ಉದ್ದಿನ ವಡೆ

ಉದ್ದಿನ ವಡೆ ಮಾಡುವ ವಿಧಾನ....
ಉದ್ದಿನ ವಡೆ
ಉದ್ದಿನ ವಡೆ

ಬೇಕಾಗುವ ಪದಾರ್ಥಗಳು

  • ಉದ್ದಿನ ಬೇಳೆ 2 ಕಪ್
  • ಜೀರಿಗೆ- 1 ಚಮಚ
  • ಕಾಳು ಮೆಣಸು- 1 ಚಮಚ
  • ಕರಿಬೇವು, ಕೊತ್ತಂಬರಿ ಸೊಪ್ಪು
  • ಹಸಿರು ಮೆಣಸಿನಕಾಯಿ-2
  • ತೆಂಗಿನ ಕಾಯಿ- ಸ್ವಲ್ಪ
  • ಶುಂಠಿ- 1 ಇಂಚು
  • ಉಪ್ಪು.ಅಡುಗೆ ಸೋಡಾ
  • ವಡೆ ಕರಿಯಲು ಅಡುಗೆ ಎಣ್ಣೆ
ಉದ್ದಿನವಡೆ ಮಾಡುವ ವಿಧಾನ
  • ಉದ್ದಿನ ಬೇಳೆಯನ್ನು ನಾಲ್ಕರಿಂದ 5 ಗಂಟೆ ನೆನೆಸಿ ನಂತರ ನೀರನ್ನು ಬಸಿದುಕೊಳ್ಳಿ
  • ಉದ್ದಿನ ಬೇಳೆಯನ್ನು ನುಣ್ಣಗೆ ರುಬ್ಬಿಕೊಳ್ಳಿ, ರುಬ್ಬುವಾಗ ನೀರನ್ನು ಸೇರಿಸಬಾರದು.
  • ನಂತರ ಉದ್ದಿನ ಹಿಟ್ಟಿಗೆ ಹೆಚ್ಚಿದ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಶುಂಠಿ, ತೆಂಗಿನ ಕಾಯಿ ಹಾಕಿ ಕಲೆಸಿ.
  • ಅದಕ್ಕೆ ಜೀರಿಗೆ ಕಾಳು ಮೆಣಸು ಉಪ್ಪು, ಸ್ವಲ್ಪ ಅಡುಗೆ ಸೋಡಾ ಹಾಕಿ ಮಿಕ್ಸ್ ಮಾಡಿ.
  • ಹಿಟ್ಟು ತುಂಬಾ ತೆಳುವಾಗಬಾರದು. ಒಂದು ಹದಕ್ಕೆ ಕಲೆಸಿಕೊಂಡು ಬಾಳೆ ಎಲೆ ಇಲ್ಲವೇ ಕೈಯ್ಯಿನ ಮೇಲೆ ತಟ್ಟಿಕೊಂಡು ಅದರ ಮಧ್ಯೆ ಒಂದು ಸಣ್ಣ ತೂತು ಮಾಡಿ.
  • ಸ್ಟವ್ ಹಚ್ಚಿ ಬಾಣಲೆಗೆ ಎಣ್ಣೆ ಬಿಡಿ. ಎಣ್ಣೆ ಕಾದ ನಂತರ ಅದಕ್ಕೆ ತಟ್ಟದ ಉದ್ದಿನ ಹಿಟ್ಟನ್ನು ಹಾಕಿ ಕಂದು ಬಣ್ಣ ಬರುವವರೆಗೂ ಎರಡು ಕಡೆ ಸಣ್ಣ ಉರಿಯಲ್ಲಿ ಚೆನ್ನಾಗಿ ಕರಿಯಿರಿ.
  • ನಂತರ ಸಾಂಬಾರ್ ಇಲ್ಲವೇ ಚಟ್ನಿ ಜೊತೆ ಬಿಸಿ ಇರುವಾಗಲೇ ತಿನ್ನಿರಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com