

ನಮ್ಮ ಸ್ನೇಹಕ್ಕೆ ಈಗ ೭ ರ ಹರೆಯ. ಕಾಣದ ಶಾರ್ಜಾದಲ್ಲಿ ನಾನು ಇದ್ದಾಗ ನನ್ನ ಹಾಗೇ ಮದುವೆ ಮಾಡಿಕೊ೦ಡು ಬ೦ದ್ದದ್ದು ಪ್ರೀತಿ. ನಿಜವಾಗ್ಲೂ ಮರಳುಗಾಡಿನಲ್ಲಿ ಸ್ನೇಹ ಅರಳಿದ್ದು. ಪ್ರೀತಿ ಹೆಸರಿಗೆ ತಕ್ಕ ಹಾಗೆ ಪ್ರೀತಿಯ ಅಪ್ಪಟ ಮಲೆನಾಡ ಹುಡುಗಿ, ನಮ್ಮ ಜೋಗ ದ ಹುಡುಗಿ ತು೦ಬಾ ಇಷ್ಟ ಆಗಿದ್ದು ಅವಳ ಮುಗ್ದ ಸ್ವಭಾವದಿಂದ. ನಾವು ಆಗ ಶಾರ್ಜಾದಲ್ಲಿ ಕಳೆದ ದಿನಗಳು ಜೀವದ ಸ೦ತೋಷ ದ ದಿನಗಳಾಗಿದ್ದವು. ಕೇವಲ ಖುಷಿಯಲ್ಲಿ ಮಾತ್ರ ಅಲ್ಲ ನಾನು ಮೊದಲ ಸಾರಿ ಬಸುರಿ ಆದಾಗ ನನ್ನ ಈ ದೂರದ ದೇಶ ದಲ್ಲಿ ನನ್ನ ಜೊತೆ ಯಾವಗಲೂ ಇದ್ದಳು. ಆಗ ಅಮ್ಮನ ನೆನೆಪು ಆಗಿ ಕಣ್ಣೀರು ಹಾಕಿದಾಗ ಸಮಾದಾನ ಮಾಡಿದ್ದು ಇದೇ ಪ್ರೀತಿ. ನನ್ನ ಜೊತೆ ಪ್ರತಿ ತಿ೦ಗಳು ಚೆಕಪ್ ಗೆ ಕರೆದು ಕೊ೦ಡು ಹೋಗಿದ್ದು ಮರೆಯಲಾರೆ..ನ೦ತರ ಅವಳು ದೂರದ ಮು೦ಬೈಗೆ ಹೋಗಿ ಬಿಟ್ಟಳು.ನಾನು ಅಲ್ಲೆ ಇದ್ದೆ. ನಾವು ಮತ್ತೆ ಸಂಧಿಸಿದ್ದು ಮಸ್ಕಟ್ ನಲ್ಲಿ,. ಆಗ ಇಬ್ಬರಿಗೂ ಮಕ್ಕಳಾಗಿತ್ತು. ಪ್ರತಿ ವೀಕ್ ಎ೦ಡ್ ನಮ್ಮ ಭೇಟಿ ಇದ್ದೇ ಇರುತ್ತಿತ್ತು .ಈಗ ಅವಳು ರಜಕ್ಕೆ ಅಲ್ಲಿ ಹೋಗಿದ್ದಾಳೆ. ನಾನು ದೇವರ ಬಳಿ ಕೇಳೊದು ಒಂದೇ. ಬೇಗ ಪ್ರೀತಿ ದುಬೈ ಗೆ ಬರುವ ಹಾಗೆ ಅಗಲಿ. ಈಗ ಫೇಸ್ಬುಕ್ , ವಾಟ್ಸಪ್ ಇ೦ದ ನಮ್ಮ ನಿರ೦ತರ ಸ೦ಪರ್ಕ ಸಾಧ್ಯವಾಗಿದೆ.
ಯಾವಗಲೂ ಈ ಹಾಡು ನನಗೆ ಅವಳ ನೆನಪು ತರಿಸುತ್ತದೆ. ಎಂದೆಂದಿಗೂ ನಮ್ಮ ಸ್ನೇಹ ಹೀಗೆ ಇರಲಿ..
ಮಲೆನಾಡಿನ ಮಿ೦ಚಿನ ಬಳ್ಳಿ
ಸಹ್ಯಾದ್ರಿ ಯ ಸ೦ಗಮದಲ್ಲಿ
ಹೊಸತನ ತೋರಿದಳು ಜೋಗದ ಸಿರಿಯವಳು...
ಮಿಸ್ ಯು ಪ್ರೀತಿ,
-ಸ್ಮಿತಾ ಮಿಥುನ್
Advertisement