ಮಾಸ್ಟರ್ ಶೆಫ್ ರಿಯಾಲಿಟಿ ಶೋ: ಮೊದಲಬಾರಿಗೆ ಭಾರತೀಯ ಮೂಲದ ಸಸ್ಯಹಾರಿ ಸ್ಪರ್ಧಿ

ಅಮೆರಿಕಾದ ಸ್ಪರ್ಧಾತ್ಮಕ ಅಡುಗೆ ರಿಯಾಲಿಟಿ ಕಾರ್ಯಕ್ರಮ "ಮಾಸ್ಟರ್ ಶೆಫ್' ನ ಆರನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಭಾರತೀಯ ಮೂಲದ ಸಸ್ಯಾಹಾರಿ...
ಮಾಸ್ಟರ್ ಶೆಫ್ ರಿಯಾಲಿಟಿ ಕಾರ್ಯಕ್ರಮ
ಮಾಸ್ಟರ್ ಶೆಫ್ ರಿಯಾಲಿಟಿ ಕಾರ್ಯಕ್ರಮ

ವಾಶಿಂಗ್ಟನ್: ಅಮೆರಿಕಾದ ಸ್ಪರ್ಧಾತ್ಮಕ ಅಡುಗೆ ರಿಯಾಲಿಟಿ ಕಾರ್ಯಕ್ರಮ "ಮಾಸ್ಟರ್ ಶೆಫ್' ನ ಆರನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಭಾರತೀಯ ಮೂಲದ ಸಸ್ಯಾಹಾರಿ ಸ್ಪರ್ಧಿ ಭಾಗವಹಿಸಿದ್ದಾರೆ.

ಹರಿಶಿಣ, ಸಾಸಿವೆ, ಕೊತ್ತಂಬರಿ ಮತ್ತು ಗರಂ ಮಸಾಲಗಳನ್ನು ಬಳಸಿ ಭಾರತೀಯ ಸಾಂಪ್ರದಾಯಿಕ ಶೈಲಿಯ ಅತ್ಯುತ್ತಮ ತಿಂಡಿಗಳನ್ನು ೨೮ ವರ್ಷದ ಹೆತಾಲ್ ವಸವಾಡ ಮಾಡುತ್ತಾರೆ ಎಂದು ಅಮೆರಿಕಾ ಭಾರತೀಯ ಸಮುದಾಯದ ನಿಯತಕಾಲಿಕೆಯೊಂದು ವರದಿಮಾಡಿದೆ.

ಏಲಕ್ಕಿ ಉದುರಿಸಿದ ಸೇಬು ಹಣ್ಣಿನ ಸಿಹಿತಿಂಡಿಯೊಂದನ್ನು ಮಾಡಿ ಮಾಸ್ಟರ್ ಶೆಫ್ ಕಾರ್ಯಕ್ರಮಕ್ಕೆ ಭಾಗವಹಿಸಲು ಆಯ್ಕೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ವಸವಾಡ ಫಿಲೆಡೆಲ್ಫಿಯಾದ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುವಾಗ ಭಾರತೀಯ ಮೂಲದ ವಿದ್ಯಾರ್ಥಿಗಳು ಮನೆರುಚಿಯ ತಿಂಡಿಗಳಿಗೆ ಹಾತೊರೆಯುತ್ತಿದ್ದಾಗ ಇವರು ಇತರ ವಿದ್ಯಾರ್ಥಿಗಳಿಗೆ ಅಡುಗೆ ಮಾಡಲು ಪ್ರಾರಂಭಿಸಿದರು ಎಂದು ತಿಳಿದುಬಂದಿದೆ.

ತನ್ನದೇ ಆಗ ಕುಕ್ಕಿ(ಬಿಸ್ಕತ್ತುಗಳು) ಉದ್ದಿಮೆಯನ್ನು ಪ್ರಾರಂಭಿಸುವ ತವಕದಲ್ಲಿರುವ ವಸವಾಡ ಈ ರಿಯಾಲಿಟಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ.

ಮೇ ೨೦ ರಿಂದ ಪ್ರಾರಂಭವಾಗುವ ಈ ಕಾರ್ಯಕ್ರಮಕ್ಕೆ ಅಂತಿಮವಾಗಿ ೨೨ ಅಭ್ಯರ್ಥಿಗಳು ಭಾಗವಹಿಸಲಿದ್ದು ವಿಶ್ವದ ಪ್ರಖ್ಯಾತ ಪಾಕಪ್ರವೀಣರು ಈ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com