ಸ್ನೇಹಕ್ಕೂ ಬೇಕು ಅಪ್ ಡೇಟ್

ಈ ಭೂಮಿ ವರ್ಷದ ಮುನ್ನೂರೈವತ್ತು ದಿವಸವೂ ಸುತ್ತುತ್ತಲೇ ಇರುತ್ತದೆ. ಅದೇ ಅದರ ಕೆಲಸವೆ ಅದರಲ್ಲೇ ಅದು ಸುತ್ತೋದರಿಂದ ವರ್ಷಗಳಾಗೋದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಈ ಭೂಮಿ ವರ್ಷದ ಮುನ್ನೂರೈವತ್ತು ದಿವಸವೂ ಸುತ್ತುತ್ತಲೇ ಇರುತ್ತದೆ.  ಅದೇ ಅದರ ಕೆಲಸವೆ ಅದರಲ್ಲೇ ಅದು ಸುತ್ತೋದರಿಂದ ವರ್ಷಗಳಾಗೋದು ಹಾಗೆಯೇ ಪ್ರತಿ ದಿನವೂ ಪ್ರತಿ ಚಂದ್ರ ಒಬ್ಬರಲ್ಲ ಒಬ್ಬರೂ ಹುಟ್ಟುತ್ತಾರೆ, ಸಾಯುತ್ತಾರೆ. ಹುಟ್ಟಿದ ಪ್ರತೀ ಮಗುವು ಬೆಳೆದು ಶಾಲೆ, ಕಾಲೇಜು ಅಂತೆಲ್ಲಾ ಓದಿ ಪಾಸು ಮಾಡಿ ಉದ್ಯೋಗ ಮಾಡಿಕೊಂಡು ದೊಡ್ಡವರು ಹೇಳಿದಂತೆಯೇ ತನ್ನಿಚ್ಛೆಯಂತೆಯೇ ಒಂದು ಮದುವೆಯಾಗಿ ಮತ್ತೆ ಮಗುವಿನ ಅಪ್ಪನಾಗೊ, ಅಮ್ಮನಾಗೊ ಬಡ್ತಿ ಪಡೆದು ವಯಸ್ಸಾಗಿ ನಿವೃತ್ತಿಯಾಗಿ ಒಂದು ದಿನ ಸಾಯುತ್ತಾರೆ, ಅದೇ ಇಷ್ಟೇನೇ ಬದುಕು ಅನ್ನಿಸುತ್ತೆ ಅಲ್ವಾ.

ಹುಟ್ಟಿನಿಂದ ಸಾಯುವವರೆಗೂ ನಮ್ಮಲ್ಲೊಂದು ಹೊಸತನವಿರುತ್ತದೆ.  ಅದೊಂತರ ಹಳೇ ಹಾಡಿನಂತೆ ಕಳೆದಷ್ಟು ಹೊಸತಾದ ಭಾವ ಮೂಡಿಸುತ್ತದೆ.  ಇಂತಹ ಭಾವನೆ ಯಾವುದು “ಸ್ನೇಹ” ಯಸ್ ನಾವು ಹುಟ್ಟಿದಾಗಿನಿಂದ ಬೆಳೆದು ದೊಡ್ಡವರಾಗಿ ಸಾಯೋವರೆಗು ಸ್ನೇಹ ಬೇಕೇ ಬೇಕಾಗುತ್ತೆ.  ಪ್ರತೀ ಹಂತದಲ್ಲೂ ಅದು ಹೊಸ ಅನುಭವ ನೀಡುತ್ತದೆ.  ಶಾಲೆಯಿಂದ ಜೊತೆಗೂಡಿದ ಸ್ನೇಹಿತ / ಸ್ನೇಹಿತೆಯರು ಮುಂದೊಂದು ದಿನ ಪ್ರೀತಿಸಿ ಮದುವೆಯಾಗುತ್ತಾರೆ ಇಲ್ಲವೆ ಜೊತೆಯಾಗಿ ವ್ಯವಹಾರ ನಡೆಸುತ್ತಾರೆ.  ಅಥವಾ ಶಾಲೆ ಮುಗಿದ ಮೇಲೆ ಮರೆತುಬಿಡುತ್ತಾರೆ ಒಂದೇ ಸ್ನೇಹ ಅದೆಷ್ಟು ಸಾಧ್ಯತೆಗಳನ್ನು ನೀಡೆವೆ ನೋಡಿ.

