ಸಬ್ಬಕ್ಕಿ ವಡೆ

ಸಬ್ಬಕ್ಕಿ ವಡೆ ಮಾಡುವ ವಿಧಾನ
ಸಬ್ಬಕ್ಕಿ ವಡೆ
ಸಬ್ಬಕ್ಕಿ ವಡೆ

ಸಬ್ಬಕ್ಕಿ ವಡೆ
ಬೇಕಾಗುವ ಪದಾರ್ಥಗಳು

  • ಸಬ್ಬಕ್ಕಿ 1 ಕಪ್
  • ಹಸಿ ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ,
  • 2 ಮಧ್ಯಮ ಗಾತ್ರ ಈರುಳ್ಳಿ
  • 1 ಚಮಚ ಜೀರಿಗೆ, ಹುರಿದ ಕಡಲೆ ಬೀಜ,
  • ಕೊತ್ತಂಬರಿ ಸೊಪ್ಪು, ಪುದಿನ
  • ಅಕ್ಕಿ ಹಿಟ್ಟು ಉಪ್ಪು
ಮಾಡುವ ವಿಧಾನ
  • ಮೊದಲಿಗೆ ಸಬ್ಬಕ್ಕಿಯನ್ನು ತೊಳೆದು 4 ಗಂಟೆಗಳ ಕಾಲ ನೆನೆಸಿಕೊಳ್ಳಬೇಕು.
  • ನಂತರ ನೀರನ್ನು ಬಸಿದು ಬಟ್ಟಲಿಗೆ ಹಾಕಿಕೊಳ್ಳಿ.
  • ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನ ಕಾಯಿ, ಶುಂಠಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
  • ಹುರಿದ ಕಡಲೇ ಬೀಜವನ್ನು ಪುಡಿ ಮಾಡಿ ಮಿಶ್ರಣಕ್ಕೆ ಹಾಕಿ.
  • ನಂತರ ಉಪ್ಪು, ಅಕ್ಕಿ ಹಿಟ್ಟು, ಜೀರಿಗೆ, ಪುದಿನ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲೆಸಿ.
  • ನಂತರ ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ ಬೇಕಾದ ಆಕಾರಕ್ಕೆ ತಟ್ಟಿ ಕಂದು ಬಣ್ಣ ಬರುವವರೆಗೂ ಕರೆಯಿರಿ.
  • ತೆಂಗಿನ ಕಾಯಿ ಚಟ್ನಿ ಜೊತೆ ಸಬ್ಬಕ್ಕಿ ವಡೆ ತಿಂದರೆ ತುಂಬಾ ರುಚಿಯಾಗಿರುತ್ತೆ.

-ಡಿ.ಶಿಲ್ಪ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com