ಸಂಕ್ರಾಂತಿಗೆ ಸಿಹಿ ಪೊಂಗಲ್

ಎಳ್ಳು ಬೆಲ್ಲ ಮತ್ತು ಸಕ್ಕರೆ ಅಚ್ಚಿನ ಜೊತೆಗೆ ಮಕರ ಸಂಕ್ರಾಂತಿಗೆ ಮಾಡುವ ಮತ್ತೊಂದು ತಿನಿಸು ಸಿಹಿ ಪೊಂಗಲ್...
ಸಿಹಿ ಪೊಂಗಲ್
ಸಿಹಿ ಪೊಂಗಲ್
ಬೇಕಾಗುವ ಪದಾರ್ಥಗಳು:
  • ಒಂದು ಕಪ್ ಬೆಳ್ತಿಗೆ ಅಕ್ಕಿ
  • 1/2 ಕಪ್ ಹೆಸರು ಬೇಳೆ
  •  1 1/2 ಕಪ್ ಬೆಲ್ಲ ತುರಿ
  •  1/4 ಕಪ್ ತೆಂಗಿನ ತುರಿ
  •  2 ಚಮಚ ಗೇರು ಬೀಜ
  • 2 ಚಮಚ ಒಣದ್ರಾಕ್ಷಿ
  • 3ರಿಂದ 4ಚಮಚ ಏಲಕ್ಕಿ ಪುಡಿ
  • 3ರಿಂದ 4 ಚಮಚ ತುಪ್ಪ
  •  3ರಿಂದ 4 ಕಪ್ ನೀರು ಹೆಸರು ಬೇಳೆ ಬೇಯಿಸಲು ಮತ್ತು ಬೆಲ್ಲ ಕರಗಿಸಲು 
ಮಾಡುವ ವಿಧಾನ:
  • ಹೆಸರು ಬೇಳೆ ಮತ್ತು ಅಕ್ಕಿಯನ್ನು ತೊಳೆದು ಸ್ವಚ್ಛಗೊಳಿಸಿ ಒಟ್ಟಿಗೆ ಹಾಕಿ ಮೂರು ಕಪ್ ನೀರು ಹಾಕಿ ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿ. ಎರಡು ವಿಶಲ್ ಹಾಕಿಸಿದರೆ ಸಾಕು. ಕುಕ್ಕರ್ ನ ಗ್ಯಾಸ್ ಹೋದ ನಂತರ ಹೆಸರು ಬೇಳೆ ಮತ್ತು ಅನ್ನವನ್ನು ಚಮಚದಿಂದ ಹಿಸುಕಿ ಪಕ್ಕಕ್ಕಿಡಿ.
  •  ಮತ್ತೊಂದು ತವಾದಲ್ಲಿ 2-3ಚಮಚ ತುಪ್ಪ ಹಾಕಿ ಗೇರುಬೀಜ, ಒಣದ್ರಾಕ್ಷಿ ಹಾಕಿ ಹುರಿಯಿರಿ. ಅದನ್ನು ಸಣ್ಣ ಬೌಲ್ ನಲ್ಲಿ ಹಾಕಿ ಪಕ್ಕಕ್ಕಿಡಿ.
  •  ತವದಲ್ಲಿ ಅರ್ಧ ಕಪ್ ಬೆಲ್ಲ ಹಾಕಿ ಮಧ್ಯಮ ಉರಿಯಲ್ಲಿ ಸ್ಟೌನಲ್ಲಿ ಕರಗಿಸಿಕೊಳ್ಳಿ. ಅದರಲ್ಲಿ ಮರಳು, ಕಸವಿದ್ದರೆ ತೆಳುವಾದ ಶುಭ್ರ ಬಟ್ಟೆಯೊಂದಕ್ಕೆ ಹಾಕಿ ಸೋಸಿಕೊಳ್ಳಿ. ನಂತರ ಮತ್ತೊಮ್ಮೆ ಬೆಲ್ಲಪಾಕ ಹದ ಬರುವವರೆಗೆ ಕುದಿಸಿಕೊಳ್ಳಿ.
  • ನಂತರ ಬೆಲ್ಲಪಾಕಕ್ಕೆ ಬೇಯಿಸಿ ಹಿಸುಕಿಟ್ಟ ಅನ್ನ ಮತ್ತು ಹೆಸರುಬೇಳೆ ಮಿಶ್ರಣ ಹಾಕಿ. ನಂತರ ಅದನ್ನು ಸಣ್ಣ ಉರಿಯಲ್ಲಿ ಸೀದು ಹೋಗದಂತೆ ಸೌಟಿನಿಂದ ತಿರುಗಿಸುತ್ತಾ 5 ನಿಮಿಷ ಇರಿ.
  • ನಂತರ ಅದಕ್ಕೆ ತೆಂಗಿನ ತುರಿ ಸೇರಿಸಿ.ತುಪ್ಪ ಸೇರಿಸುತ್ತಿದ್ದರೆ ತುಪ್ಪ ಹಾಕಿ ಸ್ವಲ್ಪ ಹೊತ್ತು ಬಿಸಿ ಮಾಡಿ. ನಂತರ ಅದಕ್ಕೆ ದ್ರಾಕ್ಷಿ, ಗೋಡಂಬಿ, ಏಲಕ್ಕಿ ಪುಡಿ ಹಾಕಿ ಮಿಶ್ರಣ ಮಾಡಿ. ಸಿಹಿ ಪೊಂಗಲ್ ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com