ನಿಮ್ಮ ನೆನಪಿನೂರಿಗೆ ಒಮ್ಮೆ ಹೋಗಿ ಶಾಲೆಯ ಗೆಳೆಯ/ಗೆಳತಿಯರನ್ನೊಮ್ಮೆ ನೆನೆಯಿರಿ. ಅದೆಷ್ಟು ಸೆಳೆತ ಅಲ್ಲವೆ ಹುಡುಗ/ಹುಡುಗಿ ಎಂಬ ಬೇಧವಿಲ್ಲದೆ ಮುಗ್ಧ ಮನಸ್ಸುಗಳಿಂದ ಸ್ನೇಹಿತ/ಸ್ನೇಹಿತೆಯರಾಗಿರುತ್ತೇವೆ.  ಯಾವುದೇ ತಕರಾರಿಲ್ಲದೆ ಜಾತಿ, ಧರ್ಮಗಳ ಅರಿವಿಲ್ಲದೆ ಸ್ನೇಹಿತ/ ಸ್ನೇಹಿತೆಯರಾಗಿರುತ್ತೇವೆ. ಅದೇ ಸ್ನೇಹವನ್ನು ದೊಡ್ಡವರಾದಂತೆ ಉಳಿಸಿಕೊಳ್ಳಲಾಗುವುದಿಲ್ಲ ಏಕೆ? ಜವಾಬ್ದಾರಿಗಳು ಕಾಮನೆಗಳಿಂದ ನಮ್ಮ ಸ್ನೇಹದಲ್ಲಿ ಒಂದು ಅಂತರ ಮೂಡುತ್ತದೆ.  ಸ್ನೇಹಿತರಾಗಿದ್ದ ಹುಡುಗ - ಹುಡುಗಿ ಪ್ರೀತಿಸಬಹುದು ಅಣ್ಣ- ತಂಗಿಯಂತಿರಬಹುದು ಅಥವಾ ಮರೆತುಹೋಗಬಹುದು ಆದರೆ ಸ್ನೇಹಿತರಾಗಿರಲು ಮಾತ್ರ ಸಾಧ್ಯವಿಲ್ಲವೆ ? ಖಂಡಿತಾ ಸಾಧ್ಯ

