ಕೈಮಾ ಉಂಡೆ ಸಾರು
ಬೇಕಾಗುವ ಸಾಮಾಗ್ರಿ
- ಮಟನ್ ಕೈಮಾ ಅರ್ಧ ಕೆಜಿ
- ಈರುಳ್ಳಿ-2
- ಟಮೊಟೋ-1
- ಬೆಳ್ಳುಳ್ಳಿ-1
- ಶುಂಠಿ ಸ್ವಲ್ಪ
- ಹುರಿಗಡಲೆ- 2 ಚಮಚ
- ತುರಿದ ತೆಂಗಿನಕಾಯಿ ಅರ್ಧ ಕಪ್
- ಹಸಿ ಮೆಣಸಿನಕಾಯಿ-4
- ಚಕ್ಕೆ-2
- ಲವಂಗ-4
- ಕಾಳು ಮೆಣಸು-10
- ಧನಿಯಾ ಪುಡಿ- ಅರ್ಧ ಚಮಚ
- ಅರಿಶಿಣ-1 ಚಮಚ
- ಅಡುಗೆ ಎಣ್ಣೆ ಸ್ವಲ್ಪ
- ಮೊಟ್ಟೆ-1
ಮಟನ್ ಕೈಮಾ ಉಂಡೆ ಮಾಡುವ ವಿಧಾನ
ಮೇಲೆ ತಿಳಿಸಿರುವ ಎಲ್ಲಾ ಮಸಾಲೆ ಪದಾರ್ಥಗಳನ್ನು ಚೆನ್ನಾಗಿ ರುಬ್ಬಿಕೊಳ್ಳಿ. ಈ ಮಸಾಲೆಯಲ್ಲಿ ಸ್ವಲ್ಪ ತೆಗೆದಿಟ್ಟುಕೊಳ್ಳಿ,
ನಂತರ ಜಾರ್ ಗೆ ಮಟನ್ ಕೈಮಾ ಹಾಕಿ ರುಬ್ಬಿಕೊಳ್ಳಿ, ಮಸಾಲೆ ಮತ್ತು ಕೈಮಾ ಎರಡನ್ನು ಒಟ್ಟಿಗೆ ಹಾಕಿ ರುಬ್ಬಿ, ನಂತರ ಅದಕ್ಕೆ ಮೊಟ್ಟೆ ಒಡೆದು ಕಲೆಸಿ, ಅದಾದ ನಂತರ ಬೇಕಾದ ಗಾತ್ರಕ್ಕೆ ಉಂಡೆ ಮಾಡಿಕೊಳ್ಳಿ,
ಇದಾದ ನಂತರ ಬೇರೊಂದು ಬಾಣಲೆಗೆ ಎಣ್ಣೆ ಹಾಕಿ ಈರುಳ್ಳಿ ಮತ್ತು ಟಮೊಟೋ ಹಾಕಿ ಬಾಡಿಸಿಕೊಳ್ಳಿ, ಅದಕ್ಕೆ ರುಬ್ಬಿದ ಮಿಶ್ರಣ ಸೇರಿಸಿ ಹಸಿ ವಾಸನೆ ಹೋಗುವವರೆಗೂ ಹುರಿಯಿರಿ, ಚೆನ್ನಾಗಿ ಕುದಿ ಬಂದ ನಂತರ, ಅದಕ್ಕೆ ಕೈಮಾ ಉಂಡೆಗಳನ್ನು ಹಾಕಿ ಬೇಯಿಸಿ, ಸುಮಾರು ಅರ್ಧ ಗಂಟೆ ಬೇಯಿಸಿ, ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ. ಚಪಾತಿ ಮತ್ತು ಅನ್ನದ ಜೊತೆ ಬಡಿಸಿ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