
ಸ್ನೇಹ ಒಂದು ವಿಭಿನ್ನವಾದ ಸಂಬಂಧ. ಯಾರ ಜೊತೆ ಯಾವಾಗ ಸ್ನೇಹಿತರಾಗುತ್ತಿವಿ ಅಂತ ಊಹಿಸೋದು ಬಹಳ ಕಷ್ಟ. ಸ್ನೇಹ ಶುರವಾಗುವುದೇ ಆ ಒಂದು ಅಪರಿಚಿತ ನಗೆಯಲ್ಲಿ. ಒಮ್ಮೊಮ್ಮೆ ನನಗೆ ಆಶ್ಚರ್ಯ ಆಗುತ್ತೆ, ಎಲ್ಲೊ ಹುಟ್ಟಿ ಎಲ್ಲೊ ಬೆಳೆದ ನಾವೆಲ್ಲರೂ ಹೇಗೆ ಅಷ್ಟೊಂದು ಹತ್ತಿರವಾಗುತ್ತೀವಿ ಅಂತ. ಸ್ನೇಹಕ್ಕೆ ಭಾಷೆಯ ಭೇದವಿಲ್ಲ, ಜಾತಿಯ ಅಂತರವಿಲ್ಲ . ಒಂದೇ ಒಂದು ನಿರ್ಮಲ ನಗೆ ಮತ್ತು ನಿಷ್ಕಲ್ಮಶ ಮನಸ್ಸು ಸಾಕು. ಪ್ರೀತಿ ವಾತ್ಸಲ್ಯ ಅಕ್ಕರೆಗಳನ್ನೊಳಗೊಂಡ ಸುಂದರ ಅನುಬಂಧವೆ ಸ್ನೇಹ ಎಂಬುದು ನನ್ನ ಅನಿಸಿಕೆ. ತಾಯಿಯ ವಾತ್ಸಲ್ಯದಷ್ಟು ಸ್ವಚ್ಹ, ತಂದೆಯ ಪ್ರೀತಿಯಷ್ಟು ಬಲಿಷ್ಠ ,
ಹಾಗು ಅಣ್ಣನ ಬಾಂಧವ್ಯದಷ್ಟು ಸತ್ಯ ಎಂದು ನಂಬಿದ್ದೇನೆ. ವಯಸ್ಸು, ಅಂತಸ್ತು, ಜಾತಿ ಗಳಿಗೆ ಸಿಲುಕದ್ದು ಹಾಗು ಎಲ್ಲದಕ್ಕೂ ಮಿಗಿಲಾದ್ದು ಸ್ನೇಹ. ತಂದೆ , ತಾಯಿ, ಅಣ್ಣ,
ಬಂಧುವರ್ಗದವರು, ಸಹಪಾಠಿಗಳು ಎಲ್ಲರು ಸಹ ನಮಗೆ ಸ್ನೇಹಿತರಾಗಬಹುದು.
ಪ್ರತಿದಿನ ಮಾತನಾಡದಿದ್ದರೂ ಭೇಟಿಯಾಗದಿದ್ದರೂ ನಮ್ಮ ಮನಸಿನ ಮಾತುಗಳನ್ನು ಹಂಚಿಕೊಳ್ಳಲು whatsapp ನ ಒಂದು ಗ್ರೂಪ್ ಸಾಕಾಗಿದೆ. ನೋವಿರಲಿ ನಲಿವಿರಲಿ, ಒಂದು
ಚೂರು ಖಾರವಿರಲಿ ಸಿಹಿಯಿರಲಿ ಎಲ್ಲವು ಮಾತನಾಡಿ, ಪ್ರೀತಿ ಹಂಚಿಕೊಂಡು ದೈನಂದಿನ ಸ್ಟ್ರೆಸ್ ಅನ್ನು ಕಡಿಮೆ ಮಾಡಿಕೊಳ್ಳುತ್ತಿವಿ. ವೀಕೆಂಡ್ ಗಳಲ್ಲಿ ಸಿನಿಮಾ ಅಥವಾ ಲಂಚ್ ಒಟ್ಟಿಗೆ ಮಾಡಿ ಎರಡು ಮೂರು ತಾಸು ಮಾತನಾಡಿ ನಗು ನಗುತ ಮನೆಗೆ ಹಿಂದಿರುಗುತ್ತೇವೆ. ನಮ್ಮೆಲ್ಲರ ವಿಚಾರದಾರೆಗಳು ಬೇರೆ ಬೇರೆ ಆಗಿದ್ದರು ನಾವು ಜೊತೆಯಲ್ಲಿ ಇರೋದಕ್ಕೆ ಕಾರಣ ನಾವು ನಮ್ಮವರನ್ನು ಗೌರವಿಸುವ ರೀತಿ. ಗೆಳತನದಲ್ಲಿ
ಇಷ್ಟ ಆಗುವ ಪರಿ ಅಂದ್ರೆ ಸ್ನೇಹಿತರ ತುಂಟಾಟ ಮತ್ತೆ ಒಬ್ಬರನೊಬ್ಬರು ಅರ್ಥ ಮಾಡಿಕೊಳ್ಳುವ ಮನಸು. ಯಾರಾದರು ಸ್ನೇಹಿತೆ ನೋವು ಅಲ್ಲಿ ಇದ್ದಾಗ ,ಅವರು ಮಾತನಾಡುವ ಶೈಲಿ ಅಲ್ಲಿ ಅಥವಾ ಮೆಸೇಜ್ ಗೆ ಪ್ರತಿಕ್ರಿಯಿಸುವ ರೀತಿಯಲ್ಲಿ ಅವರನ್ನ ಅರ್ಥ ಮಾಡಿಕೊಳ್ಳುವ ಶಕ್ತಿ ನಮ್ಮ ಸ್ನೇಹ ದಲ್ಲಿದೆ .ಸ್ನೇಹಿತರ ಜೊತೆ ನಮ್ಮ ನೋವು- ನಲಿವು ಹಂಚಿಕೊಂಡಾಗ ಸಿಗುವ ಸಮಾಧಾನ ನಮ್ಮಲ್ಲಿ ಉತ್ಸಾಹ ಕೊಡುವಂತೆ ಮಾಡತ್ತೆ.
