ಫಿಫಾ ವಿಶ್ವಕಪ್: ಜಪಾನ್-ಸೆನೆಗಲ್ ಪಂದ್ಯ ಡ್ರಾದಲ್ಲಿ ಅಂತ್ಯ
ಫೀಫಾ ವಿಶ್ವ ಕಪ್ 2018
ಫಿಫಾ ವಿಶ್ವಕಪ್: ಜಪಾನ್-ಸೆನೆಗಲ್ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯ
ಭಾನುವಾರ ನಡೆದ ಫಿಫಾ ವಿಶ್ವಕಪ್ ಫುಟ್ಬಾಲ್ ಎಚ್ ಗುಂಪಿನ ಪಂದ್ಯದಲ್ಲಿ ಜಪಾನ್ ಮತ್ತು ಸೆನೆಗಲ್ ಸಮಬಲದ ಹೋರಾಟದೊಡನೆ ಡ್ರಾ ಸಾಧ್ಸಿಇಕೊಂಡಿದೆ.
ಎಕಟೆರಿನ್ಬರ್ಗ್ ಅರೆನಾ (ರಷ್ಯಾ): ಭಾನುವಾರ ನಡೆದ ಫಿಫಾ ವಿಶ್ವಕಪ್ ಫುಟ್ಬಾಲ್ ಎಚ್ ಗುಂಪಿನ ಪಂದ್ಯದಲ್ಲಿ ಜಪಾನ್ ಮತ್ತು ಸೆನೆಗಲ್ ಸಮಬಲದ ಹೋರಾಟದೊಡನೆ ಡ್ರಾ ಸಾಧಿಸಿಕೊಂಡಿದೆ.
ಎರಡೂ ತಂಡಗಳು ತಲಾ 2 ಗೊಲುಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದು ಪಂದ್ಯ ಡ್ರಾ ಆಗಿದೆ.
ಸೆನೆಗಲ್ ಪರವಾಗಿ ಸಾಡಿಯೋ ಮಾನೆ (11ನೇ ನಿಮಿಷ) ಹಾಗೂ ಮೌಸಾ ವಾಗ್ (71ನೇ ನಿಮಿಷ೦ ಗೋಲು ಗಳಿಸಿದ್ದರು.
ಜಪಾನ್ ಪರವಾಗಿ ಟಕಾಶಿ ಇನೂಯಿ (34ನೇ ನಿಮಿಷ), ಹೀಸುಕೆ ಹೊಂಡಾ (78ನೇ ನಿಮಿಷ) ಗೋಲು ಗಳಿಸಿ ಜಯದ ನಿರೀಕ್ಷೆಯಲ್ಲಿದ್ದ ಎದುರಾಳಿಗೆ ನಿರಾಶೆಯುಂಟು ಮಾಡಿದ್ದರು.

