ಮಂಗಳೂರು ಬನ್ಸ್ ಅಥವಾ ಬಾಳೆಹಣ್ಣಿನ ಪೂರಿ

ಮಂಗಳೂರು ಬನ್ಸ್ ಅಥವಾ ಬಾಳೆಹಣ್ಣಿನ ಪೂರಿ ಮಾಡುವ ವಿಧಾನ
ಮಂಗಳೂರು  ಬನ್ಸ್ ಅಥವಾ ಬಾಳೆಹಣ್ಣಿನ ಪೂರಿ
ಮಂಗಳೂರು ಬನ್ಸ್ ಅಥವಾ ಬಾಳೆಹಣ್ಣಿನ ಪೂರಿ

ಬೇಕಾಗುವ ಪದಾರ್ಥಗಳು

  • ಮೈದಾ ಹಿಟ್ಟು- 1ಕಪ್
  • ಬಾಳೆಹಣ್ಣು- 1
  • ಸಕ್ಕರೆ- ಅರ್ಧ ಕಪ್
  • ಮೊಸರು- 2 ಚಮಚ
  • ಜೀರಿಗೆ- ಸ್ವಲ್ಪ
  • ಅಡುಗೆ ಸೋಡಾ- ಅರ್ಧ ಚಮಚ
  • ಉಪ್ಪು- ಸ್ವಲ್ಪ
  • ಕರಿಯಲು ಅಡುಗೆ ಎಣ್ಣೆ
ಮಾಡುವ ವಿಧಾನ
  • ಮೊದಲಿಗೆ ಮಾಗಿದ ಬಾಳೆಹಣ್ಣನ್ನು ಚೆನ್ನಾಗಿ ಸ್ಮಾಶ್ ಮಾಡಿ. ಅದಕ್ಕೆ ಮೈದಾ ಹಿಟ್ಟು, ಪುಡಿ ಮಾಡಿದ ಸಕ್ಕರೆ, ಉಪ್ಪು,ಹಾಕಿ ಮಿಕ್ಸ್ ಮಾಡಿ.
  • ನಂತರ ಅದಕ್ಕೆ ಅಡುಗೆ ಸೋಡಾ, ಜೀರಿಗೆ ಹಾಕಿ ಮೊಸರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ 4ರಿಂದ 5 ಗಂಟೆ ನೆನೆಯಲು ಬಿಡಿ.
  • ಸ್ಟವ್ ಹಚ್ಚಿ ಬಾಣಲೆಗೆ ಎಣ್ಣೆ ಬಿಟ್ಟು, ಎಣ್ಣೆ ಕಾದ ಮೇಲೆ ಸಣ್ಣ ಸಣ್ಣ ಉಂಡೆ ಮಾಡಿಕೊಂಡು ಪೂರಿ ಆಕಾರಕ್ಕೆ ಒತ್ತಿಕೊಳ್ಳಿ.
  • ಆಮೇಲೆ ಕಾದ ಎಣ್ಣೆಗೆ ಹಾಕಿ ಸಣ್ಣ ಉರಿಯಲ್ಲಿ ಕಂದು ಬಣ್ಣ ಬರುವವರೆಗೂ ಬೇಯಿಸಿ. ನಂತರ ತೆಂಗಿನ ಕಾಯಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ತಿನ್ನಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com