ಸ್ನೇಹ ಎಂಬ ಮಾಯೆ

ಪ್ರೀತಿ ಮಾಯೆ ಹುಷಾರು ಎಂಬ ಮಾತಿದೆ. ಅದೇ ರೀತಿ ಸ್ನೇಹವೂ ಒಂದು ರೀತಿಯಲ್ಲಿ ಮಾಯೆಯೇ...
ಸ್ನೇಹಲೋಕ
ಸ್ನೇಹಲೋಕ
Updated on

ಪ್ರೀತಿ ಮಾಯೆ ಹುಷಾರು ಎಂಬ ಮಾತಿದೆ. ಅದೇ ರೀತಿ ಸ್ನೇಹವೂ ಒಂದು ರೀತಿಯಲ್ಲಿ ಮಾಯೆಯೇ...

ಮೊದಲ ನೋಟದಲ್ಲಿ ಪ್ರೀತಿ ಹುಟ್ಟಬಹುದು. ಆದರೆ ಮೊದಲ ನೋಟದಲ್ಲೇ ಸ್ನೇಹ ಹುಟ್ಟುವುದಿಲ್ಲ. ಎರಡು ಸಮಾನ ಜೀವಗಳು ಪರಸ್ಪರ ಕಷ್ಟ ಸುಖಗಳಿಗೆ ಸ್ಪಂಧಿಸಿದಾಗ ಮಾತ್ರ ಸ್ನೇಹದ ಹುಟ್ಟು. ಒಂದು ಬಾರಿ ಹುಟ್ಟಿದ ಸ್ನೇಹವನ್ನು ಉಳಿಸಿಕೊಳ್ಳುವುದು ಅಷ್ಟು ಸುಲಭವಲ್ಲ ಅದಕ್ಕಾಗಿ ಪರಸ್ಪರ ತ್ಯಾಗ ಬಲಿದಾನಕ್ಕೂ ಸಿದ್ಧರಾಗಿರಬೇಕು. ಪ್ರೀತಿ ಪ್ರೀತಿಯನ್ನು ಕೊಲ್ಲಬಹುದು? ಆದರೆ ಸ್ನೇಹದಲ್ಲಿ ಸ್ನೇಹಿತರು ದೂರವಾಗಬಹುದು ಆದರೆ ಎಂದಿಗೂ ಸ್ನೇಹ ಅಳಿಯಲ್ಲ. ಸ್ನೇಹ ನಿರಂತರ...

ಹುಡುಗ ಹುಡುಗಿಯ ಮಧ್ಯೆ ಪ್ರೀತಿಯ ಮಾಯೆ ಕವಿದರೆ. ಹುಡುಗರ ಅಥವಾ ಹುಡುಗಿಯರ ಮಧ್ಯೆ ಸ್ನೇಹ ಎಂಬ ಮಾಯೆ ಆವರಿಸುತ್ತದೆ. ಇದು ಪರಸ್ಪರ ತಮ್ಮೊಳಗಿನ ನೋವು, ನಲಿವು, ಸುಖ, ದುಃಖ ವಿನಿಯಮಕ್ಕೆ ಅಡ್ಡಿಯಾಗದ ನಿರಂತರ ಅರಿಯುವ ಜಲಪಾತವಾಗುತ್ತದೆ. ತಂದೆ ತಾಯಿ, ಮಡದಿ, ಮಕ್ಕಳು ಇದೆಲ್ಲಾ ಅದಾಗೆ ತಾನೇ ಕೂಡಿಬರುವಂತದ್ದು, ಆದರೆ ಗೆಳೆಯ, ಗೆಳತಿಯರನ್ನು ನಮಗೆ ನಾವೇ ಹಾರಿಸಿಕೊಳ್ಳುವಂತದ್ದೂ, ಗಳಿಸಿಕೊಳ್ಳುವಂತದ್ದೂ...

ಸ್ನೇಹ ಸಾಗರವೆಂಬುದು ಅತ್ಯಂತ ಆಳವಾದದ್ದು. ಮೊಗೆದಷ್ಟೂ ನಮಗೆ ಅಲ್ಲಿಂದ ಆನಂದ, ತೃಪ್ತಿ, ನೆಮ್ಮದಿ, ಸಂತೋಷ ಎಂಬ ಅನೇಕ ಮುತ್ತು ರತ್ನಗಳು ದೊರಕುವುದರಲ್ಲಿ ಸಂದೇಹವಿಲ್ಲ. ಸ್ನೇಹವು ಒಂದು ಅಮೃತ ಬಿಂದು. ಒಂದು ಮಧುರ ಅನುಭವ. ಆದರೆ ಬೇಕು ಎಂದಾಗಲೆಲ್ಲ ನಮಗೆ ಸುಲಭವಾಗಿ ದಕ್ಕುವ ಪದಾರ್ಥವಲ್ಲ. ಇದು ಅನೇಕ ವರುಷಗಳ ಫಲ. ಸ್ನೇಹದ ವಿಷಯದಲ್ಲಿ ಒಬ್ಬೊಬ್ಬರದ್ದು ಒಂದೊದು ರೀತಿಯ ಅನುಭವ.

