ಪ್ರಾಣಿಗಳ ಮಲದ ಆಕಾರ - ಈ ಆಹಾರ

ಡಿಸ್ನಿ ವರ್ಲ್ಡ್ ತನ್ನ ಪ್ರೇಕ್ಷಕರಿಗಾಗಿ ಹೊಸ ತಿಂಡಿಗಳನ್ನು ಪರಿಚಯಿಸಿದೆ. ಅಲ್ಲಿನ 'ಪ್ರಾಣಿಗಳ ರಾಜ್ಯ' ಅಂಗಡಿಯಲ್ಲಿ ಪ್ರಾಣಿಗಳ ಸಗಣಿಯನ್ನು ಹೋಲುವ ಚಾಕೊಲೇಟ್
ಡಿಸ್ನಿ ವರ್ಲ್ಡ್ ನಲ್ಲಿ ಪ್ರಾಣಿ ಮಲದ ಚಾಕೊಲೇಟ್ ಗಳು/ಕೇಕುಗಳು
ಡಿಸ್ನಿ ವರ್ಲ್ಡ್ ನಲ್ಲಿ ಪ್ರಾಣಿ ಮಲದ ಚಾಕೊಲೇಟ್ ಗಳು/ಕೇಕುಗಳು

ನ್ಯೂಯಾರ್ಕ್: ಡಿಸ್ನಿ ವರ್ಲ್ಡ್ ತನ್ನ ಪ್ರೇಕ್ಷಕರಿಗಾಗಿ ಹೊಸ ತಿಂಡಿಗಳನ್ನು ಪರಿಚಯಿಸಿದೆ. ಅಲ್ಲಿನ 'ಪ್ರಾಣಿಗಳ ರಾಜ್ಯ' ಅಂಗಡಿಯಲ್ಲಿ ಪ್ರಾಣಿಗಳ ಸಗಣಿಯನ್ನು ಹೋಲುವ ಚಾಕೊಲೇಟ್ ಮತ್ತು ಕೇಕುಗಳನ್ನು ಜನರಿಗೆ ತಿನ್ನಲು ಮಾರಾಟಕ್ಕೆ ಇಡಲಾಗಿದೆ.

ನಾಲ್ಕು ವಿವಿಧ ರೀತಿಯ ಪ್ರಾಣಿ ಮಲದ ಆಕಾರದ ತಿನ್ನಬಹುದಾದ ವಿವಿಧ ಚಾಕೊಲೇಟು ಮತ್ತು ಕೇಕುಗಳನ್ನು ಪ್ರೇಕ್ಷಕರಿಗೆ ಉಣಬಡಿಸಲಾಗುತ್ತಿದೆ. ಇವುಗಳ ಪ್ರಾರಂಭಿಕ ಬೆಲೆ ೩.೯೯ ಡಾಲರ್ ಎಂದು ನ್ಯೂಯಾರ್ಕ್ ಡೈಲಿ ವರದಿ ಮಾಡಿದೆ.

ಹೌದು ಅವೇನು ಪ್ರಾಣಿಗಳ ನಿಜವಾದ ಮಲ ಅಥವಾ ಸಗಣಿಯಲ್ಲ ಆದರೆ ಅವುಗಳ ಆಕಾರದಲ್ಲಿರುವ ಚಾಕೊಲೆಟ್, ಬ್ರೌನಿ ಮತ್ತು ಫಡ್ಜ್ ಗಳು. ಇವುಗಳಿಗೆ ಆನೆ, ಹಿಪ್ಪೋ, ಜಿರಾಫ್ ಮತ್ತು ಕಾಟನ್ ಟಾಪ್ ಟ್ಯಾಮರಿನ್ ಎಂದು ಹೆಸರಿಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com