಅವಕಾಶದಿಂದ ಗೋಲು ಗಳಿಸಿ ಫ್ರಾನ್ಸ್ ಗೆಲಲ್ಲು ಕಾರಣರಾದರು. 81 ನೇ ನಿಮಿಷದಲ್ಲಿ ಪೊಗ್ಬಾ ಅದ್ಬುತವಾಗಿ ಓಡುವ ಮೂಲಕ ಗೋಲು ಗಳಿಸಿ ಆಸ್ಟ್ರೇಲಿಯಾವನ್ನು ಮಣಿಸುವಲ್ಲಿ ಯಶಸ್ವಿಯಾದರು.
ಶನಿವಾರ ನಡೆದ ಡಿ ಗುಂಪಿನ ಪಂದ್ಯದಲ್ಲಿ ನೈಜಿರಿಯಾದ ಒಗೆನೇಕಾರೊ ಇಟಿಬೊ  ಕ್ರೊಯಾಟಿಯಾ ವಿರುದ್ಧ ಪ್ರಥಮ ಗೋಲು ಗಳಿಸಿದ್ದರೂ ನಿರಾಸೆ ಅನುಭವಿಸಬೇಕಾಯಿತು. ಕಾರಣ ಈ ಪಂದ್ಯದಲ್ಲಿ ಕ್ರೊಯಾಟಿಯಾ ಗೆಲುವು ಸಾಧಿಸಿತ್ತು.
 ಪೊಲ್ಯಾಂಡ್ - ಸೆನೆಗಾಲ್ ವಿರುದ್ಧದ ಪಂದ್ಯದಲ್ಲಿ ಸೆನೆಗಾಲ್ ಆಟಗಾರ ಥಿಯಾಗೊ ಸಿಯೊನೆಕ್  ಸ್ವಂತ ಗೋಲು ಗಳಿಸುವ ಮೂಲಕ ಪೊಲ್ಯಾಂಡ್ ವಿರುದ್ಧ 1-0 ಅಂತರದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿತ್ತು.
ಸೆಂಟ್ ಪಿಟರ್ಸ್ ಬರ್ಗ್ ನಲ್ಲಿ  ಮಂಗಳವಾರ ನಡೆದ ಎ ಗುಂಪಿನ  ಪಂದ್ಯದಲ್ಲಿ ಅಹ್ಮದ್ ಪತಿ ಸ್ವಂತ ಗಳಿಸಿದ ಗೋಲುನಿಂದ    ರಷ್ಯಾ ಮೊದಲು ಗೋಲು ಗಳಿಸಿತ್ತು. ಅಲ್ಲದೇ ಈ ಪಂದ್ಯದಲ್ಲಿ ಈಜಿಪ್ಟ್ ನ್ನು 3-1 ಗೋಲುಗಳ ಅಂತರದಿಂದ ರಷ್ಯಾ ಸೋಲಿಸಿತ್ತು.
ಅಹ್ಮದ್ ಪತಿ ಗೋಲು ಗಳಿಸಿದ ಪರಿಯ ಚಿತ್ರ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com