ದೊಡ್ಡವರಂತೆ ಸ್ನೇಹಿತ - ಸ್ನೇಹಿತೆಯರಾಗಿ ಉಳಿಯುವುದು ಸಾಧ್ಯ ನಮ್ಮ ಸ್ನೇಹವನ್ನು ಆಗಾಗ್ಗೆ ಅಪ್‍ಡೇಟ್ ಮಾಡಿಕೊಳ್ಳಬೇಕಷ್ಟೆ.  ನಮ್ಮ ಸುಂದರ ಸ್ಮಾರ್ಟ್ ಫೋನ್ ಗಾಗಿ ಡೌನ್‍ಲೋಡ್ ಮಾಡಿಕೊಂಡ  ಆ ಆ್ಯಪ್  ಳನ್ನು ಆಗಾಗ ಅಪ್‍ಡೇಟ್ ಮಾಡುವಂತೆ, ಶಾಲೆಯಿಂದ. ಬಾಲ್ಯದಿಂದ ಸ್ನೇಹಿತರಾದವರು ಕಾಲೇಜಿಗೆ ಹೋಗುವಾಗ ಯೌವ್ವನಕ್ಕೆ ಬಂದಾಗ ಅದೇ ಸ್ನೇಹವನ್ನು ಹೊಸತಾಗಿಸಬೇಕು ಹಳೆಯ ಸ್ನೇಹದ ನೆನಪುಗಳಂತೆ ಹೊಸ ಸ್ನೇಹಿತರಾಗಬೇಕು. ಪರಸ್ಪರ ಸುಖ ದು:ಖಗಳನ್ನು ಹಂಚಿಕೊಳ್ಳುವಷ್ಟು ಕಷ್ಟ-ಸುಖಗಳಿಗೆ ಸ್ಪಂದಿಸುವಷ್ಟು ಹತ್ತಿರ ಸಾಗಬೇಕು. ಮುಖ್ಯವಾಗಿ ಯಾವುದೇ ಲಾಭ ನಷ್ಟಗಳನ್ನು ಸ್ನೇಹದಲ್ಲೇ ತರಬಾರದು, ಆಗ ಮಾತ್ರ ನಿಮ್ಮ ಸ್ನೇಹ ಉಳಿಯುವಂತಾಗುತ್ತದೆ ಯಾವುದೇ ಒಂದು ಕಹಿ ಘಟನೆ, ಮನಸ್ತಾಪ, ನಿಮ್ಮ ಸ್ನೇಹದಲ್ಲಿಬಂತೆಂದರೆ ಅದರಿಂದ ಸ್ನೇಹ ಕೊನೆಗೊಳ್ಳಬೇಕೆಂದೇನೂ ಇಲ್ಲ.  ಈ ಮನಸ್ತಾಪ ಕಹಿ ಘಟನೆ ನಿಮ್ಮ ಸ್ನೇಹವಷ್ಟು ಹಳೆಯದಲ್ಲ ಅಥವಾ ಹೊಸತೂ ಅಲ್ಲ ಎಲ್ಲವೂ ಕ್ಷಣಿಕ ದೀರ್ಘಕಾಲದ ಸ್ನೇಹ ಮದುವೆಗಳಿಗೆ ಮುಗಿಯಬೇಕೆಂದೇನಿಲ್ಲ ನಂತರವೂ ಹುಡುಗ ಹುಡುಗಿ  ಹಿತ/ಸ್ನೇಹಿತೆಯರಾಗಿರಬಹುದು ನಿಮ್ಮ ಜವಾಬ್ದಾರಿಗಳ ಮಿತಿಗಳನ್ನು ಅರಿತಿರಬೇಕಷ್ಟೆ.

ಸ್ನೇಹ ಸಂಬಂಧಗಳು ಬೆರಳಿನ ಉಗುರಿನಂತಿರಬೇಕು.  ಬೆರಳಿನ ಒಂದು ಭಾಗವೇ ಆದರೂ ಬೆರಳಿನಿಂದಾಚೆ ಬರುತ್ತಿದ್ದಂತೆ ಕತ್ತರಿಸಿ ಎಸೆಯಬೇಕು ಕೊಳೆ ಸೇರಿಕೊಳ್ಳದ ಹಾಗೆ ನೋಡಿಕೊಳ್ಳಬೇಕು.

ನಿಮ್ಮ ಫೋನಿನ ಕಾಂಟ್ಯಾಕ್ ಲಿಸ್ಟ್ ಅನ್ನು ಒಮ್ಮೆ ನೋಡಿಕೊಳ್ಳಿ ಅದೆಷ್ಟು ಜನ ಸ್ನೇಹಿತ/ಸ್ನೇಹಿತೆಯರಿದ್ದಾರೆ ಅಥವಾ ಅವರಿಗೆಲ್ಲಾ ಒಂದು ಸ್ನೇಹದ ಎಸ್‍ಎಂಎಸ್ ಕಳುಹಿಸಿ ನಿಮ್ಮ ನೆನಪುಗಳೊಂದಿಗೆ ನಿಮ್ಮ ಸ್ನೇಹವನ್ನು ಅಪ್‍ಡೇಟ್ ಮಾಡಿಕೊಳ್ಳಿ ನಾನು ಇಲ್ಲಿ ಬರೆಯಲು ಕಾರಣ ಕೂಡ ನನ್ನ ಸ್ನೇಹಿತೆ.
ಹೌದು ಅವಳಿಗೂ ನಿಮ್ಮದೊಂದು ಥ್ಯಾಂಕ್ಸ್ ಇರಲಿ.

-ಮಂಜುನಾಥ ಹೆಚ್ ಎನ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com