ನನ್ನ ಜೀವನದ ಅತ್ಯಂತ ಕಷ್ಟಕರ ದಿನಗಳಲ್ಲಿ ನನ್ನ ಕುಟುಂಬ ಹಾಗು ನನ್ನಸ್ನೇಹಿತರು ಸದಾ ನನ್ನೊಂದಿಗೆ ಎಲ್ಲ ಸುಖ ದುಃಖಗಳನ್ನು ಹಂಚಿಕೊಳ್ಳುತ್ತ ನನ್ನ ನಗುವನ್ನು ಕಾಣ ಬಯಸುತ್ತ ನನ್ನ ಜೀವನಕ್ಕೆ ಸ್ಪೂರ್ತಿಯನ್ನು ಮರುಕಳಿಸಿ ತಂದಿದ್ದಾರೆ . ಇಂಥ ಪ್ರೀತಿ ನನಗೆ ದೊರೆತದ್ದು ನನ್ನ ಪುಣ್ಯವೇ ಸರಿ. ಜುಲೈ ೧೦ ೨೦೧೫ ರಂದು ನನ್ನ ಹುಟ್ಟು ಹಬ್ಬವಿದ್ದು , ಅದನ್ನು ಬಹಳ
ಸಂತೋಷದಿಂದ ನಡೆಸಿಕೊಟ್ಟ ನನ್ನ ಆತ್ಮೀಯ ಸ್ನೇಹಿತರು ಹಾಗು ಕುಟುಂಬದವರುಎಲ್ಲರು ನನಗೆ ಅತ್ಯಂತ ಪ್ರೀತಿ ಪಾತ್ರರು .
ನನ್ನ ಬಂಧುವರ್ಗದವರು ಸತ್ಯ ಸೂರ್ಯ , ಸೀಮಾ , ಆದಿತ್ಯ , ವೈಷ್ಣವಿ , ಪವನ್ ಶಾಸ್ತ್ರಿ ರಾತ್ರಿ ೧೨ ಘಂಟೆಗೆ surprise ಕೊಡಲು ಮನೆಗೆ ಬಂದು ಕೇಕ್ ಕಟ್ ಮಾಡಿಸಿದರು. ಇನ್ನು ನನ್ನ ಸ್ನೇಹಿತೆಯರು ಕವಿತಾ, ಗೀತಾ, ಶ್ವೇತಾ, ನಂದಿತಾ , ನಮ್ಮ ಮನೆಯಲ್ಲಿ ಅಂದು ಉಳಿದು ಕೇಕ್ ಕಟ್ ಮಾಡಿಸಿ, ನನ್ನ ವಿವಿಧ pose ಗಳನ್ನು photoframe ಮಾಡಿ ಉಡುಗೊರೆಯಾಗಿ ಕೊಟ್ಟರು. ಅಂದು ಮಧ್ಯ ರಾತ್ರಿ ೨.೩೦ ರ ವರೆಗೆ ನಾವು Dubsmash ಅಲ್ಲಿ ಕೆಲವು ಕನ್ನಡ ಡೈಲಾಗ್ಸ್ ಹಾಗು ಹಾಡುಗಳಿಗೆ ಕುಣಿದು ಮಲಗಿದ್ದು ಮರೆಯಲಾರದಷ್ಟು ಮಧುರ ನೆನಪುಗಳನ್ನು ತಂದುಕೊಟ್ಟಿತು, ಅದು ನನ್ನ ಜೀವನದ ಅತ್ಯಂತ ಸಂತೋಷಕಾರಿ ದಿನವಾಗಿ ಉಳಿದಿರುತ್ತದೆ. ಇವರೆಲ್ಲರಿಗೂ ದೇವರು ಸದಾ ಅರೋಗ್ಯ , ಆಯಸ್ಸು , ನೆಮ್ಮದಿ ,ಖುಷಿಯನ್ನು ಕರುಣಿಸಲೆಂದು ನನ್ನ ಹೃತ್ಪೂರ್ವಕ ಹಾರೈಕೆ .
-ಸಿಂಧು
ನೊ. ೨೯, ೧ನೆ ಹಂತ,ಮೂರನೇ ಮುಖ್ಯ ರಸ್ತೆ,
ಆತ್ಮೀಯ ಗೆಳೆಯರ ಬಳಗ,ಮಹಾಲಕ್ಷ್ಮಿಪುರಂ
ಬೆಂಗಳೂರು 560086
Advertisement