ಸ್ನೇಹ ಹುಟ್ಟುವುದಕ್ಕೆ ಯಾವುದೇ ಕೋರ್ಸ್ ಇಲ್ಲ, ಬಡವ, ಶ್ರೀಮಂತ, ಮೇಲೂ-ಕೀಳು, ಸೌಂದರ್ಯ-ಕುರೂಪಿ ಇವುಗಳನ್ನು ನೋಡಿ ಹುಟ್ಟುವುದಿಲ್ಲ. ಪ್ರಕೃತಿಯ ಮಡಿಲಲ್ಲಿ ಬೆಳೆದ ಮರವು ಬಿಸಿಲಿನಲಿ ದಣಿದು ಬಂದಿರುವ ಜೀವಿಗೆ ಯಾವುದೇ ಬೇಧವಿಲ್ಲದೇ ಗಾಳಿ, ಹಣ್ಣು, ತಂಪನ್ನು ನೀಡುತ್ತದೆಯೋ! ಅದೇ ರೀತಿ ಸ್ನೇಹವು ಕೂಡ ಪ್ರಕೃತಿಯ ಪ್ರತಿಬಿಂಬ. ಸ್ನೇಹ ಒಂದೇ ಕಡೆ ಮುಖಮಾಡಿ ಹರಿಯುವ ಎರಡು ನದಿಗಳಲ್ಲಿ ಹೊರಟ ದೋಣಿಗಳು ಒಂದೇ ಕಡಲನ್ನ ಸೇರುಬಹುದು.

ಸ್ನೇಹಕ್ಕೆ ವಯೋಮಿತಿಯಿಲ್ಲ
ಸ್ನೇಹಕ್ಕೆ ವಯೋಮಿತಿಯಿಲ್ಲ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ವಯಸ್ಸಾಗಿರೋರು ಸ್ನೇಹಿತರಾಗಿರುತ್ತಾರೆ. ತಮ್ಮ ವಯೋಮಾನಕ್ಕೆ ತಕ್ಕಂತೆ ಸ್ನೇಹದ ಸವಿಯನ್ನು ಸವಿಯುತ್ತಾರೆ. ಚಿಕ್ಕ ಮಕ್ಕಳು ತಮ್ಮ ಬಳಿಯಿರುವ ಚಾಕಲೇಟ್, ಸಣ್ಣ ಪುಟ್ಟ ಸಿಹಿ ತಿಂಡಿಗಳನ್ನು ಹಂಚಿಕೊಂಡರೆ, ಯುವಜನತೆ ಹೆಚ್ಚಾಗಿ ಸುತ್ತಾಟ, ಪಬ್ಬು ಪಾರ್ಟಿ, ಡ್ರೀಂಕ್ಸ್, ಸೆಲೆಬ್ರೆಷನ್ಸ್ ನಲ್ಲೇ ಮುಳುಗುತ್ತಾರೆ. ಅದೇ ರೀತಿ ಹಿರಿಯ ಜೀವಗಳು ಬೆಳಗ್ಗೆ ಅಥವಾ ಸಂಜೆ ವಾಕಿಂಗ್ ವೇಳೆ ಸಿಕ್ಕಾಗ ತಮ್ಮ ಬದುಕಿನ ಕಥೆಗಳನ್ನು ವಿನಿಮಯ ಮಾಡಿಕೊಂಡು ಅದರ ಸುಖಾನುಭವವನ್ನು ಅನುಭವಿಸುತ್ತಾರೆ.

ಸ್ನೇಹ ಉಳಿಸಿಕೊಳ್ಳುವ ಪರಿ

* ಸ್ನೇಹದಲ್ಲಿ ನಂಬಿಕೆ, ಪ್ರಾಮಾಣಿಕತೆ ಮುಖ್ಯ
* ತೋರ್ಪಡಿಕೆಯ ಸ್ನೇಹ ಬೇಡ.
* ಸ್ನೇಹವನ್ನು ಪಡೆಯಲು, ದಕ್ಕಿಸಿಕೊಳ್ಳಲು ತಾಳ್ಮೆಯಿಂದ ಮುನ್ನಡೆಯಬೇಕು.
* ಅತಿಯಾದ ನಿರೀಕ್ಷೆಬೇಡ. ನಿರೀಕ್ಷಿ ಅತಿಯಾದರೆ ಒದ್ದಾಡ ಹೆಚ್ಚಾಗುತ್ತದೆ.
* ಸ್ನೇಹಿತರ ಯೋಗ್ಯತೆ ನಿರ್ಣಯಬೇಡ. ಸ್ನೇಹಿತರ ಒಳ್ಳೆಯ ಗುಣಗಳನ್ನು ಮರೆತು ನಕಾರಾತ್ಮಕ ಚಿಂತನೆಯಲ್ಲಿ ಮುಳುಗುತ್ತೀರಿ
* ಸ್ನೇಹವನ್ನು ಉಳಿಸಿಕೊಳ್ಳಬೇಕಾದರೆ ಮೊದಲು ನಾವು ನಾವಾಗಿರಬೇಕು. ಕೆಲ ಬದಲಾವಣೆಗಳಿಗೆ ನಮ್ಮನ್ನು ನಾವು ಬದಲಿಸಿಕೊಂಡರೆ ಅಲ್ಲಿ ಸ್ನೇಹದ ತಾಳ ತಪ್ಪುತ್ತದೆ.

-ವಿಶ್ವನಾಥ್. ಎಸ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com